
ವಿವಿಧ ಸಕಾರಣಗಳಿಗಾಗಿ ಆದಾಯ ತೆರಿಗೆ ಇಲಾಖೆಯು (Income Tax) ಎಲ್ಲಾ ಪ್ಯಾನ್ ಕಾರ್ಡ್ಗಳನ್ನು ಆಧಾರ್ಗೆ ಲಿಂಕ್ ಮಾಡಲು ಪದೇ ಪದೇ ಹೇಳುತ್ತಲೇ ಬಂದಿದೆ. ಈಗಲೂ ಕೂಡ ಬಹಳಷ್ಟು ಜನರು ಪಾನ್ ಮತ್ತು ಆಧಾರ್ ಲಿಂಕ್ ಮಾಡಿಲ್ಲ. ಸರ್ಕಾರ ಹಲವು ಬಾರಿ ಡೆಡ್ಲೈನ್ ಕೊಟ್ಟಿದೆ. ಈಗ ಫೈನಲ್ ಡೆಡ್ಲೈನ್ ಡಿಸೆಂಬರ್ 31ಕ್ಕೆ ಇದೆ. ಅಷ್ಟರೊಳಗೆ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಇನಾಪರೇಟಿವ್ ಆಗುತ್ತದೆ. ಅಂದರೆ, ಅದು ನಿಷ್ಕ್ರಿಯಗೊಳ್ಳುತ್ತದೆ. ಅದರ ಪರಿಣಾಮಗಳು ವಿವಿಧ ಸ್ತರಗಳಲ್ಲಿ ಆಗಬಹುದು.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ 2017ರ ಜುಲೈ 1ರ ನಂತರ ಅಲಾಟ್ ಆಗಿರುವ ಪ್ಯಾನ್ ನಂಬರ್ಗಳೆಲ್ಲವೂ ಆಧಾರ್ಗೆ ಲಿಂಕ್ ಆಗಿರುತ್ತವೆ. ಯಾಕೆಂದರೆ ಆ ಪ್ಯಾನ್ಗೆ ಅರ್ಜಿ ಸಲ್ಲಿಸುವಾಗಲೇ ಕಡ್ಡಾಯವಾಗಿ ಆಧಾರ್ ದಾಖಲೆಯನ್ನು ಪಡೆದಿರಲಾಗುತ್ತದೆ. ಅಲಾಟ್ ಮಾಡುವಾಗಲೇ ಆಧಾರ್ ಅನ್ನು ಲಿಂಕ್ ಮಾಡಲಾಗಿರುತ್ತದೆ.
ಇದನ್ನೂ ಓದಿ: ಸಿಮ್ ವೆರಿಫಿಕೇಶನ್ನಿಂದ ಹಿಡಿದು ಕ್ರೆಡಿಟ್ ಸ್ಕೋರ್ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು
2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ಅಲಾಟ್ ಮಾಡುವಾಗ ಆಧಾರ್ ದಾಖಲೆ ಪಡೆಯುವುದು ಕಡ್ಡಾಯ ಇರಲಿಲ್ಲ. ಕೆಲವರು ಆಧಾರ್ ದಾಖಲೆ ಕೊಟ್ಟಿರುತ್ತಿದ್ದರು. ಕೆಲವರು ವೋಟರ್ ಐಡಿ ಇತ್ಯಾದಿ ದಾಖಲೆ ಕೊಡುತ್ತಿದ್ದರು. ಹೀಗಾಗಿ, ಡೂಪ್ಲಿಕೇಟ್ ಪ್ಯಾನ್ಗಳು ಹೆಚ್ಚಾಗುತ್ತಿದ್ದುವು. ಇದನ್ನು ತಪ್ಪಿಸಲೆಂದು ಸರ್ಕಾರವು ಪ್ಯಾನ್ಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?
ಇದನ್ನು ವ್ಯಾಲಿಡೇಟ್ ಮಾಡಬೇಕು. ನಂತರ, ಇ-ಪೇ ಟ್ಯಾಕ್ಸ್ ಪೇಜ್ ಮೂಲಕ 1,000 ರೂ ಪೆನಾಲ್ಟಿ ಕಟ್ಟಬೇಕಾಗುತ್ತದೆ. ದಂಡ ಕಟ್ಟಿದ ಬಳಿಕ ವಾಪಸ್ ಇಫೈಲಿಂಗ್ ಪೋರ್ಟಲ್ಗೆ ಬಂದು ಮತ್ತೊಮ್ಮೆ ಪ್ಯಾನ್, ಆಧಾರ್ ವಿವರ ತುಂಬಿಸಿ. ಮೊಬೈಲ್ಗೆ ಬರುವ ಒಟಿಪಿ ಹಾಕಿ, ವ್ಯಾಲಿಡೇಟ್ ಮಾಡಿ. ಈಗ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ