Aadhaar PAN Link: ಪ್ಯಾನ್ ಆಧಾರ್ ಲಿಂಕ್; ಚಲನ್ ಡೌನ್‌ಲೋಡ್ ಮಾಡಲು ಸಾಧ್ಯವಾಗದಿದ್ದರೆ ಸಮಸ್ಯೆ ಇಲ್ಲ

|

Updated on: Jun 30, 2023 | 10:48 PM

ಲಾಗಿನ್ ಆದ ನಂತರ ಪೋರ್ಟಲ್‌ನ ‘ಇ-ಪೇ ಟ್ಯಾಕ್ಸ್' ಟ್ಯಾಬ್‌ನಲ್ಲಿ ಚಲನ್ ಪಾವತಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಪಾವತಿ ಯಶಸ್ವಿಯಾದರೆ, ಪ್ಯಾನ್ ಹೊಂದಿರುವವರು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಮುಂದುವರಿಯಬಹುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

Aadhaar PAN Link: ಪ್ಯಾನ್ ಆಧಾರ್ ಲಿಂಕ್; ಚಲನ್ ಡೌನ್‌ಲೋಡ್ ಮಾಡಲು ಸಾಧ್ಯವಾಗದಿದ್ದರೆ ಸಮಸ್ಯೆ ಇಲ್ಲ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ​ಗಳನ್ನು ಜೋಡಣೆ (Aadhaar-PAN Linking) ಮಾಡಲು ಜೂನ್ 30 ಕೊನೆಯ ದಿನವಾಗಿದ್ದು, ಅಂತಿಮ ಹಂತದಲ್ಲಿ ಲಿಂಕ್ ಮಾಡಲು ಮುಂದಾದವರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಈ ಮಧ್ಯೆ, ಅನೇಕ ಮಂದಿಗೆ ಆನ್​ಲೈನ್ ಮೂಲಕ ಜೋಡಣೆ ಪ್ರಕ್ರಿಯೆ ನಡೆಸುತ್ತಿರುವಾಗ ಶುಲ್ಕ ಪಾವತಿ ಮಾಡಿದ ನಂತರ ಚಲನ್ ಡೌನ್​ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ವಿಚಾರ ಆದಾಯ ತೆರಿಗೆ ಇಲಾಖೆ  (Income Tax Dept) ಗಮನಕ್ಕೆ ಬಂದಿದ್ದು, ಆಧಾರ್ ಪ್ಯಾನ್ ಜೋಡಣೆಗೆ ಚಲನ್ ಡೌನ್​ಲೋಡ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಶುಲ್ಕ ಪಾವತಿ ಮಾಡಿದ ಬಗ್ಗೆ ‘e-pay tax’ನಲ್ಲಿ ಪರಿಶೀಲಿಸಿ ಜೋಡಣೆ ಪ್ರಕ್ರಿಯೆ ಮುಂದುವರಿಸಬಹುದು ಎಂದು ಇಲಾಖೆ ತಿಳಿಸಿದ್ದು, ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಆಧಾರ್ ಪ್ಯಾನ್ ಲಿಂಕ್ ಮಾಡಲು ಶುಲ್ಕವನ್ನು ಪಾವತಿಸಿದ ನಂತರ ಚಲನ್ ಅನ್ನು ಡೌನ್‌ಲೋಡ್ ಮಾಡಲು ತೊಂದರೆ ಎದುರಿಸುತ್ತಿರುವ ನಿದರ್ಶನಗಳು ಗಮನಕ್ಕೆ ಬಂದಿವೆ. ಲಾಗಿನ್ ಆದ ನಂತರ ಪೋರ್ಟಲ್‌ನ ‘ಇ-ಪೇ ಟ್ಯಾಕ್ಸ್’ ಟ್ಯಾಬ್‌ನಲ್ಲಿ ಚಲನ್ ಪಾವತಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಪಾವತಿ ಯಶಸ್ವಿಯಾದರೆ, ಪ್ಯಾನ್ ಹೊಂದಿರುವವರು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಮುಂದುವರಿಯಬಹುದು ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದೆ.

ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದಲ್ಲದೆ, ಪ್ಯಾನ್ ಹೊಂದಿರುವವರು ಪಾವತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೂಡಲೇ ಚಲನ್‌ನ ಪ್ರತಿಯನ್ನು ಇಮೇಲ್ ಮೂಲಕ ಈಗಾಗಲೇ ಪ್ಯಾನ್ ಕಾರ್ಡ್​​ದಾರರಿಗೆ ಕಳುಹಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: Aadhaar-PAN Updates: ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಆಗುತ್ತಾ?


ಶುಲ್ಕ ಪಾವತಿ ಮತ್ತು ಜೋಡಣೆಗೆ ಸಂಬಂಧಿಸಿದ ಆನ್​ಲೈನ್ ಪ್ರಕ್ರಿಯೆಗಳೆಲ್ಲವೂ ಮುಗಿದಿದ್ದು, ಜೋಡಣೆ ಆಗಿಲ್ಲವೆಂದಾದರೆ ಇಂಥ ಪ್ರಕರಣಗಳನ್ನು ವಿಶೇಷವೆಂದು ಪರಿಗಣಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.​

ಆಧಾರ್ ಪ್ಯಾನ್ ಜೋಡಣೆಗೆ ಈ ಹಿಂದೆ ಹಲವು ಬಾರಿ ಆದಾಯ ತೆರಿಗೆ ಇಲಾಖೆ ಗಡುವು ನೀಡಿತ್ತು. ಕೊನೇ ಕ್ಷಣದಲ್ಲಿ ಡೆಡ್​ಲೈನ್​ ಅನ್ನು ವಿಸ್ತರಣೆ ಮಾಡಲಾಗುತ್ತಿತ್ತು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Fri, 30 June 23