
ಮಳೆಗಾಲ ಅಥವಾ ಮುಂಗಾರು (Monsoon) ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ಕಡಿಮೆಯಿದ್ದರೂ, ತೇವಾಂಶ (Humidity) ಹೆಚ್ಚಿರುವುದರಿಂದ ಮನೆಯೊಳಗೆ ವಿಪರೀತ ಧಗೆ, ಉರಿ ಹಾಗೂ ಚರ್ಮದಲ್ಲಿ ಜಿಗುಟುತನ (Sticky feeling) ಅನುಭವಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನವರು ಎಸಿಯನ್ನು ‘Cool Mode’ನಲ್ಲೇ ಚಾಲನೆ ಮಾಡಿ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಕೊಠಡಿ ತಣ್ಣಗಾಗಬಹುದೇ ಹೊರತು ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುವುದಿಲ್ಲ. ಮೈಗೆ ಕಿರಿಕಿರಿ ತಪ್ಪುವುದಿಲ್ಲ.
ಇದಕ್ಕೆ ಸರಳ ಹಾಗೂ ಪರಿಣಾಮಕಾರಿ ಪರಿಹಾರ ಎಂದರೆ ನಿಮ್ಮ ಎಸಿಯನ್ನು ‘ಡ್ರೈ ಮೋಡ್’ (Dry Mode) ಗೆ ಬದಲಾಯಿಸುವುದು. ಇದು ಮನೆಯಲ್ಲಿ ತಂಪಾದ ವಾತಾವರಣ ನೀಡುವುದರ ಜೊತೆಗೆ ವಿದ್ಯುತ್ ಬಿಲ್ ಅನ್ನು ಸಹ ಗಣನೀಯವಾಗಿ ಕಡಿಮೆ ಮಾಡುತ್ತದೆ. ಮುಂಗಾರು ಸಂದರ್ಭದಲ್ಲಿ ಇದು ಉತ್ತಮ ಆಯ್ಕೆ ಎನಿಸುತ್ತದೆ.
ಎಸಿ ರಿಮೋಟ್‌ನಲ್ಲಿ ಹನಿಯ (Water Drop) ಚಿಹ್ನೆ ಹೊಂದಿರುವ ‘ಡ್ರೈ ಮೋಡ್’ ಮುಖ್ಯವಾಗಿ ಡಿಹ್ಯೂಮಿಡಿಫೈಯರ್ (Dehumidifier) ಆಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್ಗೆ ಚುಕ್ಕಾಣಿ
ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ
ಸಾಮಾನ್ಯವಾಗಿ 24°C ನಿಂದ 26°C ತಾಪಮಾನದೊಂದಿಗೆ ಡ್ರೈ ಮೋಡ್ ಬಳಸುವುದು ಸೂಕ್ತ. ಆದರೆ, ಹೊರಗಿನ ತಾಪಮಾನ 35°C ಗಿಂತ ಹೆಚ್ಚಿರುವ ವಿಪರೀತ ಬಿಸಿಲಿನ ದಿನಗಳಲ್ಲಿ ‘ಕೂಲ್ ಮೋಡ್’ ಬಳಸುವುದೇ ಸೂಕ್ತ; ಏಕೆಂದರೆ ಡ್ರೈ ಮೋಡ್ ಕೇವಲ ತೇವಾಂಶ ಹೆಚ್ಚಿರುವ (ಮಳೆಗಾಲದ) ದಿನಗಳಲ್ಲಿ ಮಾತ್ರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ