AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್​ಗೆ ಚುಕ್ಕಾಣಿ

Leadership change in Infosys: ಇನ್ಫೋಸಿಸ್​ನಲ್ಲಿ 9 ವರ್ಷದ ನಂತರ ನಾಯಕತ್ವ ಬದಲಾವಣೆ ಆಗುತ್ತಿದೆ. ಸಿಇಒ ಸಲಿಲ್ ಪಾರೇಕ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೂ ಅವರು ಇರಲಿದ್ದಾರೆ. ಇನ್ಫೋಸಿಸ್​ನಲ್ಲೇ 30 ವರ್ಷದಿಂದ ಇರುವ ಆಶಿಶ್ ಕುಮಾರ್ ದಾಶ್ ನೂತನ ಸಿಇಒ ಆಗಲಿದ್ದಾರೆ.

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್​ಗೆ ಚುಕ್ಕಾಣಿ
ಇನ್ಫೋಸಿಸ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 23, 2026 | 6:42 PM

Share

ಮುಖ್ಯಾಂಶಗಳು

  • ಇನ್ಫೋಸಿಸ್​ನಲ್ಲಿ 9 ವರ್ಷದ ನಂತರ ನಾಯಕತ್ವ ಬದಲಾವಣೆ ಆಗುತ್ತಿದೆ.
  • ಸಿಇಒ ಸಲಿಲ್ ಪಾರೇಕ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
  • ಇನ್ಫೋಸಿಸ್​ನಲ್ಲೇ 30 ವರ್ಷದಿಂದ ಇರುವ ಆಶಿಶ್ ಕುಮಾರ್ ದಾಶ್ ನೂತನ ಸಿಇಒ ಆಗಲಿದ್ದಾರೆ.

ಬೆಂಗಳೂರು, ಜುಲೈ 23: ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆ ಇನ್ಫೋಸಿಸ್ (Infosys) ತನ್ನ ಮುಖಂಡತ್ವದಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. ಪ್ರಸ್ತುತ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿರುವ ಸಲಿಲ್ ಪಾರೇಕ್ ಅವರು 2027ರ ಮಾರ್ಚ್ 31 ರಂದು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದು, ಸಂಸ್ಥೆಯ ಹಿರಿಯ ನಾಯಕ ಆಶಿಶ್ ಕುಮಾರ್ ದಾಶ್ (Ashiss Kumar Dash) ಅವರನ್ನು ನೂತನ ಸಿಇಒ (CEO Designate) ಆಗಿ ಆಡಳಿತ ಮಂಡಳಿ ನೇಮಕ ಮಾಡಿದೆ. ಆಶಿಶ್ ಕುಮಾರ್ ದಾಶ್ ಅವರು 2027ರ ಏಪ್ರಿಲ್ 1 ರಿಂದ 5 ವರ್ಷಗಳ ಅವಧಿಗೆ ಇನ್ಫೋಸಿಸ್‌ನ ನೂತನ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸುದೀರ್ಘ ಸೇವೆ ಸಲ್ಲಿಸಿದ ಸಲಿಲ್ ಪಾರೇಕ್

2018 ರಲ್ಲಿ ಇನ್ಫೋಸಿಸ್​​ಗೆ ನೇರವಾಗಿ ಸಿಇಒ ಆಗಿ ಸೇರಿದ ಸಲಿಲ್ ಪಾರೇಕ್ ಅವರು 9 ವರ್ಷ ಆ ಹುದ್ದೆಯಲ್ಲಿದ್ದಂತಾಗುತ್ತದೆ. ಸಂಸ್ಥಾಪಕರು ಬಿಟ್ಟರೆ ಸಿಇಒ ಸ್ಥಾನದಲ್ಲಿ ಅತಿಹೆಚ್ಚು ಅವಧಿ ಇದ್ದ ಗೌರವ ಸಲೀಲ್ ಪಾರೇಕ್ ಅವರದ್ದಾಗಿದೆ.

ಸಲೀಲ್ ಪಾರೇಕ್ ಅವರು ತಮ್ಮ ಆಡಳಿತಾವಧಿಯಲ್ಲಿ ಇನ್ಫೋಸಿಸ್‌ನ ವಾರ್ಷಿಕ ಆದಾಯವನ್ನು $10 ಬಿಲಿಯನ್‌ನಿಂದ $20 ಬಿಲಿಯನ್‌ಗಿಂತಲೂ (ಸುಮಾರು ₹1.90 ಲಕ್ಷ ಕೋಟಿ) ಹೆಚ್ಚಿಸಿದ ಸಾಧನೆಯೊಂದಿಗೆ ನಿರ್ಗಮಿಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ

“ಇನ್ಫೋಸಿಸ್‌ನಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸಿದ್ದು ನನಗೆ ಸಿಕ್ಕ ಗೌರವ. ಮುಂಬರುವ ತಿಂಗಳುಗಳಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಆಶಿಶ್ ದಾಶ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ” ಎಂದು ಪಾರೇಕ್ ಹೇಳಿದ್ದಾರೆ.

ಇನ್ಫೋಸಿಸ್​ನ ಹಳೆಯ ಹುಲಿ ಆಶಿಶ್

ಐಐಟಿ ಖರಗ್‌ಪುರ ಹಳೆಯ ವಿದ್ಯಾರ್ಥಿಯಾಗಿರುವ ಆಶಿಶ್ ಕುಮಾರ್ ದಾಶ್ ಅವರು ಇನ್ಫೋಸಿಸ್‌ನಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಗ್ಲೋಬಲ್ ಹೆಡ್ (ಎನರ್ಜಿ, ಯುಟಿಲಿಟೀಸ್ ಅಂಡ್ ಸಸ್ಟೇನಬಿಲಿಟಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಂದನ್ ನಿಲೇಕಣಿ ಪ್ರತಿಕ್ರಿಯೆ

ಇನ್ಫೋಸಿಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರು ಮಾತನಾಡಿ, “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಯುಗದಲ್ಲಿ ಇನ್ಫೋಸಿಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಕಂಪನಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಆಂತರಿಕ ನಾಯಕರಾದ ಆಶಿಶ್ ದಾಶ್ ಸೂಕ್ತ ಅಭ್ಯರ್ಥಿ. ಸಲಿಲ್ ಪಾರೇಕ್ ಅವರ ಆಡಳಿತಾವಧಿಯಲ್ಲಿ ಇನ್ಫೋಸಿಸ್ ಡಿಜಿಟಲ್ ಮತ್ತು AI ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬಲವಾದ ಅಡಿಪಾಯ ನಿರ್ಮಿಸಿದೆ” ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಐಟಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ವೇಗವಾಗಿ ನಡೆಯುತ್ತಿದ್ದು, ಆಶಿಶ್ ದಾಶ್ ಅವರ ನೇತೃತ್ವದಲ್ಲಿ ಇನ್ಫೋಸಿಸ್ ತನ್ನ ‘AI-ಫಸ್ಟ್ Strategy’ ಮತ್ತು ಜಾಗತಿಕ ಉದ್ಯಮ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸಲಿದೆ. ಸಲಿಲ್ ಪಾರೇಕ್ ಅವರು 2027ರ ಮಾರ್ಚ್‌ವರೆಗೆ ತಮ್ಮ ಹುದ್ದೆಯಲ್ಲಿದ್ದು, ಸುಲಭ ಅಧಿಕಾರ ಹಸ್ತಾಂತರಕ್ಕೆ ನೆರವಾಗಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Thu, 23 July 26

Follow Us
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ