2028ರ ಚುನಾವಣೆ ಗೆಲ್ಲಲು ಬಿಜೆಪಿ ಭರ್ಜರಿ ಪ್ಲ್ಯಾನ್:ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಯಾತ್ರೆ
2028ರ ವಿಧಾನಸಭೆ ಚುನಾವಣೆ ಗೆಲ್ಲಲು ಆಡಳಿತರೂಢ ಕಾಂಗ್ರೆಸ್ ಹಲವು ತಂತ್ರಗಾರಿಕೆ ಹೆಣೆಯುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ 2028ರ ಚುನಾವಣೆಯಲ್ಲಿ ಗೆದ್ದು ಅಧಿಕಾರಿಕ್ಕೇರಬೇಕೆಂದು ಈಗಗಿನಿಂದಲೇ ಭರ್ಜರಿ ಪ್ಲ್ಯಾನ್ ಮಾಡಿದೆ. ಹೌದು...ಬೂತ್ ಮಟ್ಟದಿಂದಲೇ ಮತಬೇಟೆ ಆರಂಭಿಸಿದ ವಿಪಕ್ಷ ಬಿಜೆಪಿ, ಬಳ್ಳಾರಿ ಚಲೋ ಯಶಸ್ವಿ ಬಳಿಕ ಮತ್ತೊಂದು ಯಾತ್ರೆಗೆ ಸಜ್ಜಾಗಿದ್ದು, ಬೂತ್ ವಿಜಯ ಸಂಕಲ್ಪ ಯಾತ್ರೆ ಆರಂಭಿಸಲು ಮುಂದಾಗಿದೆ.
ಬೆಂಗಳೂರು, ಸೆಪ್ಟೆಂಬರ್ 25): 2028ರ ವಿಧಾನಸಭೆ ಚುನಾವಣೆ ಗೆಲ್ಲಲು ಆಡಳಿತರೂಢ ಕಾಂಗ್ರೆಸ್ ಹಲವು ತಂತ್ರಗಾರಿಕೆ ಹೆಣೆಯುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ 2028ರ ಚುನಾವಣೆಯಲ್ಲಿ ಗೆದ್ದು ಅಧಿಕಾರಿಕ್ಕೇರಬೇಕೆಂದು ಈಗಗಿನಿಂದಲೇ ಭರ್ಜರಿ ಪ್ಲ್ಯಾನ್ ಮಾಡಿದೆ. ಹೌದು…ಬೂತ್ ಮಟ್ಟದಿಂದಲೇ ಮತಬೇಟೆ ಆರಂಭಿಸಿದ ವಿಪಕ್ಷ ಬಿಜೆಪಿ, ಬಳ್ಳಾರಿ ಚಲೋ ಯಶಸ್ವಿ ಬಳಿಕ ಮತ್ತೊಂದು ಯಾತ್ರೆಗೆ ಸಜ್ಜಾಗಿದ್ದು, ಬೂತ್ ವಿಜಯ ಸಂಕಲ್ಪ ಯಾತ್ರೆ ಆರಂಭಿಸಲು ಮುಂದಾಗಿದೆ. ಹೌದು….ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಅಕ್ಟೋಬರ್ 1ರಿಂದ 10 ದಿನ ಬೂತ್ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು, ಕೋಲಾರದ ಕುರುಡುಮಲೆಯಿಂದ ವಿವಿಧ ಜಿಲ್ಲೆಗಳತ್ತ ಈ ಸಂಕಲ್ಪ ಯಾತ್ರೆ ಸಾಗಲಿದೆ. 90 ದಿನದೊಳಗೆ 224 ವಿಧಾನಸಭಾ ಕ್ಷೇತ್ರದಾದ್ಯಂತ ಯಾತ್ರೆಯ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 16 ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಯಾತ್ರೆ ನಡೆಯಲಿದೆ.

