ಕಾಂಗೋದಲ್ಲಿ ವಿಮಾನ ಪತನಗೊಂಡು 14 ಮಂದಿ ದುರ್ಮರಣ: ಇಬ್ಬರು ಹಿರಿಯ ಸೇನಾಧಿಕಾರಿಗಳೂ ಸಾವು
ಕಾಂಗೋದಲ್ಲಿ ನಡೆದ ಭೀಕರ ವಿಮಾನ ಪತನದಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಒಟ್ಟು 14 ಜನರು ದುರ್ಮರಣ ಹೊಂದಿದ್ದಾರೆ. ತಾಂತ್ರಿಕ ದೋಷದಿಂದ ಈ ಭೀಕರ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆಯಾದರೂ, ನಾಗರಿಕ ವಿಮಾನಯಾನ ಪ್ರಾಧಿಕಾರದ ಆಡಳಿತ ಮಂಡಳಿ ಅಧ್ಯಕ್ಷರು ಮಾತ್ರ ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಕಿನ್ಶಾಸಾ, ಸೆಪ್ಟೆಂಬರ್ 26: ವಿಮಾನ ಪತನಗೊಂಡ ಪರಿಣಾಮ ಇಬ್ಬರು ಹಿರಿಯ ಸೇನಾ ಅಧಿಕಾರಿಗಳೂ ಸೇರಿದಂತೆ 14 ಮಂದಿ ದುರ್ಮರಣ ಹೊಂದಿರುವ ಘಟನೆ ಕಾಂಗೋದಲ್ಲಿ ನಡೆದಿದೆ. ಈ ಬಗ್ಗೆ ಕಾಂಗೋ ಸೇನೆ ದೃಢಪಡಿಸಿದ್ದು, ಅವಘಡದಲ್ಲಿ ಮಿಲಿಟರಿ ಕೋರ್ಟ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಲಾಯಿ ಟಿಯೆಂಡೆ ಹಾಗೂ ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಕೂಡ ಮೃತಪಟ್ಟಿರೋದಾಗಿ ಮಾಹಿತಿ ನೀಡಿದೆ. ಇಬ್ಬರು ಅಧಿಕಾರಿಗಳ ಜೊತೆಗೆ, ನಿಯೋಗದ 12 ಸದಸ್ಯರು ಹಾಗೂ ವಿಮಾನದ ಸಿಬ್ಬಂದಿಯೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕಾಂಗೋ ಸೇನೆಯ ವಕ್ತಾರ ಮೇಜರ್ ಜನರಲ್ ಎಫೋಮಿ ಎಕೆಂಗೆ ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಎಲ್ಲರೂ ಸಾವು
TRACEP Let L-410 crashes in Kenge, DRC — 16 people reportedly killed
More details are emerging following the crash of a TRACEP Let L-410 in the Kenge area of the Democratic Republic of the Congo.
According to the Chairman of the Board of Régie des Voies Aériennes (RVA), the… pic.twitter.com/uMb5Htf6aM
— FL360aero (@fl360aero) September 25, 2026
ಸ್ಥಳೀಯ ಅಧಿಕಾರಿಗಳ ಪ್ರಕಾರ, ವಿಮಾನವು ನೈರುತ್ಯ ಕಾಂಗೋದ ಕಿಕ್ವಿಟ್‌ನಿಂದ ರಾಜಧಾನಿ ಕಿನ್ಶಾಸಾಗೆ ಹಿಂದಿರುಗುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಂಗೆ ಪ್ರದೇಶದಲ್ಲಿ ಪತನಗೊಂಡಿದೆ. ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎನ್ನಲಾಗಿದೆ. ಆದರೆ ನಾಗರಿಕ ವಿಮಾನಯಾನ ಪ್ರಾಧಿಕಾರದ ಆಡಳಿತ ಮಂಡಳಿ ಅಧ್ಯಕ್ಷ ಗ್ರಿಫೋನ್ ಕಿನ್-ಕಿಯೆ ಮುಲುಂಬಾ, ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಹಡಗು, ನಾವಿಕರ ಮೇಲಿನ ದಾಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’; ವಿಶ್ವಸಂಸ್ಥೆಯಲ್ಲಿ ಸಚಿವ ಜೈಶಂಕರ್ ಖಡಕ್ ಸಂದೇಶ
ಕಳೆದ ವರ್ಷದಿಂದ ಕಾಂಗೋದ ಪೂರ್ವ ಭಾಗದಲ್ಲಿ ರುವಾಂಡಾ ಬೆಂಬಲಿತ M23 ಬಂಡುಕೋರ ಗುಂಪು ಸೇರಿದಂತೆ ಹಲವು ಬಂಡುಕೋರ ಸಂಘಟನೆಗಳ ವಿರುದ್ಧ ಕಾಂಗೋ ಸೇನೆ ಹೋರಾಡುತ್ತಿದೆ. ಬಂಡುಕೋರರು ನಡೆಸಿದ ಸರಣಿ ದಾಳಿಗಳ ಬಳಿಕ ಹಲವು ಪ್ರಮುಖ ನಗರಗಳು ಅವರ ವಶವಾಗಿದ್ದವು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Sat, 26 September 26




