AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ದಸರಾ ಉದ್ಘಾಟಕರಾಗಿರುವ ಗವಿ ಸಿದ್ದೇಶ್ವರ ಶ್ರೀಗಳಿಗೆ ಬಹಿರಂಗ ಪತ್ರ; ಕಾರ್ಖಾನೆಗಳ ಮಾಲಿನ್ಯ ತಡೆಗೆ ಒತ್ತಡ ತರಲು ಮನವಿ

ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಕಾರ್ಖಾನೆ ವಿರೋಧಿ ಹೋರಾಟಗಾರರು ಬಹಿರಂಗ ಪತ್ರ ಬರೆದಿದ್ದಾರೆ. ಕೊಪ್ಪಳದ 22 ಹಳ್ಳಿಗಳಲ್ಲಿ ಬೃಹತ್ ಕಾರ್ಖಾನೆಗಳಿಂದ ಉಂಟಾಗಿರುವ ತೀವ್ರ ಪರಿಸರ ಮಾಲಿನ್ಯ, ಕೃಷಿ ನಾಶ ಹಾಗೂ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕೆಂದು ಸವಿನಯ ವಿನಂತಿ ಮಾಡಿಕೊಂಡಿದ್ದಾರೆ.

ಕೊಪ್ಪಳ: ದಸರಾ ಉದ್ಘಾಟಕರಾಗಿರುವ ಗವಿ ಸಿದ್ದೇಶ್ವರ ಶ್ರೀಗಳಿಗೆ ಬಹಿರಂಗ ಪತ್ರ; ಕಾರ್ಖಾನೆಗಳ ಮಾಲಿನ್ಯ ತಡೆಗೆ ಒತ್ತಡ ತರಲು ಮನವಿ
ಗವಿ ಸಿದ್ದೇಶ್ವರ ಸ್ವಾಮೀಜಿ
ಶಿವಕುಮಾರ್ ಪತ್ತಾರ್
| Edited By: |

Updated on:Sep 26, 2026 | 8:40 AM

Share

ಮುಖ್ಯಾಂಶಗಳು

  • ದಸರಾ ಉದ್ಘಾಟಕ ಗವಿಸಿದ್ದೇಶ್ವರ ಶ್ರೀಗಳಿಗೆ ಕಾರ್ಖಾನೆ ವಿರೋಧಿ ಹೋರಾಟಗಾರರಿಂದ ಬಹಿರಂಗ ಪತ್ರ.
  • ಕೊಪ್ಪಳದ ಪರಿಸರ ಮಾಲಿನ್ಯ ತಡೆಗೆ ಸಿಎಂ ಮೇಲೆ ಒತ್ತಡ ತರಲು ಮನವಿ.
  • ಬೃಹತ್ ಕಾರ್ಖಾನೆಗಳಿಂದ ಕೃಷಿ ನಾಶ ಹಾಗೂ ರೋಗಗಳ ಭೀತಿ ಹೆಚ್ಚಾಗಿದೆ.

ಕೊಪ್ಪಳ, ಸೆಪ್ಟೆಂಬರ್ 26: ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಕೊಪ್ಪಳದ ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಕಾರ್ಖಾನೆ ವಿರೋಧಿ ಹೋರಾಟಗಾರರು ಬಹಿರಂಗ ಪತ್ರ ಬರೆದಿದ್ದಾರೆ. ಅಭಿನಂದನೆ ಜತೆಗೆ ಕೊಪ್ಪಳದ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಂತೆ ವಿನಂತಿಸಿದ್ದಾರೆ.

ಪತ್ರದಲ್ಲೇನಿದೆ?

‘ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ’ ಹಾಗೂ ‘ಪರಿಸರ ಹಿತರಕ್ಷಣಾ ವೇದಿಕೆ’ (ಜಂಟಿ ಕ್ರಿಯಾ ವೇದಿಕೆ) ಶ್ರೀಗಳಿಗೆ ಈ ಮನವಿ ಪತ್ರ ಸಲ್ಲಿಸಿದೆ.ಮನುಷ್ಯ ಬದುಕಬೇಕಾದರೆ ಉತ್ತಮ ಪರಿಸರ ಮುಖ್ಯ. ಕೊಪ್ಪಳ, ಗಿಣಿಗೇರಿ, ಹಿರೇಬಗನಾಳ, ಕಾಸನಕಂಡಿ, ಬೇವಿನಹಳ್ಳಿ, ಕುಣಿಕೇರಿ, ಹಾಲವರ್ತಿ ಹತ್ತಿರದ 22 ಹಳ್ಳಿಗಳಲ್ಲಿ 28 ಮಾಲಿನ್ಯಕಾರಿ ಬೃಹತ್ ಕಾರ್ಖಾನೆಗಳಿಂದ ಪರಿಸರ ಸಂಪೂರ್ಣ ನಾಶವಾಗಿದೆ ಇಲ್ಲಿ ಕೃಷಿ ಹಾಳಾಗಿದೆ. ಇಲ್ಲಿನ ಜನರಿಗೆ ಭಯಾನಕ ರೋಗಗಳು ಬಾಧಿಸುತ್ತಿವೆ. ಕ್ಯಾನ್ಸರ್ ರೋಗ ನಿಧಾನವಾಗಿ ಹೆಚ್ಚಾಗುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಕೊಪ್ಪಳ ಗವಿ ಸಿದ್ದೇಶ್ವರ ಸ್ವಾಮೀಜಿ ಆಯ್ಕೆ

ತುಂಗಭದ್ರಾ ನದಿ ಮಾಲಿನ್ಯ ತಡೆ ಸೇರಿ ಹಲವು ಆಗ್ರಹ

ಬಲ್ನೋಟ ಅತಿಕ್ರಮಣದಿಂದ ಬಸಾಪುರ ಕೆರೆಯನ್ನು ಜನ ಜಾನುವಾರಗಳಿಗೆ ಮುಕ್ತ ಮಾಡಬೇಕಿದೆ. ತುಂಗಭದ್ರಾ ಜಲಾಶಯ ನದಿ ಈ ಕಾರಖಾನೆಗಳ ತ್ಯಾಜ್ಯದಿಂದ ಮಾಲಿನ್ಯವಾಗಿದ್ದಲ್ಲದೆ ಈ ನೀರನ್ನು ಯಥೇಚ್ಛವಾಗಿ ಕಾರ್ಖಾನೆಗಳು ಬಳಸಿಕೊಂಡು ರೈತರ ಭೂಮಿಗೆ ನೀರಿನ ಕೊರತೆಯಾಗಿದೆ. ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಏಮ್ಸ್ ಅಥವಾ ಐಎಂಎ ಸ್ವಾಯತ್ತ ಸಂಸ್ಥೆಗಳ ಮೂಲಕ ಬಾಧಿತ ಹಳ್ಳಿ ಜನರ ಆರೋಗ್ಯ ಸಮೀಕ್ಷೆಯಾಗಬೇಕು. ಐಐಎಸ್ಸಿ ಸಂಸ್ಥೆ ಮೂಲಕ ಪರಿಸರ ಅಧ್ಯಯನ ನಡೆಸಬೇಕು. ಇದಲ್ಲದೇ ಮುಖ್ಯ ಮಂತ್ರಿಗಳಿಗೆ ಕೊಪ್ಪಳ ಜನರ ಪರವಾಗಿ ಈ ಕಾರ್ಖಾನೆಗಳ ಮೇಲೆ ತುರ್ತಾಗಿ ಮಾಲಿನ್ಯ ನಿಯಂತ್ರಣದ ಕ್ರಮ ಜರುಗಿಸಬೇಕೆಂದು, ಬಟ್ಟೋಟ ಕಾರಖಾನೆ ವಿಸ್ತರಣೆಗೆ ಶಾಶ್ವತವಾಗಿ ತಡೆ ನೀಡಬೇಕೆಂದು, ಒತ್ತಡ ತರಬೇಕೆಂದು ಶ್ರೀಗಳಲ್ಲಿ ಹೋರಾಟಗಾರರು ಈ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Sat, 26 September 26

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More