ಗೂಗಲ್ನಿಂದ ‘ಪ್ರಾಜೆಕ್ಟ್ ಸನ್‌ಕ್ಯಾಚರ್’; ಬಾಹ್ಯಾಕಾಶದಲ್ಲಿ ನಡೆಯಲಿದೆ ಟಿಪಿಯು ಪರೀಕ್ಷೆ; ಡಾಟಾ ಸೆಂಟರ್ಸ್ ಸಮಸ್ಯೆ ನಿವಾರಣೆಯತ್ತ ಹೆಜ್ಜೆ
ಭೂಮಿಯ ಮೇಲೆ ವಿಪರೀತವಾಗಿ ವಿದ್ಯುತ್ ಮತ್ತು ನೀರು ಬೇಡುವ ಡಾಟಾ ಸೆಂಟರ್ಗಳ ದಾಹ ತಣಿಸಲು ಮನುಷ್ಯರ ಹೊಸ ಪ್ರಯತ್ನ ನಡೆದಿದೆ. ಗೂಗಲ್ ಸಂಸ್ಥೆ ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್ ನಿರ್ಮಿಸುವ ಪ್ರಯೋಗ ಮಾಡುತ್ತಿದೆ. ಪ್ರಾಜೆಕ್ಟ್ ಸನ್ ಕ್ಯಾಚರ್ನಲ್ಲಿ ಒಂದು ಸೆಟಿಲೈಟ್ನಲ್ಲಿ ಟಿಪಿಯುವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಪರೀಕ್ಷಿಸಲು ನಿರ್ಧರಿಸಿದೆ.

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 25: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ನೂತನ ಯೋಜನೆ ‘ಪ್ರಾಜೆಕ್ಟ್ ಸನ್‌ಕ್ಯಾಚರ್’ (Project Suncatcher) ಅನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿ ಗೂಗಲ್ ತನ್ನ AI ಪ್ರೊಸೆಸರ್ ಆದ ಟಿಪಿಯುಗಳನ್ನು (Tensor Processing Units – TPUs) ಬಾಹ್ಯಾಕಾಶದಲ್ಲಿ ಪರೀಕ್ಷಿಸಲು ಮತ್ತು ಎಐ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಮೂಲಸೌಕರ್ಯವನ್ನು ವಿಸ್ತರಿಸಲು ಮುಂದಾಗಿದೆ. ಅದಕ್ಕಾಗಿ, ಒಂದು ಪ್ರೋಟೋಟೈಪ್ ಸೆಟಿಲೈಟ್ ಅನ್ನು ಹಾರಿಬಿಡುತ್ತಿದ್ದಾರೆ.
ಸದ್ಯ ಭೂಮಿಯ ಮೇಲೆ ನಿರ್ಮಿಸಲಾಗುತ್ತಿರುವ ಡಾಟಾ ಸೆಂಟರ್ಗಳಿಗೆ (Data Centers) ಸಿಕ್ಕಾಪಟ್ಟೆ ವಿದ್ಯುತ್ ಮತ್ತು ನೀರಿನ ಅವಶ್ಯಕತೆ ಇದೆ. ಈ ಹೊರೆಯನ್ನು ತಗ್ಗಿಸಲು ಮತ್ತು ನಿರಂತರ ಸೌರಶಕ್ತಿ ಬಳಸಿಕೊಂಡು ಎಐ ಪ್ರೊಸೆಸಿಂಗ್ ನಡೆಸಲು ಗೂಗಲ್ ಈ ಪ್ರಯೋಗವನ್ನು ಹಮ್ಮಿಕೊಂಡಿದೆ.
ಟಿಪಿಯು ಚಿಪ್‌ಗಳ ಪರೀಕ್ಷೆ: ಬಾಹ್ಯಾಕಾಶದ ತೀವ್ರ ವಿಕಿರಣ (Radiation) ಮತ್ತು ಶೂನ್ಯ ವಾತಾವರಣದಲ್ಲೂ ಗೂಗಲ್‌ನ ಸ್ವಂತ ಎಐ ಚಿಪ್‌ಗಳಾದ ಟಿಪಿಯುಗಳು ಎಷ್ಟು ಸಮರ್ಥವಾಗಿ ಕೆಲಸ ಮಾಡಬಲ್ಲವು ಎಂಬುದನ್ನು ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ಪರಿಶೀಲಿಸಲಿದೆ.
ಇದನ್ನೂ ಓದಿ: ಭಾರತದಲ್ಲಿ ಟಾಟಾ ಕಂಪನಿಯ ಹೊಸ ಏರಿಸ್ ಸೆಡಾನ್ ಬಿಡುಗಡೆ; 5.29 ಲಕ್ಷದಿಂದ ಬೆಲೆ ಆರಂಭ
ಸೌರಶಕ್ತಿಯ ಗರಿಷ್ಠ ಬಳಕೆ: ಬಾಹ್ಯಾಕಾಶದಲ್ಲಿ ಯಾವುದೇ ಹವಾಮಾನ ಅಡಚಣೆ ಇಲ್ಲದೆ ದಿನದ 24 ಗಂಟೆಯೂ ನಿರಂತರವಾಗಿ ದೊರೆಯುವ ಸೌರಶಕ್ತಿಯನ್ನು ಬಳಸಿಕೊಂಡು ಎಐ ಮಾಡೆಲ್‌ಗಳ ತರಬೇತಿ (Model Training) ಮತ್ತು ಡೇಟಾ ಕಾಂಪ್ಯುಟೇಶನ್ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ.
ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್ ನಿರ್ಮಾಣ: ಸವಾಲುಗಳು ಮತ್ತು ತಂತ್ರಜ್ಞಾನ
ಭೂಮಿಯ ವಾತಾವರಣದಿಂದ ಹೊರಗಿರುವ ತೀವ್ರ ತಾಪಮಾನ, ವಿಕಿರಣ ಮತ್ತು ಕಕ್ಷೆಯಲ್ಲಿನ (Orbit) ಡೇಟಾ ವರ್ಗಾವಣೆ ಸಾಮರ್ಥ್ಯವನ್ನು ಎದುರಿಸಲು ವಿಶೇಷ ಎಂಜಿನಿಯರಿಂಗ್ ವಿನ್ಯಾಸವನ್ನು ಬಳಸಲಾಗುತ್ತಿದೆ.
ಈ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಶಕಗಳಲ್ಲಿ ಸೌರಶಕ್ತಿ ಆಧಾರಿತ ‘ಬಾಹ್ಯಾಕಾಶ ಡಾಟಾ ಸೆಂಟರ್’ (Space-based Data Centers) ನಿರ್ಮಾಣಕ್ಕೆ ಇದು ಮೊದಲ ಹೆಜ್ಜೆಯಾಗಲಿದೆ. ಈ ಯೋಜನೆಯು ಗೂಗಲ್‌ನ ಎಐ ತಂತ್ರಜ್ಞಾನವನ್ನು ಕೇವಲ ಡಿಜಿಟಲ್ ಲೋಕಕ್ಕೆ ಮಾತ್ರ ಸೀಮಿತಗೊಳಿಸದೆ, ಬಾಹ್ಯಾಕಾಶ ತಂತ್ರಜ್ಞಾನದೊಂದಿಗೂ ಬೆಸೆಯುವ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಇದನ್ನೂ ಓದಿ: ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಲ್ಯಾಪ್‌ಟಾಪ್ ಬ್ಯಾಟರಿ ಎಷ್ಟು ಗಂಟೆ ಬರಬೇಕು?
ಇಲಾನ್ ಮಸ್ಕ್ ಅವರಿಂದಲೂ ಬಾಹ್ಯಾಕಾಶದಲ್ಲಿ ಎಐ ಕಂಪ್ಯೂಟರ್ ಕೂರಿಸುವ ಸಾಹಸ
ಬಾಹ್ಯಾಕಾಶದಲ್ಲಿ ಎಐ ಡಾಟಾ ಸೆಂಟರ್ಗಳನ್ನು ಕೂರಿಸಲು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕೂಡ ಸಜ್ಜಾಗಿದೆ. ಮುಂದಿನ ವರ್ಷ ಎನ್ವಿಡಿಯಾ ವಿಆರ್ ಎನ್ಎಲ್ವಿ72 ಎಐ ಕಂಪ್ಯೂಟರ್ಗಳನ್ನು ಪ್ರಾರಂಭಿಸುವ ವಿಶ್ವಾಸ ಇದೆ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ.
ಸ್ಪೇಸ್ ಎಕ್ಸ್ ಮುಖ್ಯಸ್ಥರಾದ ಇಲಾನ್ ಮಸ್ಕ್ ಅವರು ಬಹುತೇಕ ಎಲ್ಲಾ ಡಾಟಾ ಸೆಂಟರ್ಗಳು ಬಾಹ್ಯಾಕಾಶದಲ್ಲೇ ಇರುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




