Rakesh JhunJhunwala: ಐದು ಟ್ರೇಡಿಂಗ್ ಸೆಷನ್​ನಲ್ಲಿ ಈ ಹಿರಿಯ ಹೂಡಿಕೆದಾರರಿಗೆ 1000 ಕೋಟಿ ರೂ.ಗೂ ಹೆಚ್ಚು ನಷ್ಟ

| Updated By: Srinivas Mata

Updated on: Jul 02, 2022 | 5:52 PM

ಷೇರು ಮಾರುಕಟ್ಟೆಯ ಈ ಹಿರಿಯ ಹೂಡಿಕೆದಾರ ಕಳೆದ 5 ಟ್ರೇಡಿಂಗ್ ಸೆಷನ್​ನಲ್ಲಿ 1000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ತಮ್ಮ ಪೋರ್ಟ್​ಫೋಲಿಯೋದಲ್ಲಿನ ಷೇರುಗಳಿಂದ ಕಳೆದುಕೊಂಡಿದ್ದಾರೆ.

Rakesh JhunJhunwala: ಐದು ಟ್ರೇಡಿಂಗ್ ಸೆಷನ್​ನಲ್ಲಿ ಈ ಹಿರಿಯ ಹೂಡಿಕೆದಾರರಿಗೆ 1000 ಕೋಟಿ ರೂ.ಗೂ ಹೆಚ್ಚು ನಷ್ಟ
ಸಾಂದರ್ಭಿಕ ಚಿತ್ರ
Follow us on

ಏರುತ್ತಿರುವ ಹಣದುಬ್ಬರದ ಆತಂಕ ಮತ್ತು ಹಿಂಜರಿತದ ಕಳವಳಗಳ ಮಧ್ಯೆ ಭಾರತೀಯ ಷೇರುಗಳು ಕಳೆದ ವಾರ ಭಾರೀ ಹಿನ್ನಡೆ ಕಂಡವು. ಕೆಲವು ಗುಣಮಟ್ಟದ ಷೇರುಗಳಲ್ಲಿ ಮಾರಾಟ-ಒತ್ತಡ ಕಂಡುಬಂತು. ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ಅವರ ಬೆಂಬಲದ ಹೊರತಾಗಿಯೂ ಟೈಟಾನ್ ಕಂಪೆನಿ ಮತ್ತು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಷೂರೆನ್ಸ್ ಕಂಪೆನಿಯ ಷೇರುಗಳು ಈ ವಾರ ಹಿನ್ನಡೆ ಅನುಭವಿಸಿದವು. ರಾಕೇಶ್ ಜುಂಜುನ್‌ವಾಲಾ ಷೇರುಗಳಲ್ಲಿನ ಭಾರೀ ಮಾರಾಟದಿಂದಾಗಿ ಕಳೆದ ವಾರ 5 ಸೆಷನ್‌ಗಳಲ್ಲಿ ರೂ. 1,000 ಕೋಟಿಗೂ ಹೆಚ್ಚು ನಷ್ಟವಾಗಿದೆ.

ರಾಕೇಶ್ ಜುಂಜುನ್‌ವಾಲಾ ಪೋರ್ಟ್‌ಫೋಲಿಯೊ ಸ್ಟಾಕ್‌ಗಳ ಬೆಲೆಯಲ್ಲಿ ಕುಸಿತ

ಕಳೆದ ವಾರದ 5 ಟ್ರೇಡ್ ಸೆಷನ್‌ಗಳಲ್ಲಿ ಟೈಟಾನ್ ಷೇರಿನ ಬೆಲೆಯು ರೂ. 2,053.50ರಿಂದ ರೂ. 1,944.75ರ ಹಂತಕ್ಕೆ ಇಳಿಕೆಯಾಗಿದ್ದು, ಕಳೆದ ವಾರದ ವಹಿವಾಟಿನಲ್ಲಿ ಪ್ರತಿ ಷೇರಿಗೆ ರೂ. 108.75 ಕುಸಿತವನ್ನು ದಾಖಲಿಸಿದೆ. ಅದೇ ರೀತಿ, ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್​ಫೋಲಿಯೋದ ಮತ್ತೊಂದು ಸ್ಟಾಕ್ ಸ್ಟಾರ್ ಹೆಲ್ತ್ ಷೇರಿನ ಬೆಲೆಯು ರೂ. 531.10 ರಿಂದ ರೂ. 475.90ಕ್ಕೆ ಇಳಿದಿದ್ದು, ಕಳೆದ ವಾರ ಪ್ರತಿ ಷೇರಿಗೆ ರೂ. 55.20 ಕುಸಿತ ಕಂಡಿದೆ.

ರಾಕೇಶ್ ಜುಂಜುನ್​ವಾಲಾ ಷೇರು ಹೋಲ್ಡಿಂಗ್

ಟೈಟಾನ್ ಕಂಪೆನಿಯ ಪ್ರಕಾರ, ಜನವರಿಯಿಂದ ಮಾರ್ಚ್ 2022ರ ಅವಧಿಗೆ, ರಾಕೇಶ್ ಜುಂಜುನ್‌ವಾಲಾ 3,53,10,395 ಷೇರುಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ ರೇಖಾ 95,40,575 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ, ಜುಂಜುನ್​ವಾಲಾ ದಂಪತಿ ಒಟ್ಟಾಗಿ 4,48,50,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಅದೇ ರೀತಿ, ರಾಕೇಶ್ ಜುಂಜುನ್​ವಾಲಾ 10,07,53,935 ಸ್ಟಾರ್ ಹೆಲ್ತ್ ಷೇರುಗಳನ್ನು ಹೊಂದಿದ್ದಾರೆ.

ರಾಕೇಶ್ ಜುಂಜುನ್​ವಾಲಾ ನಿವ್ವಳ ಮೌಲ್ಯದಲ್ಲಿ ಕುಸಿತ

ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು 4,48,50,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಅದು ಕಳೆದ ವಾರ ಪ್ರತಿ ಷೇರಿಗೆ ರೂ. 108.75 ಕುಸಿದಿದ್ದು, ಟೈಟನ್ ಷೇರು ಕುಸಿತದಿಂದಾಗಿ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 485 ಕೋಟಿಯಷ್ವಾಗಿದೆ. ಅದೇ ರೀತಿ, ರಾಕೇಶ್ ಜುಂಜುನ್​ವಾಲಾ ಅವರು 10,07,53,935 ಸ್ಟಾರ್ ಹೆಲ್ತ್ ಷೇರುಗಳನ್ನು ಹೊಂದಿದ್ದಾರೆ. ಅದು ಕಳೆದ ವಾರ ಪ್ರತಿ ಷೇರಿಗೆ ರೂ. 55.20 ಕುಸಿದಿದೆ. ಹಾಗಾಗಿ, ಕಳೆದ ವಾರ ಸ್ಟಾರ್ ಹೆಲ್ತ್ ಷೇರುಗಳ ಕುಸಿತದಿಂದಾಗಿ ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೊದಲ್ಲಿ ನಿವ್ವಳ ನಷ್ಟವು ಸುಮಾರು ರೂ. 555 ಕೋಟಿಯಾಗಿದೆ.

ಹಾಗಾಗಿ, ಕಳೆದ ವಾರ ಟೈಟಾನ್ ಷೇರಿನ ಬೆಲೆ ಮತ್ತು ಸ್ಟಾರ್ ಹೆಲ್ತ್ ಷೇರುಗಳಲ್ಲಿನ ಕುಸಿತದಿಂದಾಗಿ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ರೂ. 1,000 ಕೋಟಿಗಿಂತ ಹೆಚ್ಚು (ಅಥವಾ ಸುಮಾರು ರೂ. 1,040 ಕೋಟಿ) ಆಗಿದೆ. ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್ಸ್ ಕಂಪನಿ, ರಾಲಿಸ್ ಇಂಡಿಯಾ, ನ್ಯಾಷನಲ್ ಅಲ್ಯೂಮಿನಿಯಂ ಕಂಪೆನಿ ಅಥವಾ NALCO, ಕೆನರಾ ಬ್ಯಾಂಕ್, ಇತ್ಯಾದಿಗಳ ಷೇರುಗಳು ಕಳೆದ ವಾರ ಕಡಿಮೆಯಾದ ಪ್ರಮುಖ ರಾಕೇಶ್ ಜುನ್‌ಜುನ್‌ವಾಲಾ ಪೋರ್ಟ್‌ಫೋಲಿಯೊ ಷೇರುಗಳಲ್ಲಿ ಸೇರಿವೆ.

ಇದನ್ನೂ ಓದಿ: Rakesh Jhunjhunwala: ಕೇವಲ 10 ನಿಮಿಷದಲ್ಲಿ ಈ ಷೇರಿನಿಂದ 318 ಕೋಟಿ ರೂ. ಕಳೆದುಕೊಂಡ ರಾಕೇಶ್ ಜುಂಜುನ್​ವಾಲಾ

Published On - 5:52 pm, Sat, 2 July 22