Rakesh Jhunjhunwala: ಕೇವಲ 10 ನಿಮಿಷದಲ್ಲಿ ಈ ಷೇರಿನಿಂದ 318 ಕೋಟಿ ರೂ. ಕಳೆದುಕೊಂಡ ರಾಕೇಶ್ ಜುಂಜುನ್​ವಾಲಾ

ಷೇರು ಮಾರುಕಟ್ಟೆಯ ಹಿರಿಯ ಹೂಡಿಕೆದಾರರಾದ ರಾಕೇಶ್​ ಜುಂಜುನ್​ವಾಲಾ ಡಿಸೆಂಬರ್ 17ನೇ ತಾರೀಕಿನ ಶುಕ್ರವಾರ ಟಾಟಾ ಕಂಪೆನಿಯ ಈ ಷೇರಿನಲ್ಲಿ ಕೇವಲ 10 ನಿಮಿಷದಲ್ಲಿ 318 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

Rakesh Jhunjhunwala: ಕೇವಲ 10 ನಿಮಿಷದಲ್ಲಿ ಈ ಷೇರಿನಿಂದ 318 ಕೋಟಿ ರೂ. ಕಳೆದುಕೊಂಡ ರಾಕೇಶ್ ಜುಂಜುನ್​ವಾಲಾ
ರಾಕೇಶ್​ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Dec 17, 2021 | 3:03 PM

ದುರ್ಬಲ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಡಿಸೆಂಬರ್ 17ರ ಶುಕ್ರವಾರದ ಬೆಳಗ್ಗೆ ವ್ಯವಹಾರ ಭಾರೀ ಕುಸಿತ ಕಂಡಿತು. ನಿಫ್ಟಿ ಸುಮಾರು 200 ಪಾಯಿಂಟ್‌ಗಳಷ್ಟು ಕಡಿಮೆಯಾದರೆ, ಬಿಎಸ್‌ಇ ಸೆನ್ಸೆಕ್ಸ್ 800ಕ್ಕೂ ಹೆಚ್ಚು ಪಾಯಿಂಟ್ಸ್​ಗಳ ಇಳಿಕೆ ಆಯಿತು. ಅಂದಹಾಗೆ ಷೇರು ಮಾರುಕಟ್ಟೆಯಲ್ಲಿ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್​ವಾಲಾ ಅವರು ಟೈಟಾನ್ ಕಂಪೆನಿ ಷೇರುಗಳಲ್ಲಿ ಮಾರುಕಟ್ಟೆ ಪ್ರಾರಂಭವಾದ 10 ನಿಮಿಷಗಳಲ್ಲಿ ಸುಮಾರು 318 ಕೋಟಿ ರೂಪಾಯಿಗಳ ನಷ್ಟ ಅನುಭವುಸುದರು. ಟೈಟಾನ್ ಕಂಪೆನಿಯ ಷೇರಿನ ಬೆಲೆ 2,336 ರೂಪಾಯಿ ಮಟ್ಟದಲ್ಲಿ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.25ರ ಹೊತ್ತಿಗೆ ಪ್ರತಿ ಷೇರಿನ ಬೆಲೆ 2,283.65ಕ್ಕೆ ಇಳಿಯಿತು -ಇದು ಕೇವಲ ಹತ್ತು ನಿಮಿಷದಲ್ಲಿ ಆದ ಬದಲಾವಣೆ ಆಗಿತ್ತು.

ಟೈಟಾನ್ ಕಂಪೆನಿಯಲ್ಲಿ ರಾಕೇಶ್ ಜುಂಜುನ್​ವಾಲಾ ಷೇರುದಾರರು ಟೈಟಾನ್ ಕಂಪನಿಯ ಷೇರಿನ ಬೆಲೆ ಗುರುವಾರ ಎನ್‌ಎಸ್‌ಇಯಲ್ಲಿ ಪ್ರತಿ ಷೇರಿಗೆ ರೂ. 2,357.25ಕ್ಕೆ ಕೊನೆಗೊಂಡಿತ್ತು. ಶುಕ್ರವಾರ ಮಾರುಕಟ್ಟೆ ಪ್ರಾರಂಭವಾದ 10 ನಿಮಿಷಗಳ ನಂತರ ರೂ. 2,283.65ಕ್ಕೆ ಇಳಿಯಿತು. ಈ ಅವಧಿಯಲ್ಲಿ ಪ್ರತಿ ಷೇರಿಗೆ ರೂ. 73.60 ನಷ್ಟವಾಯಿತು. 2021ರ ಜುಲೈನಿಂದ- ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಟೈಟಾನ್ ಕಂಪೆನಿಯ ಷೇರುದಾರರ ಬಳಿ ಇರುವ ಷೇರುಗಳ ಸಂಖ್ಯೆ ಪ್ರಕಾರ, ರಾಕೇಶ್ ಜುಂಜುನ್​ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್​ವಾಲಾ ಈ ಟಾಟಾ ಕಂಪೆನಿಯಲ್ಲಿ ಪಾಲನ್ನು ಹೊಂದಿದ್ದಾರೆ. ರಾಕೇಶ್ ಜುಂಜುನ್‌ವಾಲಾ ಅವರು ಟೈಟಾನ್ ಕಂಪೆನಿಯ 3,37,60,395 ಷೇರುಗಳನ್ನು ಹೊಂದಿದ್ದಾರೆ, ಇದು ಕಂಪೆನಿಯ ಒಟ್ಟು ಪೇಯ್ಡ್​ ಅಪ್ ಬಂಡವಾಳದ ಶೇಕಡಾ 3.80 ಆಗಿದೆ.

ಅದೇ ರೀತಿ, ರೇಖಾ ಜುಂಜುನ್‌ವಾಲಾ ಅವರು 95,40,575 ಕಂಪೆನಿ ಷೇರುಗಳನ್ನು ಅಥವಾ ಕಂಪೆನಿಯಲ್ಲಿ ಶೇ 1.07ರಷ್ಟು ಪಾಲನ್ನು ಹೊಂದಿದ್ದಾರೆ. ರಾಕೇಶ್ ಜುನ್‌ಜುನ್‌ವಾಲಾ ಮತ್ತು ಅವರ ಪತ್ನಿ ರೇಖಾ ಜುನ್‌ಜುನ್‌ವಾಲಾ ಒಟ್ಟು 4,33,00,970 ಟೈಟಾನ್ ಕಂಪೆನಿ ಷೇರುಗಳನ್ನು ಹೊಂದಿದ್ದಾರೆ.

ಜುಂಜುನ್​ವಾಲಾ ನಿವ್ವಳ ಮೌಲ್ಯ ನಷ್ಟ ಹೀಗೆ ಒಟ್ಟು 4,33,00,970 ಟೈಟಾನ್ ಕಂಪೆನಿ ಷೇರುಗಳನ್ನು ಹೊಂದಿರುವುದರಿಂದ ಮತ್ತು ಮಾರುಕಟ್ಟೆ ಪ್ರಾರಂಭವಾದ 10 ನಿಮಿಷಗಳಲ್ಲಿ ಷೇರಿನ ಪ್ರತಿ ಷೇರಿಗೆ ರೂ. 73.60 ನಷ್ಟವಾದ ಕಾರಣಕ್ಕೆ ರಾಕೇಶ್ ಜುನ್‌ಜುನ್‌ವಾಲಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 318 ಕೋಟಿ (ರೂ. 73.6 x 4,33,00,970) ನಷ್ಟವಾಗಿದೆ.

ಟೈಟಾನ್ ಕಂಪೆನಿ ಷೇರು ಬೆಲೆ ಭವಿಷ್ಯ ಆದರೆ, ಮಾರುಕಟ್ಟೆ ತಜ್ಞರು ಈ ಇಳಿಕೆಯನ್ನು ರೀಟೇಲ್​ ಹೂಡಿಕೆದಾರರಿಗೆ ಉತ್ತಮ ಖರೀದಿ ಅವಕಾಶ ಎಂದು ನೋಡುತ್ತಿದ್ದಾರೆ. “ಟೈಟಾನ್ ಕಂಪೆನಿಯ ಷೇರುಗಳು 2200 ಮಟ್ಟದಲ್ಲಿ ಬಲವಾದ ಬೆಂಬಲವನ್ನು ಹೊಂದಿವೆ. ಈ ಸ್ಟಾಕ್ ಅನ್ನು ಪ್ರಸ್ತುತ ಮಟ್ಟದಲ್ಲಿ ಖರೀದಿಸಬೇಕು ಮತ್ತು ರೂ. 2350 ರಿಂದ ರೂ. 2400ರ ತಕ್ಷಣದ ಅಲ್ಪಾವಧಿಯ ಗುರಿಯೊಂದಿಗೆ, ರೂ. 2200ರ ಮಟ್ಟದಲ್ಲಿ ಸ್ಟಾಪ್ ಲಾಸ್ ಕಾಯ್ದುಕೊಳ್ಳಬೇಕು,” ಎಂದು ವಿಶ್ಲೇಷಕರು ಹೇಳುತ್ತಾರೆ. ಷೇರುಗಳು 2230-2240 ರೂಪಾಯಿ ಮಟ್ಟದಲ್ಲಿ ಕುಸಿದರೆ ಹೂಡಿಕೆದಾರರಿಗೆ ಮತ್ತಷ್ಟು ಸಂಗ್ರಹಿಸಲು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Rakesh Jhunjhunwala: ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ ಲಿಸ್ಟಿಂಗ್​ನಿಂದ ರಾಕೇಶ್​ ಜುಂಜುನ್​ವಾಲಾಗೆ 6 ಸಾವಿರ ಕೋಟಿ ರೂ. ಲಾಭ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು