AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rategain Travel Technologies Listing: 425 ರೂಪಾಯಿಗೆ ವಿತರಿಸಿದ್ದ ರೇಟ್​ಗೇಯ್ನ್ ಷೇರು 360 ರೂ.ಗೆ ಲಿಸ್ಟಿಂಗ್

ರೇಟ್​ಗೇಯ್ನ್ ಟ್ರಾವೆಲ್ ಟೆಕ್ನಾಲಜೀಸ್ ಡಿಸೆಂಬರ್ 17ನೇ ತಾರೀಕಿನ ಶುಕ್ರವಾರದಂದು ಶೇ 15ರಷ್ಟು ರಿಯಾಯಿತಿ ದರದಲ್ಲಿ ಲಿಸ್ಟಿಂಗ್ ಆಗಿದೆ. ವಿತರಣೆ ಬೆಲೆಗಿಂತ ಕಡಿಮೆ ದರಕ್ಕೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದೆ.

Rategain Travel Technologies Listing: 425 ರೂಪಾಯಿಗೆ ವಿತರಿಸಿದ್ದ ರೇಟ್​ಗೇಯ್ನ್ ಷೇರು 360 ರೂ.ಗೆ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 17, 2021 | 11:33 AM

ರೇಟ್​ಗೇಯ್ನ್ ಟ್ರಾವೆಲ್ ಟೆಕ್ನಾಲಜೀಸ್ ಸ್ಟಾಕ್ ಡಿಸೆಂಬರ್ 17ನೇ ತಾರೀಕಿನ ಶುಕ್ರವಾರದಂದು ಷೇರು ಮಾರುಕಟ್ಟೆಯಲ್ಲಿ ಶ 15ರಷ್ಟು ರಿಯಾಯಿತಿಯೊಂದಿಗೆ ಲಿಸ್ಟಿಂಗ್ ಆಗಿದೆ. ಪ್ರತಿ ಷೇರಿಗೆ 425 ರೂಪಾಯಿಯಂತೆ ವಿತರಿಸಲಾಗಿತ್ತು. ಬಿಎಸ್​ಇಯಲ್ಲಿ ರೂ. 364.80ಕ್ಕೆ ಮತ್ತು ಎನ್​ಎಸ್​ಇಯಲ್ಲಿ ರೂ. 360ಕ್ಕೆ ಲಿಸ್ಟಿಂಗ್ ಆಯಿತು. ಈ ಕಂಪೆನಿಯ ಐಪಿಒಗೆ ಹೂಡಿಕೆದಾರರು ಉತ್ತಮ ಸ್ಪಂದನೆ ತೋರಿದ್ದರು. ಡಿಸೆಂಬರ್ 7ರಿಂದ 9ನೇ ತಾರೀಕಿನ ಮಧ್ಯೆ, ವಿತರಣೆ ಮಾಡಬೇಕು ಎಂದು ಮೀಸಲಿರಿಸಿದ್ದಕ್ಕಿಂತ 17.41 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಹಾಸ್ಪಿಟಾಲಿಟಿ ಹಾಗೂ ಟ್ರಾವೆಲ್ ವಲಯದ ಅತಿ ದೊಡ್ಡ ಸಾಫ್ಟ್​ವೇರ್ ಆ್ಯಸ್ ಎ ಸರ್ವೀಸ್ (SaaS) ಕಂಪೆನಿ ರೇಟ್​ಗೇಯ್ನ್ ಸಾರ್ವಜನಿಕ ವಿತರಣೆ ಮೂಲಕ 1,335.74 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. ಇದರಲ್ಲಿ ಹೊಸದಾಗಿ ಮಾಡಿದ ವಿತರಣೆ ರೂ. 375 ಕೋಟಿ ಮತ್ತು ಹೂಡಿಕೆದಾರರು ಹಾಗೂ ಪ್ರಮೋಟರ್​ಗಳಿಂದ ಆಫರ್ ಫಾರ್ ಸೇಲ್ 960.74 ಕೋಟಿ ರೂಪಾಯಿ ಇತ್ತು.

ಐಪಿಒ ಮೂಲಕ ಸಂಗ್ರಹವಾದ ಮೊತ್ತದಿಂದ ಸಾಲವನ್ನು ಹಿಂತಿರುಗಿಸುವುದಕ್ಕೆ ಬಳಸಲಾಗುತ್ತದೆ. ಇನ್ನು DHISCO ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮುಂದಕ್ಕೆ ಹಾಕಿದ್ದ ಹಣದ ಪಾವತಿಗಾಗಿಯೂ ಬಳಸಿಕೊಳ್ಳಲಾಗುತ್ತದೆ. ಇನ್ನು ಹೊಸದಾಗಿ ಷೇರು ವಿತರಣೆಯಿಂದ ಸಂಗ್ರಹವಾದ ಮೊತ್ತವನ್ನು ಕಾರ್ಯತಂತ್ರ ಹೂಡಿಕೆ, ತಾಂತ್ರಿಕ ಆವಿಷ್ಕಾರದಲ್ಲಿನ ಹೂಡಿಕೆ, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಇತರ ಉದ್ದೇಶಗಳಿಗಾಗಿ ಹಾಗೂ ಡೇಟಾ ಸೆಂಟರ್​ನಲ್ಲಿ ಕೆಲವು ಬಂಡವಾಳ ಸಲಕರಣೆಗಳ ಖರೀದಿಗಾಗಿ ಉಪಯೋಗಿಸಲಾಗುತ್ತದೆ.

ಬಹುತೇಕ ಬ್ರೋಕರೇಜ್​ಗಳು ಇದರ “ಸಬ್​ಸ್ಕ್ರೈಬ್​”ಗೆ ಶಿಫಾರಸು ಮಾಡುವ ರೇಟಿಂಗ್ ನೀಡಿದ್ದವು. 2021ರ ಹಣಕಾಸು ವರ್ಷದಲ್ಲಿ ರೇಟ್​ಗೇಯ್ನ್ ನಷ್ಟವು 28.57 ಕೋಟಿ ರೂಪಾಯಿಗೆ ಹಿಗ್ಗಿತ್ತು. ಅದಕ್ಕೂ ಒಂದು ವರ್ಷದ ಹಿಂದೆ ಕೊವಿಡ್​ ಬಿಕ್ಕಟ್ಟಿನಿಂದಾಗಿ 20.1 ಕೋಟಿ ರೂಪಾಯಿ ನಷ್ಟವಾಗಿತ್ತು. ಕಾರ್ಯ ಚಟುವಟಿಕೆಯಿಂದ ಬರುವ ಆದಾಯವು 398.7 ಕೋಟಿ ರೂಪಾಯಿಯಿಂದ 250.79 ಕೋಟಿ ರೂಪಾಯಿಗೆ ಇಳಿದಿದೆ.

ಇದನ್ನೂ ಓದಿ: Paytm Listing: ಪೇಟಿಎಂ ಐಪಿಒದಲ್ಲಿ ಸಂಗ್ರಹಿಸಿದ್ದ 18 ಸಾವಿರ ಕೋಟಿಯ ದುಪ್ಪಟ್ಟಿಗೂ ಹೆಚ್ಚು ಹಣ 38 ಸಾವಿರ ಕೋಟಿ ಕಳ್ಕೊಂಡ ಹೂಡಿಕೆದಾರರು

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ