AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5ಜಿ ಸರ್ವಿಸ್ ಅಳವಡಿಕೆ ಮಾಡದ ಅದಾನಿ ಕಂಪನಿ; ದೂರಸಂಪರ್ಕ ಇಲಾಖೆಯಿಂದ ಮತ್ತೆ ನೋಟೀಸ್; ಎಡಿಎನ್​ಎಲ್​ಗೆ ಲೈಸೆನ್ಸ್ ರದ್ದಾಗುತ್ತಾ?

DoT notice to Adani Data Networks: 5ಜಿ ಸ್ಪೆಕ್ಟ್ರಂ ಖರೀದಿ ಮಾಡಿ ಹಲವು ತಿಂಗಳಾದರೂ ಇನ್ನೂ ಕಮರ್ಷಿಯಲ್ ಆಗಿ ಅಳವಡಿಕೆ ಮಾಡದ ಅದಾನಿ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಮತ್ತೆ ನೋಟೀಸ್ ಕೊಟ್ಟಿದೆ. 2022ರ ಜುಲೈನಲ್ಲಿ ನಡೆದ ಸ್ಪೆಕ್ಟ್ರಂ ಹರಾಜಿನಲ್ಲಿ ಅದಾನಿ ಗ್ರೂಪ್ 26 ಗೀಗಾಹರ್ಟ್ಜ್ ಬ್ಯಾಂಡ್​ನಲ್ಲಿ ಒಟ್ಟು 400 ಮೆಗಾಹರ್ಟ್ಜ್​ನಷ್ಟು ಸ್ಪೆಕ್ಟ್ರಂ ಅನ್ನು ಖರೀದಿಸಿತ್ತು. ಅಕ್ಟೋಬರ್ 10ರೊಳಗೆ ವಾಣಿಜ್ಯಾತ್ಮಕವಾಗಿ 5ಜಿ ಸರ್ವಿಸ್ ಅನ್ನು ಅದಾನಿ ಡಾಟಾ ನೆಟ್ವರ್ಕ್ಸ್ ಆರಂಭಿಸಬೇಕು.

5ಜಿ ಸರ್ವಿಸ್ ಅಳವಡಿಕೆ ಮಾಡದ ಅದಾನಿ ಕಂಪನಿ; ದೂರಸಂಪರ್ಕ ಇಲಾಖೆಯಿಂದ ಮತ್ತೆ ನೋಟೀಸ್; ಎಡಿಎನ್​ಎಲ್​ಗೆ ಲೈಸೆನ್ಸ್ ರದ್ದಾಗುತ್ತಾ?
ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2024 | 5:02 PM

Share

ನವದೆಹಲಿ, ಆಗಸ್ಟ್ 11: ಹರಾಜಿನಲ್ಲಿ 5ಜಿ ಸ್ಪೆಕ್ಟ್ರಂ ಅನ್ನು ಖರೀದಿ ಮಾಡಿ ಇನ್ನೂ ಅದನ್ನು ಅಳವಡಿಸದ ಅದಾನಿ ಗ್ರೂಪ್ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಮತ್ತೊಮ್ಮೆ ನೋಟೀಸ್ ಕೊಟ್ಟಿದೆ. ಭಾರತದಲ್ಲಿ ಕಮರ್ಷಿಯಲ್ ಆಗಿ 5ಜಿ ಸರ್ವಿಸ್ ಅನ್ನು ಇನ್ನೂ ಯಾಕೆ ಜಾರಿಗೆ ತಂದಿಲ್ಲ, ಯಾಕೆ ವಿಳಂಬವಾಯಿತು ಎಂದು ಉತ್ತರ ಕೇಳಿ ಅದಾನಿ ಡಾಟಾ ನೆಟ್ವರ್ಕ್ಸ್ ಲಿ ಕಂಪನಿಗೆ ಇಲಾಖೆ ಈ ನೋಟೀಸ್ ಜಾರಿ ಮಾಡಿದೆ. ಸ್ಪೆಕ್ಟ್ರಂ ಹರಾಜಿನಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ 2024ರ ಅಕ್ಟೋಬರ್ 10ರಷ್ಟರಲ್ಲಿ ಕಮರ್ಷಿಯಲ್ 5ಜಿ ನೆಟ್ವರ್ಕ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲದಿದ್ದರೆ ಸ್ಪೆಕ್ಟ್ರಂ ನೀಡಲಾಗಿದ್ದನ್ನು ಸರ್ಕಾರ ಹಿಂಪಡೆಯುವ ಸಂಭವ ಇರುತ್ತದೆ.

ತನ್ನ ಬಿಸಿನೆಸ್​ಗೆಂದು 5ಜಿ ಸ್ಪೆಕ್ಟ್ರಂ ಪಡೆದಿದ್ದ ಅದಾನಿ ಕಂಪನಿ

5ಜಿ ಸ್ಪೆಕ್ಟ್ರಂ ಅನ್ನು ಹರಾಜಿನಲ್ಲಿ ಪಡೆದಿದ್ದ ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಈಗಾಗಲೇ ವಾಣಿಜ್ಯಾತ್ಮಕವಾಗಿ 5ಜಿ ಸರ್ವಿಸ್​ಗಳನ್ನು ಎಲ್ಲೆಡೆ ಅಳವಡಿಸುತ್ತಿವೆ. ವೊಡಾಫೋನ್ ಐಡಿಯಾ ಕೂಡ ವಿಳಂಬವಾದರೂ 5ಜಿ ನೆಟ್ವರ್ಕ್ ಚಾಲನೆಗೊಳಿಸಿದೆ. ಹರಾಜಿನಲ್ಲಿ ಪಾಲ್ಗೊಂಡು ಸ್ಪೆಕ್ಟ್ರಂ ಹಂಚಿಕೆ ಪಡೆದಿದ್ದ ಅದಾನಿ ಸಂಸ್ಥೆ ಇನ್ನೂ ಕೂಡ ಕಮರ್ಷಿಯಲ್ 5ಜಿ ಸರ್ವಿಸ್ ಚಾಲನೆಗೊಳಿಸಿಲ್ಲ.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ 5ಜಿ ಬೆಂಬಲಿತ ಒಟಿಎ ಮತ್ತು ಯುಸಿಮ್ ಪ್ಲಾಟ್​ಫಾರ್ಮ್ ಅನಾವರಣ; ಎಲ್ಲಿ ಬೇಕಾದರೂ ಸಿಮ್ ಸ್ವಾಪಿಂಗ್

ಅದಾನಿ ಗ್ರೂಪ್​ನಿಂದ ಏರ್​ಪೋರ್ಟ್ ಮತ್ತು ಪೋರ್ಟ್​ಗಳ ನಿರ್ವಹಣೆ ಆಗುತ್ತಿದೆ. ಇನ್ನೂ ಹಲವು ಬಿಸಿನೆಸ್​ಗಳು ಅದರ ಬಳಿ ಇವೆ. ಈ ವ್ಯವಹಾರಗಳಿಗೆಂದು ಸ್ವಂತವಾಗಿ 5ಜಿ ಸ್ಪೆಕ್ಟ್ರಂ ಅನ್ನು ಅದು ಬಿಡ್ ಮೂಲಕ ಖರೀದಿ ಮಾಡಿತ್ತು. ಆದರೆ, ಸ್ವಂತ ಉದ್ಯಮಕ್ಕೆ ಮಾತ್ರವಲ್ಲ, ಕಮರ್ಷಿಯಲ್ ಆಗಿಯೂ 5ಜಿ ಸರ್ವಿಸ್ ಒದಗಿಸುವುದು ಕಡ್ಡಾಯವಾಗಿದೆ. ಈ ವರ್ಷಾರಂಭದಲ್ಲಿಯೂ ಅದಾನಿ ಗ್ರೂಪ್​ಗೆ ಈ ಬಗ್ಗೆ ನೋಟೀಸ್ ಕೊಡಲಾಗಿತ್ತು. ಈಗ ಅಕ್ಟೋಬರ್ ತಿಂಗಳ ಡೆಡ್​ಲೈನ್ ಸಮೀಪಿಸುತ್ತಿರುವುದರಿಂದ ಮತ್ತೊಮ್ಮೆ ನೋಟೀಸ್ ನೀಡಲಾಗಿದೆ.

ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಡಾಟಾ ನೆಟ್ವರ್ಕ್ಸ್ ಸಂಸ್ಥೆ 2022ರ ಜುಲೈನಲ್ಲಿ ನಡೆದ ಸ್ಪೆಕ್ಟ್ರಂ ಹರಾಜಿನಲ್ಲಿ 26 ಗೀಗಾಹರ್ಟ್ಜ್ ಬ್ಯಾಂಡ್​ವಿಡ್ತ್​ನಲ್ಲಿ ಒಟ್ಟು 400 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನು 212 ಕೋಟಿ ರೂ ಮೊತ್ತಕ್ಕೆ ಖರೀದಿ ಮಾಡಿತ್ತು. ಕರ್ನಾಟಕ, ಆಂಧ್ರ, ಗುಜರಾತ್, ಮುಂಬೈ, ತಮಿಳುನಾಡು ಮತ್ತು ರಾಜಸ್ಥಾನ ಈ ಆರು ಸರ್ಕಲ್​ಗಳಿಗೆ ಸ್ಪೆಕ್ಟ್ರಂ ಪಡೆದಿದೆ.

ಕಮರ್ಷಿಯಲ್ ಆಗಿ 5ಜಿ ಅಳವಡಿಸದಿದ್ದರೆ ಏನಾಗುತ್ತದೆ?

ಅಕ್ಟೋಬರ್ 10ರೊಳಗೆ ಕಮರ್ಷಿಯಲ್ 5ಜಿ ಸ್ಪೆಕ್ಟ್ರಂ ಅಳವಡಿಸಬೇಕೆಂದು ನಿಯಮ ಇದೆ. ಒಂದು ವೇಳೆ ಇದು ಆಗದೇ ಹೋದರೆ ಅಕ್ಟೋಬರ್ 10ರಿಂದ ಅಚೆ 13 ವಾರ ಕಾಲ ವಾರಕ್ಕೆ 1 ಲಕ್ಷ ರೂನಂತೆ ದಂಡ ತೆರಬೇಕಾಗುತ್ತದೆ. ನಂತರವೂ ಅಳವಡಿಕೆ ಆಗದೇ ಹೋದರೆ ಮುಂದಿನ 13 ವಾರ ಕಾಲ ವಾರಕ್ಕೆ 2 ಲಕ್ಷ ರೂನಂತೆ ಶುಲ್ಕ ಕಟ್ಟಬೇಕಾಗುತ್ತದೆ. ಮುಂದಿನ 26 ವಾರ ಕಾಲ ವಾರಕ್ಕೆ ಬೀಳುವ ದಂಡ 4 ಲಕ್ಷ ರೂ ಆಗಿರುತ್ತದೆ.

ಇದನ್ನೂ ಓದಿ: ನನ್ನದೇನಿದ್ದರೂ ತೆರೆದ ಪುಸ್ತಕ: ಹಿಂಡನ್ಬರ್ಗ್ ಆರೋಪ ತಳ್ಳಿಹಾಕಿದ ಸೆಬಿ ಮುಖ್ಯಸ್ಥೆ ಮಾಧವಿ

5ಜಿ ನೆಟ್ವರ್ಕ್ ಅಳವಡಿಕೆಗೆ ಆಗುವ ವಿಳಂಬ 52 ವಾರ ಮೀರಿದರೆ, ಅಂದರೆ 2025ರ ಅಕ್ಟೋಬರ್ ತಿಂಗಳಾದರೂ ಅದಾನಿ ಕಂಪನಿ ಕಮರ್ಷಿಯಲ್ ಆಗಿ 5ಜಿ ನೆಟ್ವರ್ಕ್ ಅಳವಡಿಸದೇ ಹೋದರೆ ಆಗ ಸ್ಪೆಕ್ಟ್ರಂ ಹಂಚಿಕೆಯನ್ನೇ ರದ್ದುಗೊಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ