AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್ಸೆನ್ನೆಲ್​ನಿಂದ 5ಜಿ ಬೆಂಬಲಿತ ಒಟಿಎ ಮತ್ತು ಯುಸಿಮ್ ಪ್ಲಾಟ್​ಫಾರ್ಮ್ ಅನಾವರಣ; ಎಲ್ಲಿ ಬೇಕಾದರೂ ಸಿಮ್ ಸ್ವಾಪಿಂಗ್

BSNL 5G ready USIM platform: ಭಾರತೀಯ ದೂರ ಸಂಚಾರ ನಿಗಮ ಬಿಎಸ್ಸೆನ್ನೆಲ್ 4ಜಿ ಮತ್ತು 5ಜಿ ಬೆಂಬಲಿತ ಓಟಿಎ ಮತ್ತು ಯುಸಿಮ್ ಪ್ಲಾಟ್​ಫಾರ್ಮ್ ಅನ್ನು ಹೊರತರುತ್ತಿದೆ. ಇದು ಬಿಎಸ್ಸೆನ್ನೆಲ್ ಗ್ರಾಹಕರು ದೇಶದ ಯಾವುದೇ ಭಾಗದಲ್ಲಾದರೂ ತಮ್ಮ ಹಳೆಯ ಸಿಮ್​ಗಳನ್ನು ಬದಲಿಸಲು ಸಾಧ್ಯವಾಗುತ್ತದೆ. ಪೈರೋ ಹೋಲ್ಡಿಂಗ್ಸ್ ಸಂಸ್ಥೆ ಜೊತೆ ಸೇರಿ ಬಿಎಸ್ಸೆನ್ನೆಲ್ ಈ ಪ್ಲಾಟ್​ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ.

ಬಿಎಸ್ಸೆನ್ನೆಲ್​ನಿಂದ 5ಜಿ ಬೆಂಬಲಿತ ಒಟಿಎ ಮತ್ತು ಯುಸಿಮ್ ಪ್ಲಾಟ್​ಫಾರ್ಮ್ ಅನಾವರಣ; ಎಲ್ಲಿ ಬೇಕಾದರೂ ಸಿಮ್ ಸ್ವಾಪಿಂಗ್
ಬಿಎಸ್ಸೆನ್ನೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2024 | 1:25 PM

Share

ನವದೆಹಲಿ, ಆಗಸ್ಟ್ 11: ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ 4ಜಿ ಮತ್ತು 5ಜಿ ಬೆಂಬಲಿತ ಓವರ್ ದಿ ಏರ್ (ಒಟಿಎ) ಮತ್ತು ಯೂನಿವರ್ಸಲ್ ಸಿಮ್ (ಯುಎಸ್​ಐಎಂ) ಪ್ಲಾಟ್​ಫಾರ್ಮ್ ಅನ್ನು ಬಿಡುಗಡೆ ಮಾಡುತ್ತಿದೆ. ಪೈರೋ ಹೋಲ್ಡಿಂಗ್ಸ್ ಪ್ರೈ ಲಿ ಸಂಸ್ಥೆ ಜೊತೆ ಸೇರಿ ಬಿಎಸ್ಸೆನ್ನೆಲ್ ಅಭಿವೃದ್ಧಿಪಡಿಸಿರುವ ಈ ಪ್ಲಾಟ್​ಫಾರ್ಮ್, ಅದರ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಮತ್ತು ಗುಣಮಟ್ಟದ ಸೇವೆ ಒದಗಿಸಬಲ್ಲುದು. ಈ ಸರ್ವಿಸ್​ನ ವಿಶೇಷತೆ ಎಂದರೆ ಬಿಎಸ್ಸೆನ್ನೆಲ್ ಗ್ರಾಹಕರು ದೇಶದ ಯಾವುದೇ ಭಾಗದಲ್ಲಾದರೂ ಸಿಮ್ ಬದಲಾಯಿಸಿಕೊಳ್ಳಬಹುದು ಮತ್ತು ಮೊಬೈಲ್ ನಂಬರ್​ಗಳನ್ನು ಆಯ್ದುಕೊಳ್ಳಬಹುದು.

ಚಂದೀಗಢದಲ್ಲಿ ಮೊನ್ನೆ ಈ ಯೋಜನೆ ಆರಂಭಿಸಲಾಗಿದೆ. ‘ದೇಶದ ಯಾವುದೇ ಭಾಗದಲ್ಲೂ ಸಿಮ್ ಸ್ವ್ಯಾಪ್ ಮಾಡಲು ಇದು ಸಹಾಯವಾಗುತ್ತದೆ. ಸರ್ಕಾರದ ಆತ್ಮನಿರ್ಭರ ಭಾರತದ ಗುರಿ ಈಡೇರಿಕೆಗೆ ಇದು ನೆರವಾಗುತ್ತದೆ. ಗ್ರಾಮೀಣ ಭಾಗದ ಮತ್ತು ದೂರದ ಪ್ರದೇಶಗಳಲ್ಲಿ ಜನರಿಗೆ ಇದು ನೆರವಾಗುತ್ತದೆ. ಇತರ ಪ್ರದೇಶಗಳೊಂದಿಗೆ ಇರುವ ಡಿಜಿಟಲ್ ಅಸಮಾನತೆಯನ್ನು ಇದು ನೀಗಿಸುತ್ತದೆ’ ಎಂದು ಬಿಎಸ್ಸೆನ್ನೆಲ್​ನ ಛೇರ್ಮನ್ ಮತ್ತು ಎಂಡಿ ರವಿ ಜೆರಾರ್ಡ್ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮೂಲ ಕೆಲಸಗಳತ್ತ ಗಮನ ಕೊಡಿ: ಬ್ಯಾಂಕುಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ; ಏನಿದು ಕೋರ್ ಬ್ಯಾಂಕಿಂಗ್ ಚಟುವಟಿಕೆ?

ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 4ಜಿ ಮತ್ತು 5ಜಿ ಸಿದ್ಧವಿರುವ ಸಿಮ್ ಪ್ಲಾಟ್​ಫಾರ್ಮ್ ಅನ್ನು ಶೀಘ್ರದಲ್ಲೇ ಹೊರತರುತ್ತಿರುವುದಾಗಿ ಶನಿವಾರ (ಆ. 10) ಹೇಳಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಒಂದು ಕಾಲಘಟ್ಟದಲ್ಲಿ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಎನಿಸಿತ್ತು. ಜಿಯೋ ಮಾರುಕಟ್ಟೆ ಪ್ರವೇಶದ ಬಳಿಕ ಬಿಎಸ್ಸೆನ್ನೆಲ್ ಬಹುತೇಕ ಹಿನ್ನೆಲೆಗೆ ಸರಿದುಹೋಗಿತ್ತು. ಅದು ಇನ್ನೂ ಕೂಡ 2ಜಿ ಮತ್ತು 3ಜಿ ನೆಟ್ವರ್ಕ್ ಹಂತದಲ್ಲಿದೆ. ಇತ್ತೀಚೆಗೆ ಸರ್ಕಾರ ಬೆಂಬಲದೊಂದಿಗೆ ಬಿಎಸ್ಸೆನ್ನೆಲ್ ಚೇತರಿಕೆ ಕಾಣುತ್ತಿದೆ. ಬಿಎಸ್ಸೆನ್ನೆಲ್​ಗೆ 5ಜಿ ಮತ್ತು 5ಜಿ ಸ್ಪೆಕ್ಟ್ರಂ ಹಂಚಿಕೆಯೂ ಸಿಕ್ಕಿದೆ. ಈ ಮೂಲಕ ಜಿಯೋ ಮತ್ತು ಏರ್ಟೆಲ್​ಗೆ ಬಿಎಸ್ಸೆನ್ನೆಲ್ ಪ್ರಬಲ ಸ್ಪರ್ಧೆ ಒಡ್ಡಲು ಅಣಿಯಾಗುತ್ತಿದೆ.

ಬಿಎಸ್ಸೆನ್ನೆಲ್ ಚೇತರಿಕೆಗಾಗಿ ಸರ್ಕಾರ ಮೂರನೇ ಪ್ಯಾಕೇಜ್ ಬಿಡುಗಡೆ ಮಾಡಿದೆ. 2019, 2022 ಮತ್ತು 2023ರಲ್ಲಿ ಬಿಎಸ್ಸೆನ್ನೆಲ್​ಗೆ ಸಾವಿರಾರು ಕೋಟಿ ರೂ ಮೊತ್ತದ ಹಣದ ನೆರವು ಸಿಕ್ಕಿದೆ. ಹೆಚ್ಚೂಕಡಿಮೆ ಮೂರು ಲಕ್ಷ ಕೋಟಿ ರೂನಷ್ಟು ಮೊತ್ತದ ಪ್ಯಾಕೇಜ್ ಸಿಕ್ಕಿದೆ. ಸಂಸ್ಥೆಯ ಸಾಲದ ಪ್ರಮಾಣವೂ ಗಣನೀಯವಾಗಿ ತಗ್ಗುತ್ತಿದೆ.

ಇದನ್ನೂ ಓದಿ: ನನ್ನದೇನಿದ್ದರೂ ತೆರೆದ ಪುಸ್ತಕ: ಹಿಂಡನ್ಬರ್ಗ್ ಆರೋಪ ತಳ್ಳಿಹಾಕಿದ ಸೆಬಿ ಮುಖ್ಯಸ್ಥೆ ಮಾಧವಿ

ಇತ್ತೀಚೆಗೆ ಬಿಎಸ್ಸೆನ್ನೆಲ್ ತನ್ನ ವಿವಿಧ ರೀಚಾರ್ಜ್ ದರಗಳನ್ನು ಪರಿಷ್ಕರಿಸಿದ್ದು, ಜಿಯೋ, ಏರ್ಟೆಲ್​ಗಿಂತ ಬಹಳ ಅಗ್ಗದ ದರದಲ್ಲಿ ಸರ್ವಿಸ್ ಕೊಡುತ್ತಿದೆ. ಸಾಕಷ್ಟು ಹೊಸ ಗ್ರಾಹಕರು ಬಿಎಸ್ಸೆನ್ನೆಲ್ ಕಡೆಗೆ ಹರಿದುಬರುತ್ತಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ