AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮೂಲ ಕೆಲಸಗಳತ್ತ ಗಮನ ಕೊಡಿ: ಬ್ಯಾಂಕುಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ; ಏನಿದು ಕೋರ್ ಬ್ಯಾಂಕಿಂಗ್ ಚಟುವಟಿಕೆ?

Finance minister Nirmala Sitharaman and RBI Governor Shaktikanta Das on Banks: ಬ್ಯಾಂಕುಗಳು ತಮ್ಮ ಮೂಲ ಕೆಲಸಗಳಾದ ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯತ್ತ ಗಮನ ಹರಿಸಬೇಕು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ. ಬ್ಯಾಂಕುಗಳ ಆದಾಯಮೂಲವಾದ ಸಾಲ ನೀಡುವಿಕೆಗೆ ಫಂಡಿಂಗ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರು ಈ ಕಿವಿಮಾತು ಹೇಳಿದ್ದಾರೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬ್ಯಾಂಕುಗಳು ಆಕರ್ಷಕ ಸ್ಕೀಮ್ ಮೂಲಕ ಜನಸಾಮಾನ್ಯರಿಂದ ಠೇವಣಿ ಆಕರ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಮೂಲ ಕೆಲಸಗಳತ್ತ ಗಮನ ಕೊಡಿ: ಬ್ಯಾಂಕುಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ; ಏನಿದು ಕೋರ್ ಬ್ಯಾಂಕಿಂಗ್ ಚಟುವಟಿಕೆ?
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2024 | 12:32 PM

Share

ನವದೆಹಲಿ, ಆಗಸ್ಟ್ 11: ಬ್ಯಾಂಕುಗಳು ತಮ್ಮ ಮೂಲ ಚಟುವಟಿಕೆಗಳತ್ತ ಗಮನ ಕೊಡಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ. ಆರ್​ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯ 609ನೇ ಸಭೆಯ ಬಳಿಕ ಗವರ್ನರ್ ಶಕ್ತಿಕಾಂತ ದಾಸ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ ಕಡಿಮೆ ಆಗುತ್ತಿರುವ ಬಗ್ಗೆ ಎಚ್ಚರಿಸಿದ್ದಾರೆ.

ಮೂಲ ಬ್ಯಾಂಕಿಂಗ್ ಚಟುವಟಿಕೆಯಾದ ಠೇವಣಿ ಮತ್ತು ಸಾಲ ನೀಡುವಿಕೆಯತ್ತ ಬ್ಯಾಂಕುಗಳು ಗಮನ ಹರಿಸಬೇಕು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇವೆರಡೂ ಕೂಡ ಗಾಲಿಗಳಂತೆ. ಆದರೆ, ಠೇವಣಿ ಸಂಗ್ರಹ ಮಂದಗತಿಯಲ್ಲಿ ಸಾಗುತ್ತಿದೆ. ಬ್ಯಾಂಕುಗಳು ಠೇವಣಿ ಸಂಗ್ರಹಿಸಿ, ಆ ಹಣವನ್ನು ಅವಶ್ಯಕತೆ ಇದ್ದವರಿಗೆ ಕೊಡುವ ಮೂಲ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನದೇನಿದ್ದರೂ ತೆರೆದ ಪುಸ್ತಕ: ಹಿಂಡನ್ಬರ್ಗ್ ಆರೋಪ ತಳ್ಳಿಹಾಕಿದ ಸೆಬಿ ಮುಖ್ಯಸ್ಥೆ ಮಾಧವಿ

ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯಲ್ಲಿ ಹೊಂದಿಕೆ ಆಗದೇ ಹೋದಾಗ ಬ್ಯಾಂಕುಗಳು ಜನರಿಂದ ಠೇವಣಿ ಸಂಗ್ರಹಿಸಲು ಆಕರ್ಷಕ ಸ್ಕೀಮ್​ಗಳನ್ನು ಆಫರ್ ಮಾಡಬಹುದು ಎಂದು ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.

ಆ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಉಲ್ಲೇಖಿಸಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಬ್ಯಾಂಕ್ ಬಡ್ಡಿದರಗಳು ನಿಯಂತ್ರಣಕ್ಕೆ ಒಳಪಟ್ಟಿಲ್ಲದಿರುವುದನ್ನು ತಿಳಿಸಿದ್ದಾರೆ.

ಬ್ಯಾಂಕುಗಳು ಬಡ್ಡಿದರ ನಿರ್ಧರಿಸುವ ಸ್ವಾತಂತ್ರ್ಯ ಹೊಂದಿವೆ. ಠೇವಣಿ ಆಕರ್ಷಿಸಲು ಅವು ಬಡ್ಡಿದರ ಹೆಚ್ಚಳ ಮಾಡಬಹುದು ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 675 ಬಿಲಿಯನ್ ಡಾಲರ್​ಗೆ ಏರಿಕೆ; ಹೊಸ ದಾಖಲೆ

ಜನಸಾಮಾನ್ಯರಿಂದ ಠೇವಣಿ ಸಂಗ್ರಹ: ಬ್ಯಾಂಕುಗಳಿಗೆ ದಾಸ್ ಕಿವಿ ಮಾತು

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವೇಳೆ ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಟ್ರೆಂಡ್ ಬಗ್ಗೆ ಎಚ್ಚರಿಸಿದ್ದಾರೆ. ಬ್ಯಾಂಕುಗಳು ಹಣ ಸಂಗ್ರಹಿಸಲು ರೀಟೇಲ್ ಅಲ್ಲದ ಕಿರು ಅವಧಿಯ ಠೇವಣಿ ಇತ್ಯಾದಿಯತ್ತ ವಾಲುತ್ತಿವೆ. ಆದರೆ, ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವಿನ ಸಮಸ್ಯೆ ತಲೆದೋರಬಹುದು. ಆದ್ದರಿಂದ ಬ್ಯಾಂಕುಗಳು ಆಕರ್ಷಕ ಡೆಪಾಸಿಟ್ ಪ್ಲಾನ್​ಗಳ ಮೂಲ ಗೃಹ ಹಣ ಉಳಿತಾಯಗಳನ್ನು ಸೆಳೆಯುವ ಕೆಲಸ ಮಾಡಬೇಕು ಎಂದು ಶಕ್ತಿಕಾಂತ ದಾಸ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ