ಭಾರತದ ಫಾರೆಕ್ಸ್ ರಿಸರ್ವ್ಸ್ 675 ಬಿಲಿಯನ್ ಡಾಲರ್ಗೆ ಏರಿಕೆ; ಹೊಸ ದಾಖಲೆ
India forex reserves on 2024 August 2nd: ಭಾರತದ ಫಾರೆಕ್ಸ್ ರಿಸರ್ವ್ಸ್ 674.919 ಬಿಲಿಯನ್ ಡಾಲರ್ಗೆ ಏರಿದೆ. ಆಗಸ್ಟ್ 2ರಂದು ಅಂತ್ಯಗೊಂಡ ಒಂದು ವಾರದಲ್ಲಿ 7.533 ಬಿಲಿಯನ್ ಡಾಲರ್ನಷ್ಟು ಸಂಪತ್ತು ವೃದ್ಧಿಸಿದೆ. ವಿದೇಶೀ ಕರೆನ್ಸಿ ಆಸ್ತಿ ಮತ್ತು ಚಿನ್ನದ ಮೀಸಲು ನಿಧಿಯಲ್ಲಿ ಗಣನೀಯ ಹೆಚ್ಚಳ ಆಗಿರುವುದು ಆರ್ಬಿಐ ಬಿಡುಗಡೆ ಮಾಡಿದ ಅಂಕಿ ಅಂಶದಿಂದ ಗೊತ್ತಾಗಿದೆ.
ನವದೆಹಲಿ, ಆಗಸ್ಟ್ 11: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಒಂದು ವಾರದಲ್ಲಿ 7.533 ಬಿಲಿಯನ್ ಡಾಲರ್ನಷ್ಟು ಹೆಚ್ಚಳ ಪಡೆದಿದೆ. ಆರ್ಬಿಐ ಈ ವಾರಾಂತ್ಯದಲ್ಲಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಗಸ್ಟ್ 2ರಂದು ಭಾರತದ ಫಾರೆಕ್ಸ್ ಮೀಸಲು ನಿಧಿ 674.919 ಬಿಲಿಯನ್ ಡಾಲರ್ ಇದೆ. ಹಿಂದಿನ ವಾರದಲ್ಲಿ (ಜುಲೈ 26) 3.471 ಬಿಲಿಯನ್ ಡಾಲರ್ ಇಳಿಕೆ ಕಂಡಿದ್ದರೂ ಅದಕ್ಕೂ ಹಿಂದಿನ ವಾರದಲ್ಲಿ ಮೊದಲ ಬಾರಿಗೆ 670 ಬಿಲಿಯನ್ ಡಾಲರ್ ಗಡಿ ಮುಟ್ಟಿತ್ತು. ಈಗ ಆಗಸ್ಟ್ 2ರಂದು ಅಂತ್ಯಗೊಂಡ ವಾರದಲ್ಲಿ ಮತ್ತೆ ಭರ್ಜರಿ ಏರಿಕೆ ಪಡೆದು ಹೊಸ ದಾಖಲೆಯ ಮಟ್ಟಕ್ಕೆ ಏರಿಕೆ ಆಗಿದೆ.
ಆಗಸ್ಟ್ 2ರ ವಾರದಲ್ಲಿ ಹೆಚ್ಚಾಗಿರುವ 7.511 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ನಿಧಿಯಲ್ಲಿ ವಿದೇಶೀ ಕರೆನ್ಸಿ ಆಸ್ತಿ ಮತ್ತು ಚಿನ್ನದ ಆಸ್ತಿ ಹೆಚ್ಚಳ ಗಮನಾರ್ಹವಾಗಿವೆ. ಫಾರೀನ್ ಕರೆನ್ಸಿ ಅಸೆಟ್ಗಳು 5.162 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿವೆ. ಚಿನ್ನದ ಸಂಪತ್ತು 2.404 ಬಿಲಿಯನ್ ಡಾಲರ್ ಮೌಲ್ಯದಷ್ಟು ಹೆಚ್ಚಳವಾಗಿವೆ. ಐಎಂಎಫ್ನಲ್ಲಿರುವ ಭಾರತದ ನಿಧಿಯಲ್ಲಿ 8 ಮಿಲಿಯನ್ ಡಾಲರ್ ಏರಿಕೆ ಆಗಿದೆ. ಆದರೆ, ಎಸ್ಡಿಆರ್ಗಳು 41 ಮಿಲಿಯನ್ ಡಾಲರ್ನಷ್ಟು ಇಳಿಕೆ ಆಗಿವೆ.
ಆಗಸ್ಟ್ 2ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್
ಒಟ್ಟು ಫಾರೆಕ್ಸ್ ರಿಸರ್ವ್ಸ್: 674.919 ಬಿಲಿಯನ್ ಡಾಲರ್
- ವಿದೇಶೀ ಕರೆನ್ಸಿ ಆಸ್ತಿ: 592.039 ಬಿಲಿಯನ್ ಡಾಲರ್
- ಗೋಲ್ಡ್ ರಿಸರ್ವ್ಸ್: 60.099 ಬಿಲಿಯನ್ ಡಾಲರ್
- ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.161 ಬಿಲಿಯನ್ ಡಾಲರ್
- ಐಎಂಎಫ್ನಲ್ಲಿರುವ ರಿಸರ್ವ್ಸ್: 4.62 ಬಿಲಿಯನ್ ಡಾಲರ್.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್ಐಪಿಯಲ್ಲಿ ಶೇ. 10 ಹೆಚ್ಚಳ
ಬೇರೆ ದೇಶಗಳಲ್ಲಿ ಎಷ್ಟಿದೆ ಫಾರೆಕ್ಸ್ ಮೀಸಲು ಸಂಪತ್ತು?
- ಚೀನಾ: 3.6 ಟ್ರಿಲಿಯನ್ ಡಾಲರ್
- ಜಪಾನ್: 1.8 ಟ್ರಿಲಿಯನ್ ಡಾಲರ್
- ಸ್ವಿಟ್ಜರ್ಲ್ಯಾಂಡ್: 795 ಬಿಲಿಯನ್ ಡಾಲರ್
- ಭಾರತ: 674 ಬಿಲಿಯನ್ ಡಾಲರ್
- ರಷ್ಯಾ: 606 ಬಿಲಿಯನ್ ಡಾಲರ್
- ತೈವಾನ್: 568 ಬಿಲಿಯನ್ ಡಾಲರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ