ಮ್ಯೂಚುವಲ್ ಫಂಡ್​ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್​ಐಪಿಯಲ್ಲಿ ಶೇ. 10 ಹೆಚ್ಚಳ

Mutual funds SIPs: ಮ್ಯುಚುವಲ್ ಫಂಡ್ ಎಸ್​ಐಪಿ ಯೋಜನೆಗಳು ಜನಪ್ರಿಯವಾಗುತ್ತಿರುವುದಕ್ಕೆ ನಿದರ್ಶನವಾಗಿ ಜುಲೈ ತಿಂಗಳು ಇದೆ. ಕಳೆದ ತಿಂಗಳು ಎಸ್​ಐಪಿ ಮೂಲಕ ಆದ ಹೂಡಿಕೆಯಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಜುಲೈನಲ್ಲಿ ಬಂದ ಹೂಡಿಕೆ ಹರಿವಿನಲ್ಲಿ ಶೇ. 9ರಷ್ಟು ಕಡಿಮೆ ಆಗಿರುವುದು ಗಮನಾರ್ಹ. ಲಿಕ್ವಿಡ್ ಫಂಡ್​ಗಳಿಗೆ ಹೆಚ್ಚಿನ ಒಳಹರಿವು ಸಿಕ್ಕಿದೆ.

ಮ್ಯೂಚುವಲ್ ಫಂಡ್​ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್​ಐಪಿಯಲ್ಲಿ ಶೇ. 10 ಹೆಚ್ಚಳ
ಮ್ಯೂಚುವಲ್ ಫಂಡ್​
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Aug 09, 2024 | 3:26 PM

ನವದೆಹಲಿ, ಆಗಸ್ಟ್ 9: ಜುಲೈ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಹರಿದು ಬಂದ ಹೂಡಿಕೆಯಲ್ಲಿ ಶೇ. 9ರಷ್ಟು ಕಡಿಮೆ ಆಗಿದೆ. ಆದರೆ, ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ ಎಸ್​ಐಪಿ ಮೂಲಕ ಆದ ಹೂಡಿಕೆಯಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ. ಎಎಂಎಫ್​ಐನ ಇತ್ತೀಚಿನ ದತ್ತಾಂಶದ ಪ್ರಕಾರ ಮ್ಯೂಚುವಲ್ ಫಂಡ್​ಗಳಲ್ಲಿ ಒಳಹರಿವು ಕಂಡ ಮಾಸಿಕ ಎಸ್​ಐಪಿಗಳ ಪ್ರಮಾಣ ಜುಲೈನಲ್ಲಿ 23,332 ಕೋಟಿ ರೂ ಆಗಿದೆ. ಈಕ್ವಿಟಿ ಮಾರುಕಟ್ಟೆ ಇತಿಹಾಸದಲ್ಲಿ ಎಸ್​ಐಪಿ ಒಂದು ತಿಂಗಳಲ್ಲಿ 23,000 ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು. 2024ರ ಜೂನ್ ತಿಂಗಳಲ್ಲಿ ಎಸ್​ಐಪಿ ಮೊತ್ತ 21,262 ಕೋಟಿ ರೂ ಆಗಿತ್ತು.

ಮ್ಯೂಚುವಲ್ ಫಂಡ್​ಗಳ ಎಯುಎಂ ಅಥವಾ ನಿರ್ವಹಣೆಯ ಆಸ್ತಿ ಜೂನ್​ನಲ್ಲಿ 60.89 ಲಕ್ಷ ಕೋಟಿ ರೂ ಇದ್ದದ್ದು ಜುಲೈನಲ್ಲಿ 64.69 ಲಕ್ಷ ಕೋಟಿ ರೂಗೆ ಏರಿದೆ. ಅಂದರೆ, ಎಯುಎಂನಲ್ಲಿ ಶೇ. 6ರಷ್ಟು ಹೆಚ್ಚಳ ಆಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಜುಲೈನಲ್ಲಿ ಕಂಡ ಒಳಹರಿವಿನಲ್ಲಿ ಶೇ. 9ರಷ್ಟು ಇಳಿಕೆ ಆಗಿದೆ. ಆದರೆ, ಡೆಟ್ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಾಗಿದೆ.

ಲಿಕ್ವಿಡ್ ಫಂಡ್​ಗಳಿಗೆ ಜುಲೈನಲ್ಲಿ ಅತಿಹೆಚ್ಚು ಹೂಡಿಕೆ ಹರಿವು ಬಂದಿದೆ. ವರದಿ ಪ್ರಕಾರ ಕಳೆದ ತಿಂಗಳಲ್ಲಿ 70,060 ಕೋಟಿ ರೂನಷ್ಟು ಹೂಡಿಕೆಗಳು ಲಿಕ್ವಿಡ್ ಫಂಡ್​ಗಳಿಗೆ ಬಂದಿದೆ. ಹಿಂದಿನ ತಿಂಗಳಾದ ಜೂನ್​ನಲ್ಲಿ ಲಿಕ್ವಿಡ್ ಫಂಡ್​ಗಳಿಂದ ಬರೋಬ್ಬರಿ 80,354 ಕೋಟಿ ರೂ ಮೊತ್ತದ ಹೂಡಿಕೆ ಹೊರ ಹೋಗಿತ್ತು. ಹೀಗಾಗಿ, ಜುಲೈನ ಈ ಡಾಟಾ ಗಮನಾರ್ಹ ಎನಿಸಿದೆ.

ಇದನ್ನೂ ಓದಿ: ಹಲ್ದೀರಾಮ್ಸ್, ಭಾರತದ ಅಗ್ರಗಣ್ಯ ಫ್ಯಾಮಿಲಿ ಬುಸಿನೆಸ್

ಇಲ್ಲಿ ಲಿಕ್ವಿಡ್ ಫಂಡ್ ಎಂದರೆ ಬಹಳ ಕಿರು ಅವಧಿಯ ಫಂಡ್​ಗಳಾಗಿರುತ್ತವೆ. ಡೆಟ್, ಬಾಂಡ್ ಮಾರುಕಟ್ಟೆಗಳಲ್ಲಿ ಈ ಫಂಡ್​ಗಳು ಹೂಡಿಕೆ ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ