ಅದಾನಿ ಗ್ರೂಪ್​ಗೆ ಬೆಂಬಲ ವ್ಯಕ್ತಪಡಿಸಿದ ಅಬುಧಾಬಿ ಐಎಚ್​ಸಿ, ಶ್ರೀಲಂಕಾ ಪೋರ್ಟ್ ಟ್ರಸ್ಟ್ ಮತ್ತು ತಾಂಜಾನಿಯಾ

Adani group gets international support despite controversy: ಅಮೆರಿದಕದಲ್ಲಿ ಅದಾನಿ ವಿರುದ್ಧ ಆರೋಪ ಪಟ್ಟಿ ದಾಖಲಾಗಿದೆ ಎನ್ನುವ ಸುದ್ದಿಯ ನಡುವೆ, ಅದಾನಿ ಗ್ರೂಪ್​ಗೆ ಅಂತಾರಾಷ್ಟ್ರೀಯವಾಗಿ ಬೆಂಬಲ ಮುಂದುವರಿದಿದೆ. ಅಬುಧಾಬಿಯ ಐಎಚ್​​ಸಿ ಸಂಸ್ಥೆ ಅದಾನಿ ಗ್ರೂಪ್ ಜೊತೆಗಿನ ನಂಟನ್ನು ಮುಂದುವರಿಸುವುದಾಗಿ ಹೇಳಿದೆ. ಶ್ರೀಲಂಕಾ ಮತ್ತು ತಾಂಜೇನಿಯಾ ದೇಶಗಳಲ್ಲಿ ಅದಾನಿ ಗ್ರೂಪ್​ನಿಂದ ನಡೆಯುತ್ತಿರುವ ಯೋಜನೆಗಳು ಅಬಾಧಿತವಾಗಿ ಮುಂದುವರಿಯಲಿವೆ.

ಅದಾನಿ ಗ್ರೂಪ್​ಗೆ ಬೆಂಬಲ ವ್ಯಕ್ತಪಡಿಸಿದ ಅಬುಧಾಬಿ ಐಎಚ್​ಸಿ, ಶ್ರೀಲಂಕಾ ಪೋರ್ಟ್ ಟ್ರಸ್ಟ್ ಮತ್ತು ತಾಂಜಾನಿಯಾ
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 6:16 PM

ನವದೆಹಲಿ, ನವೆಂಬರ್ 28: ಅಮೆರಿಕದ ಕೋರ್ಟ್​ನಲ್ಲಿ ಸಲ್ಲಿಕೆಯಾದ ಚಾರ್ಜ್​ಶೀಟ್​ನಲ್ಲಿ ಗೌತಮ್ ಅದಾನಿ ಮೊದಲಾದವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಮತ್ತೆ ವಿವಾದದ ಸುಳಿಗೆ ಸಿಲುಕಿದೆ. ಆದರೆ, ಗೌತಮ್ ಅದಾನಿಯಾಗಲೀ ಅಥವಾ ಅವರ ಜೊತೆಗಾರರಾಗಲೀ ಅಮೆರಿಕದಲ್ಲಿ ಆರೋಪ ಎದುರಿಸುತ್ತಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸ್ಟಾಕ್​ಗಳು ಮೊನ್ನೆಯಿಂದ ಹಸಿರು ಬಣ್ಣಕ್ಕೆ ತಿರುಗಿವೆ. ಗ್ರೂಪ್​ಗೆ ಅಂತಾರಾಷ್ಟ್ರೀಯ ಬೆಂಬಲವೂ ವ್ಯಕ್ತವಾಗತೊಡಗಿದೆ. ಹೂಡಿಕೆದಾರರು ಮತ್ತು ಸರ್ಕಾರಗಳು ಅದಾನಿ ಗ್ರೂಪ್ ಮೇಲೆ ವಿಶ್ವಾಸ ತೋರುವುದನ್ನು ಮುಂದುವರಿಸಿವೆ.

ಅಬುಧಾಬಿಯ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿಯು ಅದಾನಿ ಗ್ರೂಪ್ ಬಗ್ಗೆ ಸಕಾರಾತ್ಮಕ ನಿಲುವು ತೋರಿದೆ. ಅದಾನಿ ಗ್ರೂಪ್​ನ ವಿದೇಶೀ ಹೂಡಿಕೆದಾರರಲ್ಲಿ ಐಎಚ್​ಸಿ ಪ್ರಮುಖ ಸಂಸ್ಥೆ. ಸೋಲಾರ್ ಎನರ್ಜಿ ಉತ್ಪಾದನೆ ಸೇರಿದಂತೆ ಅದಾನಿ ಗ್ರೂಪ್​ನ ಹಲವು ಯೋಜನೆಗಳಿಗೆ ಐಎಚ್​ಸಿಯಿಂದ ಹಣಕಾಸು ಬೆಂಬಲ ಸಿಗುತ್ತಿದೆ.

ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಸಂಸ್ಥೆಯೂ ಅದಾನಿ ಗ್ರೂಪ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಅದಾನಿ ಗ್ರೂಪ್​ನಿಂದ ಬಂದರು ಅಭಿವೃದ್ಧಿ ಯೋಜನೆ ಚಾಲನೆಯಲ್ಲಿದೆ. ಒಂದು ಬಿಲಿಯನ್ ಡಾಲರ್​ನ ಈ ಯೋಜನೆಯಲ್ಲಿ ಕೊಲಂಬೋ ಪೋರ್ಟ್​ನಲ್ಲಿ ಒಂದು ಟರ್ಮಿನಲ್ ಅನ್ನು ಅದಾನಿ ಗ್ರೂಪ್ ನಿರ್ಮಿಸುತ್ತಿದೆ. ಇನ್ನೆರಡು ತಿಂಗಳಲ್ಲಿ ಈ ಪ್ರಾಜೆಕ್ಟ್ ಕಾರ್ಯಾಚರಣೆಗೆ ಬರಲಿದೆ. ಇದನ್ನು ರದ್ದು ಮಾಡುವ ಯಾವ ಇರಾದೆಯೂ ಈಗ ಇಲ್ಲ ಎಂದು ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಛೇರ್ಮನ್ ಅಡ್ಮಿರಲ್ ಸಿರಿಮೇವಾನ್ ರಣಸಿಂಘೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 2047ರೊಳಗೆ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಭಾರತದ ಔಷಧ ಉದ್ಯಮ

ಇನ್ನು, ತಾಂಜಾನಿಯಾ ಸರ್ಕಾರ ಕೂಡ ಅದಾನಿ ಗ್ರೂಪ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಅದಾನಿ ಪೋರ್ಟ್ಸ್ ಜೊತೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ತಾಂಜೇನಿಯಾದ ದಾರ್ ಎಸ್ ಸಲಾಮ್ ಪೋರ್ಟ್​ನ ಎರಡನೇ ಕಂಟೇನರ್ ಟರ್ಮಿನಲ್ ಅನ್ನು ಅಪರೇಟ್ ಮಾಡುವ 30 ವರ್ಷದ ಒಪ್ಪಂದವನ್ನು ಅದಾನಿ ಪೋರ್ಟ್ಸ್ ಪಡೆದಿದೆ. ಹಾಗೆಯೇ, ತಾಂಜಾನಿಯಾದ ಸರ್ಕಾರಿ ಸ್ವಾಮ್ಯದ ಇಂಟರ್ನ್ಯಾಷನಲ್ ಕಂಟೇನರ್ ಸರ್ವಿಸಸ್ ಸಂಸ್ಥೆಯಲ್ಲಿ ಶೇ. 95ರಷ್ಟು ಪಾಲನ್ನು ಅದಾನಿ ಪೋರ್ಟ್ಸ್ ಖರೀದಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ