ನವದೆಹಲಿ: ವಿಮಾನ ನಿಲ್ದಾಣಗಳನ್ನು ಕೇಂದ್ರೀಕರಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಲು ಉದ್ಯಮಿ ಗೌತಮ್ ಅದಾನಿ (Gautam Adani) ನೇತೃತ್ವದ ಅದಾನಿ ಸಮೂಹ (Adani group) ‘ಅದಾನಿ ವನ್ (Adani One app)’ ಆ್ಯಪ್ ಬಿಡುಗಡೆ ಮಾಡಿದೆ. ಈ ಕುರಿತು ಕಂಪನಿಯ ಮುಖ್ಯ ಡಿಜಿಟಲ್ ಅಧಿಕಾರಿ, ಹಿರಿಯ ಉಪಾಧ್ಯಕ್ಷ ನಿತಿನ್ ಸೇಥಿ ಮಾಹಿತಿ ನೀಡಿದ್ದಾರೆ. ಅದಾನಿ ವನ್ ಬಿಡುಗಡೆಯೊಂದಿಗೆ ನಮ್ಮ ಡಿಜಿಟಲ್ ಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ. ಸಾಂಪ್ರದಾಯಿಕ ಉದ್ಯಮಗಳಿಗೆ ಸಮಾನಾಂತರವಾಗಿ ಇದೂ ಸಹ ಕಾರ್ಯನಿರ್ವಹಿಸಲಿದೆ ಎಂದು ಸೇಥಿ ಹೇಳಿದ್ದಾರೆ.
ಈ ಆ್ಯಪ್ ಬಿಡುಗಡೆಯು ಗ್ರಾಹಕರ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಯನ್ನು ತಿಳಿಯುವ ಗುರಿ ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮತ್ತು ಅವರ ಅನುಭವವನ್ನು ಉತ್ತಮಗೊಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Holidays in 2023: 15 ಸುದೀರ್ಘ ವಾರಾಂತ್ಯಗಳು; ಇಲ್ಲಿದೆ 2023ರ ರಜೆ ವಿವರ
ವಿಮಾನಗಳ ಟಿಕೆಟ್ ಕಾಯ್ದಿರಿಸಲು, ಸುಂಕ ರಹಿತ ಅಂಗಡಿಗಳಿಂದ ಖರೀದಿ, ಕ್ಯಾಬ್ ಬುಕ್ ಮಾಡಲು, ವಿಮಾನಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಅದಾನಿ ರಿವಾರ್ಡ್ಸ್ ಪ್ರಯೋಜನಗಳನ್ನು ಪಡೆದುಕೊಳ್ಳಲು ಅದಾನಿ ವನ್ ಆ್ಯಪ್ ನೆರವಾಗಲಿದೆ. ಚೆಕ್ ಇನ್ ಬ್ಯಾಗೇಜ್ ಅಸಿಸ್ಟೆನ್ಸ್ನಂಥ ಸೇವೆಗಳನ್ನು ಪಡೆದುಕೊಳ್ಳಲೂ ಆ್ಯಪ್ ನೆರವಾಗಲಿದೆ ಎಂದು ಕಂಪನಿಯ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಅದಾನಿ ವನ್ ಆ್ಯಪ್ ಬಿಡುಗಡೆ ಮಾಡಿರುವುದು ಅದಾನಿ ಅವರ ಉದ್ದೇಶಿತ ‘ಸೂಪರ್ ಆ್ಯಪ್’ ಬಿಡುಗಡೆಗೆ ನೀಡಿರುವ ಸುಳಿವು ಆಗಿರಬಹುದು ಎನ್ನಲಾಗಿದೆ. ಮುಂದಿನ 3-6 ತಿಂಗಳುಗಳ ಒಳಗೆ ‘ಸೂಪರ್ ಆ್ಯಪ್’ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ‘ಫೈನಾನ್ಶಿಯಲ್ ಟೈಮ್ಸ್’ಗೆ ನೀಡಿದ್ದ ಸಂದರ್ಶನದಲ್ಲಿ ಗೌತಮ್ ಅದಾನಿ ತಿಳಿಸಿದ್ದರು. ಅದಾನಿ ಸಮೂಹದ ಅದಾನಿ ಡಿಜಿಟಲ್ ಲ್ಯಾಬ್ಸ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Tue, 20 December 22