ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

India looking for more trade deals: ಮೂರು ಹೊಸ ಟ್ರೇಡ್​ಗಳಿಗೆ ಸಹಿ ಹಾಕಿರುವುದು, ಹಾಗೂ ಒಂದು ಡೀಲ್ ಅನ್ನು ಜಾರಿಗೊಳಿಸಿದ್ದು ಸೇರಿ ಭಾರತದಿಂದ 2025ರಲ್ಲಿ 4 ಒಪ್ಪಂದಗಳಾಗಿವೆ. ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಿರುವುದು ಮತ್ತು ಟ್ರೇಡ್ ಡೀಲ್ ಅಂತಿಮಗೊಳ್ಳದಿರುವುದು ಭಾರತಕ್ಕೆ ಬೇರೆ ಬೇರೆ ಮಾರುಕಟ್ಟೆ ಅನ್ವೇಷಿಸುವುದು ಅನಿವಾರ್ಯವಾಗಿದೆ.

ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು
ವ್ಯಾಪಾರ

Updated on: Jan 11, 2026 | 1:36 PM

ನವದೆಹಲಿ, ಜನವರಿ 11: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ (India US trade deal) ಮಾಡಿಕೊಳ್ಳಲು ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆ ಫಲಪ್ರದವಾಗುವ ಲಕ್ಷ ಸದ್ಯಕ್ಕಂತೂ ಕಾಣುತ್ತಿಲ್ಲ. ಅಮೆರಿಕವು ಭಾರತಕ್ಕೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿರುವುದರಿಂದ ಈ ಟ್ರೇಡ್ ಡೀಲ್ ಮಹತ್ವದ್ದು. ಭಾರತಕ್ಕೆ ಹಲವು ಬಿಲಿಯನ್ ಡಾಲರ್​ಗಳಷ್ಟು ರಫ್ತಿಗೆ ಸಂಚಕಾರವಾಗಲಿದೆ. ಹೀಗಾಗಿ, ಭಾರತವು ಈ ನಷ್ಟ ಭರಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ಕಳೆದ ವರ್ಷವೇ ಮೂರು ಟ್ರೇಡ್ ಡೀಲ್ ಕುದುರಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಭಾರತದ ಆರ್ಥಿಕತೆಯು ಈಗ ಹೆಚ್ಚಾಗಿ ಅನುಭೋಗ ಮತ್ತು ಸರ್ವಿಸ್ ಸೆಕ್ಟರ್ ಮೇಲೆ ಅವಲಂಬಿತವಾಗಿದೆ. ಜಿಡಿಪಿ ಇನ್ನಷ್ಟು ವೇಗದಲ್ಲಿ ಬೆಳೆಯಬೇಕಾದರೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಕೊಡುಗೆ ಹೆಚ್ಚಬೇಕು. ಅದಕ್ಕೆ ರಫ್ತು ಹೆಚ್ಚಾಗಬೇಕು. ಹೀಗಾಗಿ, ಭಾರತವು ಅಮೆರಿಕದ ಟ್ಯಾರಿಫ್ ಹೊಡೆತದ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರುಕಟ್ಟೆ ಹುಡುಕುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

ಕಳೆದ ವರ್ಷ ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತು ಓಮನ್ ದೇಶ ಜೊತೆ 2025ರಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರೇಲಿಯಾದೊಂದಿಗಿನ ವ್ಯಾಪಾರ ಒಪ್ಪಂದವೂ ಜಾರಿಯಾಗಿದೆ. ಯೂರೋಪಿಯನ್ ಯೂನಿಯನ್, ಯೂರೇಶಿಯನ್ ಎಕನಾಮಿಕ್ ಯೂನಿಯನ್, ಮೆಕ್ಸಿಕೋ, ಚಿಲಿ, ಸೌತ್ ಅಮೆರಿಕನ್ ಮೆರ್ಕೋಸುರ್ ಟ್ರೇಡ್ ಬ್ಲಾಕ್ ಮೊದಲಾದ ದೇಶಗಳು ಮತ್ತು ಗುಂಪುಗಳ ಜೊತೆ ಭಾರತವು ಟ್ರೇಡ್ ಡೀಲ್​ಗೆ ಮಾತುಕತೆ ನಡೆಸುತ್ತಿದೆ.

ಸಮಗ್ರ ಆರ್ಥಿಕ ಸಹಭಾಗಿತ್ವದ ಚೌಕಟ್ಟಿನಡಿ (ಸಿಇಪಿಎ) ಭಾರತ ಹಲವಾರು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾ ಹೀಗೆ ವಿವಿಧ ಪ್ರದೇಶಗಳ ದೇಶಗಳೊಂದಿಗೆ ವ್ಯಾಪಾರ ಒಪ್ಪಂದವಾಗಿವೆ. ಈಗ ಈ ಒಪ್ಪಂದದ ವ್ಯಾಪ್ತಿ ಮತ್ತು ಆಳವನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತಿದೆ. ಇದರಲ್ಲಿ ಸಫಲವಾದರೆ, ಹೆಚ್ಚಿನ ಸರಕುಗಳನ್ನು ಟ್ಯಾರಿಫ್ ರಹಿತವಾಗಿ ಅಥವಾ ಕಡಿಮೆ ಟ್ಯಾರಿಫ್​ನಲ್ಲಿ ರಫ್ತು ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಭಾರತ ಮತ್ತು ಅಮೆರಿಕ ನಡುವೆ ಕ್ರಿಯೆ, ಪ್ರತಿಕ್ರಿಯೆ…

ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಜೊತೆ ಯಾವ ದೇಶಗಳೂ ವ್ಯಾಪಾರ ಮಾಡಬಾರದು ಎಂಬುದು ಅಮೆರಿಕದ ಇರಾದೆ. ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಆಮದು ಮಾಡಿಕೊಂಡಿದ್ದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ, ಶೇ. 50ರಷ್ಟು ಟ್ಯಾರಿಫ್ ಹಾಕಿದೆ. ಮುಂದೆ ಶೇ. 500 ಟ್ಯಾರಿಫ್ ಹಾಕುವ ಬೆದರಿಕೆಯನ್ನೂ ಒಡ್ಡಿದೆ. ಹೀಗಾಗಿ, ಭಾರತವೂ ಕೂಡ ಪರ್ಯಾಯ ಮಾರುಕಟ್ಟೆ ಅವಲೋಕಿಸುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Sun, 11 January 26