ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್​ಎಐ, ಆಂಥ್ರೋಪಿಕ್ ರಿಸರ್ಚರ್​ನಿಂದ ಭಯಾನಕ ಸತ್ಯ ಬೆಳಕಿಗೆ

ಎಐ ಲ್ಯಾಬ್​ಗಳು ಸೂಪರ್ ಇಂಟೆಲಿಜೆನ್ಸ್ ಸಿಸ್ಟಂಗಳನ್ನು ನಿರ್ಮಿಸಲು ಪೈಪೋಟಿ ನಡೆಸುತ್ತಿವೆ. ಆದರೆ ಈ ಸೂಪರ್ ಎಐ ಸಿಸ್ಟಂಗಳು ಮನುಷ್ಯರ ವಿನಾಶ ಮಾಡಲಿವೆ ಎಂದು ಅದೇ ಕ್ಷೇತ್ರರ ಪರಿಣಿತರೊಬ್ಬರು ಎಚ್ಚರಿಸಿದ್ದಾರೆ. ಆಂಥ್ರೋಪಿಕ್​ನಲ್ಲಿ ಹಿರಿಯ ಎಐ ರಿಸರ್ಚರ್ ಆಗಿರುವ ಜೆಕಬ್ ಕಾಕ್ಸನ್ ಎಂಬುವವರು ಈ ಎಚ್ಚರಿಕೆ ನೀಡಿದ್ದಾರೆ. ಜವಾಬ್ದಾರಿ ಇಲ್ಲದೇ ಎಐ ಸಿಸ್ಟಂಗಳನ್ನು ಬೆಳೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು ಆಂಥ್ರೋಪಿಕ್​ಗೆ ರಾಜೀನಾಮೆ ನೀಡಿದ್ದಾರೆ.

ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್​ಎಐ, ಆಂಥ್ರೋಪಿಕ್ ರಿಸರ್ಚರ್​ನಿಂದ ಭಯಾನಕ ಸತ್ಯ ಬೆಳಕಿಗೆ
ಜೇಕಬ್ ಕಾಕ್ಸನ್
Image Credit source: X user Jacob Coxon @hilbertspaess

Updated on: Sep 09, 2026 | 1:50 PM

ಸ್ಯಾನ್ ಫ್ರಾನ್ಸಿಸ್ಕೋ, ಸೆಪ್ಟೆಂಬರ್ 9: ಮನುಷ್ಯರಿಗೆ ಸಹಾಯವಾಗುವಂತಹ ಹ್ಯೂಮನಾಯ್ಡ್​ಗಳನ್ನು ನಿರ್ಮಿಸಲು ಹಲವು ಕಂಪನಿಗಳು ಪೈಪೋಟಿ ನಡೆಸುತ್ತಿವೆ. ಮನುಷ್ಯ ಆರಾಮವಾಗಿ ಕೂರುವುದಷ್ಟೇ ಬಾಕಿ ಎನ್ನುವಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ, ಅದೇ ಕ್ಷೇತ್ರದಲ್ಲಿ ರಿಸರ್ಚರ್ ಆಗಿರುವ ವ್ಯಕ್ತಿಯೊಬ್ಬರು ಬಹಳ ಭಯಾನಕವಾಗಿರುವ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. 27 ವರ್ಷದ ಎಐ ರಿಸರ್ಚರ್ ಜೇಕಬ್ ಕಾಕ್ಸನ್ (Jacob Coxon) ಅವರ ಪ್ರಕಾರ, ವಿವಿಧ ಎಐ ಲ್ಯಾಬ್​ಗಳು ನಿರ್ಮಿಸುತ್ತಿರುವ ಎಐ ಸಿಸ್ಟಂಗಳು ಕೆಲವೇ ವರ್ಷಗಳಲ್ಲಿ ಮನುಷ್ಯ ಸಂತತಿಯನ್ನು ಅಳಿಸಿಹಾಕಬಲ್ಲುವಂತೆ. ಈ ಅಪಾಯ ಗೊತ್ತಿದ್ದೂ ಕೂಡ ಈ ಕಂಪನಿಗಳು ತಮ್ಮ ಕಾರ್ಯ ಮುಂದುವರಿಸುತ್ತಿವೆ ಎಂದು ಇವರು ಹೇಳುತ್ತಾರೆ. ಆಂಥ್ರೋಪಿಕ್ ಸಂಸ್ಥೆಯಲ್ಲಿ ಸೀನಿಯರ್ ರಿಸರ್ಚರ್ ಆಗಿರುವ ಅವರು ಇದೇ ವಿಷಾದದಲ್ಲಿ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ.

ಹಿಂದೆ ‘ಓಪನ್ ಎಐ’ (OpenAI) ನಲ್ಲೂ ಕಾರ್ಯನಿರ್ವಹಿಸಿದ್ದ ಜೇಕಬ್, ಎಐ ಸುರಕ್ಷತೆ ಹಾಗೂ ನಿಯಂತ್ರಣದ ಕೊರತೆಯನ್ನು ಉಲ್ಲೇಖಿಸಿ ಈ ಕಠಿಣ ನಿರ್ಧಾರ ತಗೆದುಕೊಂಡಿದ್ದಾರೆ. ತಮ್ಮ ಎಕ್ಸ್ ಅಕೌಂಟ್​ನಲ್ಲಿ ಈ ಅಪಾಯಗಳ ಬಗ್ಗೆ ಬರೆದಿದ್ದಾರೆ. 2030ರ ಒಳಗೆ ಎಐ ಸಿಸ್ಟಂಗಳು ಮನುಷ್ಯರ ನಿರ್ನಾಮ ಮಾಡಲಿವೆ ಎಂದು ಆತಂಕ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: 6ಜಿ ನೆಟ್ವರ್ಕ್ ಅಭಿವೃದ್ಧಿಪಡಿಸಲು ಅಮೆರಿಕ ನೇತೃತ್ವದ 25 ರಾಷ್ಟ್ರಗಳ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

ಮನುಷ್ಯರ ಜೀವದೊಂದಿಗೆ ಜೂಜಾಡುತ್ತಿರುವ ಎಐ ಕಂಪನಿಗಳು

ಓಪನ್ ಎಐ ಮತ್ತು ಆಂಥ್ರೋಪಿಕ್ ಎರಡೂ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ಸ್ವತಃ ತಾನೇ ಸುಧಾರಿಸಿಕೊಳ್ಳುವ ‘ಸೂಪರ್ ಇಂಟೆಲಿಜೆನ್ಸ್’ (Self-improving Superintelligence) ತಂತ್ರಜ್ಞಾನವನ್ನು ಮೊದಲು ಅಭಿವೃದ್ಧಿಪಡಿಸಬೇಕೆನ್ನುವ ಹಪಾಹಪಿಯ ರೇಸ್ ನಡೆಸುತ್ತಿದ್ದು, ಮಾನವ ಕುಲದ ಜೀವದೊಂದಿಗೆ ಜೂಜಾಟವಾಡುತ್ತಿವೆ ಎಂದು ಜೇಕಬ್ ಕಾಕ್ಸನ್ ಹೇಳಿದ್ದಾರೆ.

“ಎಐ ತಂತ್ರಜ್ಞಾನವನ್ನು ನಿರ್ಮಿಸುತ್ತಿರುವ ಪ್ರಮುಖ ತಜ್ಞರು ಹಾಗೂ ಸಿಇಒಗಳು, ಈ ದಶಕದ ಅಂತ್ಯದ ವೇಳೆಗೆ (2030 ರೊಳಗೆ) ಎಐ ತಂತ್ರಜ್ಞಾನವು ಇಡೀ ಮಾನವ ಸಮಾಜವನ್ನು ವಿನಾಶ ಮಾಡಬಹುದು ಎಂದು ಖಾಸಗಿಯಾಗಿ ನಂಬಿದ್ದಾರೆ. ಆದರೆ ಮಾಧ್ಯಮಗಳ ಮುಂದೆ ಈ ಅಪಾಯವನ್ನು ಮರೆಮಾಚಿ ಮಾತನಾಡುತ್ತಾರೆ” ಎಂದು ಅವರು ಆರೋಪಿಸಿದ್ದಾರೆ.

ಅಪರಿಮಿತ ಸಾಮರ್ಥ್ಯ: ಶೀಘ್ರದಲ್ಲೇ ಈ ಎಐ ಸಿಸ್ಟಂಗಳು ಜಗತ್ತಿನ ಯಾವುದೇ ಕಂಪ್ಯೂಟರ್ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡುವ, ಯಾವುದೇ ರಂಗವನ್ನು ರಾತ್ರೋರಾತ್ರಿ ಬದಲಾಯಿಸುವ ಮತ್ತು ನೈಜ ಜಗತ್ತಿನ ಸಂಪನ್ಮೂಲಗಳನ್ನು ತಾನೇ ಸ್ವಾಧೀನಪಡಿಸಿಕೊಳ್ಳುವ ಅತಿಮಾನವ (Superhuman) ಸಾಮರ್ಥ್ಯ ಪಡೆಯಲಿವೆ ಎಂದು ಮಾಜಿ ಓಪನ್ ಎಐ ಮತ್ತು ಆಂಥ್ರೋಪಿಕ್​ನ ಈ ಸಂಶೋಧಕ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಭಾರತ-ಚೀನಾ ಬಾಂಧವ್ಯ ಜಗತ್ತನ್ನೇ ಪರಿವರ್ತಿಸಬಲ್ಲುದು’: BRIC ಪರಿಕಲ್ಪನೆ ಮುಂದಿಟ್ಟವನಿಂದ ಅಚ್ಚರಿ ಅನಿಸಿಕೆ

ಎಐ ಮಾಡಲ್​ಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಸರ್ಕಾರಗಳು ಕನಿಷ್ಠ ತಾತ್ಕಾಲಿಕ ನಿಷೇಧ (Temporary Ban) ಹೇರಬೇಕು ಮತ್ತು ತಂತ್ರಜ್ಞಾನದ ಸುರಕ್ಷತೆಗೆ ಜಾಗತಿಕ ನಿಯಮಾವಳಿ ರೂಪಿಸಬೇಕು ಎಂದು ಜೇಕಬ್ ಆಗ್ರಹಿಸಿದ್ದಾರೆ.

ಜೇಕಬ್ ಕಾಕ್ಸನ್ ಅವರ ಎಕ್ಸ್ ಪೋಸ್ಟ್…

ಆಂಥ್ರೋಪಿಕ್ ಸಂಸ್ಥೆಯ ಅಲೈನ್‌ಮೆಂಟ್ ಸೈನ್ಸ್ ಮುಖ್ಯಸ್ಥ ಎವಾನ್ ಹುಬಿಂಗರ್ (Evan Hubinger) ಕೂಡ ಜೇಕಬ್ ಅವರ ಆತಂಕವನ್ನು ಸರಿ ಎಂದು ಒಪ್ಪಿಕೊಂಡಿದ್ದು, ಮುಂದಿನ ದಶಕದಲ್ಲಿ ಇಂತಹ ಅಪಾಯ ಎದುರಾಗುವ ಸಾಧ್ಯತೆ ಶೇ. 10 ಕ್ಕಿಂತ ಹೆಚ್ಚಿದೆ ಎಂದು ಪ್ರತಿಕ್ರಿಯಿಸಿರುವುದು ತಂತ್ರಜ್ಞಾನ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us