AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ-ಚೀನಾ ಬಾಂಧವ್ಯ ಜಗತ್ತನ್ನೇ ಪರಿವರ್ತಿಸಬಲ್ಲುದು’: BRIC ಪರಿಕಲ್ಪನೆ ಮುಂದಿಟ್ಟವನಿಂದ ಅಚ್ಚರಿ ಅನಿಸಿಕೆ

ಭಾರತ ಮತ್ತು ಚೀನಾ ದೇಶಗಳು ತಾವು ನಿರೀಕ್ಷಿಸಿದುದಕ್ಕಿಂತಲೂ ವೇಗವಾಗಿ ಬೆಳವಣಿಗೆ ಹೊಂದಿವೆ ಎಂದು ಜಿಮ್ ಒ 'ನೀಲ್ ಅಭಿಪ್ರಾಯಪಟ್ಟಿದ್ದಾರೆ. ಈ ಎರಡು ದೇಶಗಳು ತಮ್ಮ ಭಿನ್ನಾಭಿಪ್ರಾಯ, ವಿವಾದಗಳನ್ನು ಬದಿಗೊತ್ತಿ ಜೊತೆಯಾದರೆ ಈ ಜಗತ್ತನ್ನು ಬದಲಾಯಿಸಬಹುದು ಎಂದಿದ್ದಾರೆ. ಬ್ರಿಕ್ಸ್ ಗುಂಪಿನ ಪರಿಕಲ್ಪನೆ ಮೊದಲು ಕೊಟ್ಟಿದ್ದು ಇವರೆಯೇ.

‘ಭಾರತ-ಚೀನಾ ಬಾಂಧವ್ಯ ಜಗತ್ತನ್ನೇ ಪರಿವರ್ತಿಸಬಲ್ಲುದು’: BRIC ಪರಿಕಲ್ಪನೆ ಮುಂದಿಟ್ಟವನಿಂದ ಅಚ್ಚರಿ ಅನಿಸಿಕೆ
ಜಿಮ್ ಒ'ನೀಲ್Image Credit source: Pier Marco Tacca/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2026 | 8:40 PM

Share

ನವದೆಹಲಿ, ಸೆಪ್ಟೆಂಬರ್ 8: ವಿಶ್ವದ ಅತಿದೊಡ್ಡ ಆರ್ಥಿಕತೆಯ ಗುಂಪೆನಿಸಿರುವ ಬ್ರಿಕ್ಸ್​ನ ಈ ವರ್ಷದ ಶೃಂಗಸಭೆ (Brics Summit 2026) ಭಾರತದ ರಾಜಧಾನಿ ನಗರಿಯಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 11ರಿಂದ ಮೂರು ದಿನಗಳ ಕಾಲ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ಈ ಸಮಿಟ್​ನಲ್ಲಿ 11 ರಾಷ್ಟ್ರಗಳು ಭಾಗಿಯಾಗಲಿವೆ. ಮೂಲತಃ ಭಾರತ, ಬ್ರೆಜಿಲ್, ಚೀನಾ, ರಷ್ಯಾ ಒಳಗೊಂಡ ಬ್ರಿಕ್ ಗುಂಪಾಗಿದ್ದ ಇದು ಸೌತ್ ಆಫ್ರಿಕಾ ಸೇರಿ ಒಟ್ಟು 11 ರಾಷ್ಟ್ರಗಳಿರುವ ಬ್ರಿಕ್ಸ್ ಆಗಿ ವಿಸ್ತರಣೆಗೊಂಡಿದೆ. 2006ರಲ್ಲಿ ಮೊದಲ ಬ್ರಿಕ್ ಸಭೆ ನಡೆದರೆ, 2009ರಲ್ಲಿ ಮೊದಲ ಶೃಂಗಸಭೆ ನಡೆದಿದೆ. ಆದರೆ, ಇದಕ್ಕೆ ಮುನ್ನ, 2001ರಲ್ಲೇ ಬ್ರಿಕ್ ಎಂಬ ಪರಿಕಲ್ಪನೆಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಲಾರ್ಡ್ ಜಿಮ್ ಒ’ನೀಲ್. ಈಗ ಬ್ರಿಕ್ಸ್ ಗುಂಪು ರಚನೆಯಾಗಿ ಎರಡು ದಶಕ ಗತಿಸಿದ ವಿಶೇಷ ಸಂದರ್ಭದಲ್ಲಿ ಜಿಮ್ ಅವರು ಫಸ್ಟ್ ಪೋಸ್ಟ್​ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ತಾವು ಅಂದಾಜಿಸಿದ್ದಕ್ಕಿಂತಲೂ ಭಾರತ ಮತ್ತು ಚೀನಾ ದೇಶಗಳು ಭಾರಿ ಆರ್ಥಿಕ ಪ್ರಗತಿ ಸಾಧಿಸಿವೆ. ಈ ಎರಡು ದೇಶಗಳು ತಮ್ಮ ನಡುವಿನ ದ್ವಿಪಕ್ಷೀಯ ಹಾಗೂ ಆರ್ಥಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಿಕಟ ಸಹಕಾರ ಸಾಧಿಸಿದರೆ, ಅದು ಬ್ರಿಕ್ಸ್‌ ಕೂಟಕ್ಕೆ ಮಾತ್ರವಲ್ಲದೆ ಇಡೀ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಭಾರಿ ಪರಿವರ್ತನೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ತಾಮ್ರಕ್ಕೆ ಸಿಕ್ಕಾಪಟ್ಟೆ ಬೇಡಿಕೆ; ಕಾಪರ್ ದರ ಈಗ ಸಾರ್ವಕಾಲಿಕ ಗರಿಷ್ಠ; ಈ ಲೋಹಕ್ಕೆ ಇಷ್ಟು ಬೆಲೆ ಏರಲು ಏನು ಕಾರಣ?

ನಿರೀಕ್ಷೆ ಮೀರಿದ ಭಾರತ-ಚೀನಾ ಬೆಳವಣಿಗೆ

ಕಳೆದ 25 ವರ್ಷಗಳಲ್ಲಿ ಬ್ರಿಕ್ಸ್‌ ಕೂಟದಲ್ಲಿ ರಷ್ಯಾ ಮತ್ತು ಬ್ರೆಜಿಲ್ ಆರ್ಥಿಕವಾಗಿ ಹಿನ್ನಡೆ ಕಂಡರೆ, ಭಾರತ ಮತ್ತು ಚೀನಾ ತಾವು ಅಂದಾಜಿಸಿದ್ದ ಮೂಲ ನಿರೀಕ್ಷೆಗಳನ್ನು (Original Projections) ಮೀರಿ ಅಭೂತಪೂರ್ವ ಆರ್ಥಿಕ ಜಿಗಿತ ಕಂಡಿವೆ ಎಂದು ಜಿಮ್ ಒ ನೀಲ್ ತಿಳಿಸಿದ್ದಾರೆ.

ಸಂಕೇತಗಳಿಂದ ಕಾರ್ಯರೂಪಕ್ಕೆ ಬರಬೇಕಿದೆ ಬ್ರಿಕ್ಸ್

ಬ್ರಿಕ್ಸ್‌ ಒಕ್ಕೂಟವು ಕೇವಲ ಶೃಂಗಸಭೆಗಳು ಹಾಗೂ ಹೇಳಿಕೆಗಳಿಗೆ ಸೀಮಿತವಾಗದೆ, ಜಂಟಿ ಪಾವತಿ ವ್ಯವಸ್ಥೆ (Joint Payments System), ಮುಕ್ತ ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವದಂತಹ ಗಟ್ಟಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಡಾಲರ್‌ಗೆ ಪರ್ಯಾಯವಲ್ಲ, ಪೂರಕ ವ್ಯವಸ್ಥೆ

ಬ್ರಿಕ್ಸ್‌ ದೇಶಗಳ ನಡುವೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಕಡಿಮೆ ವೆಚ್ಚದ ಗಡಿಯಾಚೆಗಿನ ವ್ಯಾಪಾರ ಪಾವತಿ ವ್ಯವಸ್ಥೆ (Cross-Border Payments) ರೂಪಿಸುವುದು ಸಾಧ್ಯವಿದೆ. ಆದರೆ ಇದು ಅಮೆರಿಕನ್ ಡಾಲರ್ ಅನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ, ಬದಲಿಗೆ ಡಾಲರ್‌ಗೆ ಪೂರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಬ್ರಿಟನ್ ದೇಶದ ಈ ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್​ಗೆ ಬ್ರಿಟನ್ ಮಾನ್ಯತೆ; ಭಾರತೀಯ ರಫ್ತುದಾರರಿಗೆ ಅನುಕೂಲ

ಆದ್ಯತೆಯ ಕ್ಷೇತ್ರಗಳು: ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಹವಾಮಾನ ವೈಪರೀತ್ಯ ಹಾಗೂ ಇಂಧನ ಭದ್ರತೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ಮತ್ತು ಪಾಶ್ಚಿಮಾತ್ಯ ದೇಶಗಳು (G7) ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಭಾರತದ ಆರ್ಥಿಕ ಭವಿಷ್ಯ ಉಜ್ವಲ

ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತವು ಜರ್ಮನಿ ಮತ್ತು ಜಪಾನ್‌ಗಳನ್ನು ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಜಿಮ್ ಒ’ನೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us