AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್​ಗೆ ಬ್ರಿಟನ್ ಮಾನ್ಯತೆ; ಭಾರತೀಯ ರಫ್ತುದಾರರಿಗೆ ಅನುಕೂಲ

ಬ್ರಿಟನ್ ತನ್ನ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕಾನಿಸಂ ವ್ಯವಸ್ಥೆಯಲ್ಲಿ ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಅನ್ನು ಮಾನ್ಯ ಮಾಡಿದೆ. ಬ್ರಿಟನ್​ಗೆ ರಫ್ತು ಮಾಡುವ ಭಾರತದ ಟ್ರೇಡರ್ ಅಥವಾ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಹಾಗೆಯೇ, ಭಾರತದ ಹಸಿರು ಇಕೋಸಿಸ್ಟಂ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ.

ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್​ಗೆ ಬ್ರಿಟನ್ ಮಾನ್ಯತೆ; ಭಾರತೀಯ ರಫ್ತುದಾರರಿಗೆ ಅನುಕೂಲ
ಕಾರ್ಬನ್ ಕ್ರೆಡಿಟ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2026 | 3:49 PM

Share

ನವದೆಹಲಿ, ಸೆಪ್ಟೆಂಬರ್ 8: ಭಾರತದ ಸುಸ್ಥಿರ ಆರ್ಥಿಕತೆ ಹಾಗೂ ಹಸಿರು ಇಂಧನ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಬ್ರಿಟನ್ ದೇಶ ಅಥವಾ ಯುನೈಟೆಡ್ ಕಿಂಗ್‌ಡಮ್ (UK) ತನ್ನ ಮುಂಬರುವ ‘ಕಾರ್ಬನ್ ಗಡಿ ಹೊಂದಾಣಿಕೆ ವ್ಯವಸ್ಥೆ’ (CBAM – Carbon Border Adjustment Mechanism) ಅಡಿಯಲ್ಲಿ ಭಾರತದ ಅಧಿಕೃತ ‘ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್’ (CCTS) ಅನ್ನು ಮಾನ್ಯ ಮಾಡಲು ಸಮ್ಮತಿಸಿದೆ. ಮಾನ್ಯಗೊಂಡಿರುವ ಹೊರದೇಶಗಳ ಕಾರ್ಬನ್ ಪ್ರೈಸಿಂಗ್ ಸ್ಕೀಮ್​ಗಳ ಪಟ್ಟಿಗೆ ಭಾರತದ ಸಿಸಿಟಿಎಸ್ ಅನ್ನು ಒಳಗೊಳ್ಳಲಾಗಿದೆ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.

ಬ್ರಿಟನ್ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಲು ಉದ್ದೇಶಿಸಿರುವ ಇಂಗಾಲದ ತೆರಿಗೆಯಿಂದ (Carbon Tax) ಭಾರತೀಯ ರಫ್ತುದಾರರು ಮತ್ತು ಉದ್ಯಮಗಳಿಗೆ ಇದರಿಂದ ಭಾರಿ ವಿನಾಯಿತಿ ಹಾಗೂ ಅನುಕೂಲ ಸಿಗಲಿದೆ.

ಇದನ್ನೂ ಓದಿ: 669 ಕಿ.ಮೀ. ರೇಂಜ್ ನೀಡುವ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಬಿಎಂಡಬ್ಲ್ಯು; ಬೆಲೆ ₹79.60 ಲಕ್ಷ

ಭಾರತದ ರಫ್ತುದಾರರಿಗೆ ಕಾರ್ಬನ್ ತೆರಿಗೆಯ ದ್ವಿಗುಣ ಭಾರ ತಪ್ಪಲಿದೆ

ಬ್ರಿಟನ್‌ಗೆ ರಫ್ತಾಗುವ ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ ಮತ್ತು ಗೊಬ್ಬರದಂತಹ ಇಂಗಾಲದ ಸಾಂದ್ರತೆ ಹೆಚ್ಚಿರುವ ಉತ್ಪನ್ನಗಳಿಗೆ ಭಾರತದಲ್ಲಿ ಈಗಾಗಲೇ ಕಾರ್ಬನ್ ಕ್ರೆಡಿಟ್ ಪಾವತಿಸಿದ್ದರೆ, ಬ್ರಿಟನ್ ಗಡಿಯಲ್ಲಿ ಹೆಚ್ಚುವರಿಯಾಗಿ ಭಾರಿ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಸಿಗಲಿದೆ.

ಯುರೋಪಿಯನ್ ಯೂನಿಯನ್ (EU) ನಂತಹ ದೇಶಗಳು ಕಠಿಣ ಕಾರ್ಬನ್ ತೆರಿಗೆ ಜಾರಿಗೆ ತರುತ್ತಿರುವಾಗ, ಬ್ರಿಟನ್ ಭಾರತದ ನಿಕಟ ಯೋಜನೆಯನ್ನು ಗುರುತಿಸಿರುವುದು ಭಾರತೀಯ ರಫ್ತು ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.

ದೇಶೀಯ ಹಸಿರು ಇಂಧನ ಮಾರುಕಟ್ಟೆಗೆ ಉತ್ತೇಜನ: ಭಾರತ ಸರ್ಕಾರವು ಜಾರಿಗೆ ತಂದಿರುವ ಸಿ ಸಿ ಟಿ ಎಸ್‌ (CCTS) ವ್ಯವಸ್ಥೆಗೆ ಜಾಗತಿಕ ಮಟ್ಟದ ಮಾನ್ಯತೆ ಸಿಕ್ಕಂತಾಗಿದ್ದು, ದೇಶೀಯ ಕಂಪನಿಗಳು ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಹೆಜ್ಜೆ ಇಡಲು ಪ್ರೇರಣೆಯಾಗಲಿದೆ.

ಇದನ್ನೂ ಓದಿ:ಹೊಸ ಇಟಿಎಫ್ ಟ್ರೇಡಿಂಗ್ ನಿಯಮಗಳು ಇಂದಿನಿಂದ ಜಾರಿಗೆ; ಹೂಡಿಕೆದಾರರ ಮೇಲಾಗುವ ಪ್ರಮುಖ ಬದಲಾವಣೆಗಳಿವು…

ಇತ್ತೀಚಿನ ದ್ವಿಪಕ್ಷೀಯ ವ್ಯಾಪಾರ ಚರ್ಚೆಗಳಲ್ಲಿ ಈ ಪ್ರಮುಖ ನಿರ್ಧಾರಕ್ಕೆ ಬರಲಾಗಿದ್ದು, ಮುಂಬರುವ ದಿನಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಹಸಿರು ಆರ್ಥಿಕ ಸಹಭಾಗಿತ್ವಕ್ಕೆ ಇದು ಬಲ ನೀಡಲಿದೆ ಎಂದು ವ್ಯಾಪಾರ ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ