
ನವದೆಹಲಿ, ಜೂನ್ 24: ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿ ಏರ್ ಇಂಡಿಯಾ ವಿಮಾನಾಪಘಾತವಾಗಿ 270ಕ್ಕೂ ಹೆಚ್ಚು ಮಂದಿ ಬಲಿಯಾದ ಘಟನೆ ಎಂದಿಗೂ ಮರೆಯಲಾಗದಂಥದ್ದು. ಈ ದುರಂತ ಘಟಿಸುವ ಕೆಲವೇ ದಿನ ಮೊದಲು ಏರ್ ಇಂಡಿಯಾ ಸಿಇಒ ಕ್ಯಾಂಬೆಲ್ ವಿಲ್ಸನ್ (Air India CEO Campbell Wilson) ಅವರಿಗೆ ಭರ್ಜರಿ ಸಂಬಳ ಹೆಚ್ಚಳ ಮಾಡಲಾಗಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ದಿ ಮಿಂಟ್ ಪತ್ರಿಕೆಯಲ್ಲಿ ಇವತ್ತು ಬಂದಿರುವ ವರದಿ ಪ್ರಕಾರ ವಿಲ್ಸನ್ ಅವರಿಗೆ ನಿಗದಿತ ಸಂಬಳ ಸೇರಿ ಒಟ್ಟು ವಾರ್ಷಿಕ ಸಂಭಾವನೆ 27.75 ಕೋಟಿ ರೂ ಆಫರ್ ಮಾಡಲಾಗಿದೆ. 2025ರ ಏಪ್ರಿಲ್ 1ರಿಂದ ಈ ಹೊಸ ಸಂಭಾವನೆ ಚಾಲ್ತಿಗೆ ಬರುತ್ತದೆ.
2022ರಲ್ಲಿ ಏರ್ ಇಂಡಿಯಾ ಸಿಇಒ ಆಗಿ ನೇಮಕವಾದ ಕ್ಯಾಂಪ್ಬೆಲ್ ವಿಲ್ಸನ್ ಅವರು 2023-24ರ ವರ್ಷದಲ್ಲಿ 18.96 ಕೋಟಿ ರೂ ಸಂಬಳ ಪಡೆದಿದ್ದರು. ಅವರನ್ನು ನೇಮಿಸಿಕೊಂಡಾಗ 21 ಕೋಟಿ ರೂಗೂ ಹೆಚ್ಚಿನ ಸಂಬಳದ ಆಶ್ವಾಸನೆ ಕೊಡಲಾಗಿತ್ತು. ಈ ವರ್ಷ ಆ ಆಶ್ವಾಸನೆಗಿಂತ ಹೆಚ್ಚಿನ ಮೊತ್ತದ ಸಂಬಳವು ವಿಲ್ಸನ್ ಅವರಿಗೆ ಆಫರ್ ಮಾಡಲಾಗಿದೆ. ಹಿಂದಿನ ವರ್ಷದ ಸಂಬಳಕ್ಕೆ ಹೋಲಿಸಿದರೆ ಈಗ ಅವರ ಸ್ಯಾಲರಿ ಶೇ. 46ರಷ್ಟು ಹೆಚ್ಚಾದಂತಾಗಿದೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್
ವರದಿ ಪ್ರಕಾರ ಏರ್ ಇಂಡಿಯಾ ಸಿಇಒ ಅವರ ಹೊಸ ಸ್ಯಾಲರಿ ಪ್ಯಾಕೇಜ್ನಲ್ಲಿ ಕೈಗೆ ಸಿಗುವ ಫಿಕ್ಸೆಡ್ ಸ್ಯಾಲರಿ 11.1 ಕೋಟಿ ರೂ ಮಾತ್ರವೇ. ಇನ್ನುಳಿದದ್ದು ಪರ್ಫಾರ್ಮೆನ್ಸ್ ಆಧಾರಿತ ಭತ್ಯೆಗಳಾಗಿವೆ.
ಒಟ್ಟು ಪ್ಯಾಕೇಜ್: 27.75 ಕೋಟಿ ರೂ
ಇದರೊಂದಿಗೆ ಸಿಇಒ ಅವರಿಗೆ ಆಫರ್ ಮಾಡಲಾದ ಪ್ಯಾಕೇಜ್ನಲ್ಲಿ ಶೇ. 60ಕ್ಕಿಂತ ಹೆಚ್ಚಿನ ಮೊತ್ತವು ಪರ್ಫಾರ್ಮೆನ್ಸ್ ಆಧಾರಿತವಾಗಿದ್ದಾಗಿದೆ. ಅಂದರೆ, ಏರ್ ಇಂಡಿಯಾ ಕಂಪನಿ ಎಷ್ಟು ಉನ್ನತಿ ಸಾಧಿಸುತ್ತದೆ, ಸಿಇಒ ಆಗಿ ವಿಲ್ಸನ್ ಹೇಗೆ ಕಾರ್ಯ ನಿಭಾಯಿಸುತ್ತಾರೆ ಎಂಬುದರ ಮೇಲೆ ಎಷ್ಟು ಸ್ಯಾಲರಿ ಸಿಗುತ್ತದೆ ಎಂಬುದು ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: Hormuz Strait: ಇರಾನ್ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?
ಈಗ ಅಹ್ಮದಾಬಾದ್ನಲ್ಲಿ ಭೀಕರ ಅಪಘಾತವಾಗಿರುವುದು, ವಿವಿಧೆಡೆ ತಾಂತ್ರಿಕ ದೋಷಗಳನ್ನು ಏರ್ ಇಂಡಿಯಾ ವಿಮಾನಗಳು ಎದುರಿಸುತ್ತಿರುವುದು ಸಿಇಒ ಕ್ಯಾಂಪೆಲ್ ವಿಲ್ಸನ್ ಅವರ ಸಂಬಳಕ್ಕೆ ಕುತ್ತು ತರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ