AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pilot Recruitment: ಏರ್ ಇಂಡಿಯಾದಿಂದ ಸದ್ಯದಲ್ಲೇ 1000 ಪೈಲಟ್​ಗಳ ನೇಮಕಾತಿ; ಹೊಸ ಸಂಬಳದ ಆಫರ್ ಒಪ್ಪಿದರಾ ಪೈಲಟ್​ಗಳು?

Air India To Recruit Over 1,000 Pilots: ಹೊಸ 470 ವಿಮಾನಗಳನ್ನು ಖರೀದಿಸುತ್ತಿರುವ ಏರ್ ಇಂಡಿಯಾ ಸಂಸ್ಥೆ ಇದೀಗ 1,000ಕ್ಕೂ ಹೆಚ್ಚು ಪೈಲಟ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಇದೇ ವೇಳೆ ಸಂಬಳ ವಿಚಾರದಲ್ಲಿ ತಗಾದೆ ತೆಗೆದಿದ್ದ ಹಾಲಿ ಪೈಲಟ್​ಗಳು ಹೊಸ ಸಂಬಳ ಸೂತ್ರ ಒಪ್ಪಿಕೊಂಡಿದ್ದಾರೆ.

Pilot Recruitment: ಏರ್ ಇಂಡಿಯಾದಿಂದ ಸದ್ಯದಲ್ಲೇ 1000 ಪೈಲಟ್​ಗಳ ನೇಮಕಾತಿ; ಹೊಸ ಸಂಬಳದ ಆಫರ್ ಒಪ್ಪಿದರಾ ಪೈಲಟ್​ಗಳು?
ಏರ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2023 | 6:41 PM

Share

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆ (Air India) ಮುಂಬರುವ ದಿನಗಳಲ್ಲಿ 1,000 ಪೈಲಟ್​ಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದರಲ್ಲಿ ಪೈಲಟ್​ಗಳು, ಕ್ಯಾಪ್ಟನ್​ಗಳು ಮತ್ತು ಟ್ರೇನರ್​ಗಳ ನೇಮಕಾತಿಯೂ ಒಳಗೊಂಡಿದೆ. ಸರ್ಕಾರಿ ಸ್ವಾಮ್ಯದ ಒಡೆತನದಿಂದ ಟಾಟಾ ಗ್ರೂಪ್​ಗೆ (Tata Group) ಒಂದು ವರ್ಷದ ಹಿಂದೆ ಮಾರಾಟವಾಗಿದ್ದ ಏರ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಬೋಯಿಂಗ್ ಮತ್ತು ಏರ್​ಬಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಒಟ್ಟು 470 ಹೊಸ ವಿಮಾನಗಳನ್ನು ಖರೀದಿಸುತ್ತಿದೆ. ಈ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೈಲಟ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಯೋಜಿಸಿದೆ. ಸದ್ಯ ಏರ್ ಇಂಡಿಯಾ ಸಂಸ್ಥೆಯಲ್ಲಿ 1,800 ಕ್ಕೂ ಹೆಚ್ಚು ಪೈಲಟ್​ಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಹೊಸ 1,000 ಮಂದಿ ಪೈಲಟ್​ಗಳ ನೇಮಕಾತಿ ಆಗಲಿದೆ.

ಹೊಸ ನೇಮಕಾತಿ ನಡೆಯಲಿರುವ ಸಂಗತಿಯನ್ನು ಏರ್ ಇಂಡಿಯಾದ ಜಾಹೀರಾತೊಂದು ದೃಢಪಡಿಸಿದೆ. ಈ ಜಾಹೀರಾತು ಪ್ರಕಾರ ಎ320, ಬಿ777, ಬಿ787, ಬಿ737 ವಿಮಾನಗಳಲ್ಲಿ ಕ್ಯಾಪ್ಟನ್ಸ್, ಫಸ್ಟ್ ಆಫೀಸರ್ಸ್, ಟ್ರೇನರ್ಸ್​ಗಳಿಗೆ ಕೆಲಸ ಮಾಡುವ ಅವಕಾಶಗಳನ್ನು ಕೊಡುತ್ತಿದ್ದೇವೆ ಎಂದು ಹೇಳಲಾಗಿದೆ.

ಮ್ಯಾನೇಜ್ಮೆಂಟ್ ಹೇಳಿದ ಸಂಬಳಕ್ಕೆ ಒಪ್ಪಿಕೊಂಡರಾ ಪೈಲಟ್​ಗಳು?

ಏರ್ ಇಂಡಿಯಾ ಸಂಸ್ಥೆ ಮತ್ತು ಅದರ ಪೈಲಟ್​ಗಳ ಮಧ್ಯೆ ಸಂಬಳ ವಿಚಾರದಲ್ಲಿ ಉಂಟಾದ ತಗಾದೆ ಶಮನಗೊಂಡಂತೆ ತೋರುತ್ತಿದೆ. ಕಳೆದ ವಾರ ಏರ್ ಇಂಡಿಯಾ ಮುಂದಿಟ್ಟಿದ್ದ ಹೊಸ ಪರಿಷ್ಕೃತ ಸಂಬಳ ವ್ಯವಸ್ಥೆಯನ್ನು ಬಹುತೇಕ ಪೈಲಟ್​ಗಳು ಒಪ್ಪಿಕೊಂಡಿದ್ದಾರೆ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಕ್ಯಾಂಪ್​ಬೆಲ್ ವಿಲ್ಸನ್ ಏಪ್ರಿಲ್ 28, ಶುಕ್ರವಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿSBI: ಎಸ್​ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್​ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ

ಪೈಲಟ್​ಗಳು ಪರಿಷ್ಕೃತ ಸಂಬಳದ ಆಫರ್ ಅನ್ನು ಒಪ್ಪಿಕೊಂಡರೂ ಎರಡು ಪೈಲಟ್ ಒಕ್ಕೂಟಗಳು ಸಮ್ಮತಿಸಿಲ್ಲ ಎನ್ನಲಾಗಿದೆ. ಇವುಗಳಿಂದ ಔಪಚಾರಿಕವಾಗಿ ಪ್ರತಿಭಟನೆ ಮುಂದುವರಿಯಬಹುದು. ಈ ಒಕ್ಕೂಟಗಳ ಪ್ರತಿಭಟನೆಗೆ ಕೆಲ ಪೈಲಟ್​ಗಳು ಮಾತ್ರ ಕೈಜೋಡಿಸುವ ಸಾಧ್ಯತೆ ಇದೆ ಎಂಬಂತಹ ವರದಿಗಳಿವೆ.

ಪರಿವರ್ತನೆಯಲ್ಲಿ ಏರ್ ಇಂಡಿಯಾ

ಭಾರೀ ನಷ್ಟದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಸರ್ಕಾರ ಕಳೆದ ವರ್ಷದ ಜನವರಿಯಲ್ಲಿ ಟಾಟಾ ಗ್ರೂಪ್​ಗೆ ಮಾರಿತ್ತು. ಅದನ್ನು ಲಾಭದ ಹಳಿಗೆ ತರುವ ಒತ್ತಡದಲ್ಲಿ ಟಾಟಾ ಸಂಸ್ಥೆ ಇದೆ. ತಾಂತ್ರಿಕವಾಗಿ ಮತ್ತು ವ್ಯಾವಹಾರಿಕವಾಗಿ ಏರ್ ಇಂಡಿಯಾಗೆ ಹೊಸ ಸ್ಪರ್ಶ ತರಲು ಟಾಟಾ ಪ್ರಯತ್ನಿಸುತ್ತಿದೆ.

ಇದನ್ನೂ ಓದಿAxis Bank: ಆ್ಯಕ್ಸಿಸ್​ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್​ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ

ಐದು ವರ್ಷ ಅವಧಿಯ ಪರಿವರ್ತನಾ ಯೋಜನೆಯನ್ನು ಏರ್ ಇಂಡಿಯಾ ಹಾಕಿಕೊಂಡಿದೆ. ಅದರಂತೆ ಭಾರತ ಹಾಗೂ ವಿದೇಶಗಳಲ್ಲಿ ವಿಮಾನ ಸಂಚಾರ ಮಾರ್ಗಗಳ ಹೆಚ್ಚಳ, ವಿಮಾನ ಸಂಖ್ಯೆ ಹೆಚ್ಚಳ ಮಾಡುವುದೂ ಸೇರಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏರ್ ಇಂಡಿಯಾಗೆ 500ಕ್ಕೂ ಹೆಚ್ಚು ಹೊಸ ವಿಮಾನಗಳು ಬರಲಿವೆ.

ಇನ್ನು, ಏರ್ ಇಂಡಿಯಾ ಹಣಕಾಸು ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಬ್ಬಂದಿ ವರ್ಗದ ವೇತನ ಕಡಿತಕ್ಕೂ ಮುಂದಾಗಲಾಗಿದೆ. ಪೈಲಟ್ ಹಾಗು ಕ್ಯಾಬಿನ್ ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಿ ಏಪ್ರಿಲ್ 17ರಂದು ಏರ್ ಇಂಡಿಯಾ ಆಡಳಿತ ಆಫರ್ ಕೊಟ್ಟಿತ್ತು. ಪೈಲಟ್​ಗಳ ಒಕ್ಕೂಟಗಳಾದ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಶನ್ ಮತ್ತು ಇಂಡಿಯನ್ ಪೈಲಟ್ಸ್ ಗಿಲ್ಡ್ ಸಂಘಟನೆಗಳು ಈ ಹೊಸ ಸಂಬಳ ವ್ಯವಸ್ಥೆಯನ್ನು ತಿರಸ್ಕರಿಸಿವೆ. ಪೈಲಟ್​ಗಳೂ ಕೂಡ ಇದನ್ನು ಒಪ್ಪದೇ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ಪೈಲಟ್​ಗಳು ಹೊಸ ಸಂಬಳ ಸೂತ್ರಕ್ಕೆ ಒಪ್ಪಿ ತಮ್ಮ ಪ್ರತಿಭಟನೆ ನಿಲ್ಲಿಸಿರುವ ವಿಚಾರ ತಿಳಿದುಬಂದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ