Airtel: ಏರ್​ಟೆಲ್ ಬ್ಯುಸಿನೆಸ್ ಸಿಇಒ ಅಜಯ್ ಚಿಟ್ಕಾರ ರಾಜೀನಾಮೆ; ನಾಯಕತ್ವ ಮೂರು ಪಾಲು

|

Updated on: Jun 26, 2023 | 6:23 PM

Airtel Business CEO Ajay Chitkara Resigns: ಕಳೆದ 23 ವರ್ಷಗಳಿಂದ ಏರ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಅಲ್ಲಿ ಏರ್ಟೆಲ್ ಬ್ಯುಸಿನೆಸ್​ನ ಸಿಇಒ ಆಗಿದ್ದ ಅಜಯ್ ಚಿಟ್ಕಾರ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಏರ್ಟೆಲ್ ಬ್ಯುಸಿನೆಸ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

Airtel: ಏರ್​ಟೆಲ್ ಬ್ಯುಸಿನೆಸ್ ಸಿಇಒ ಅಜಯ್ ಚಿಟ್ಕಾರ ರಾಜೀನಾಮೆ; ನಾಯಕತ್ವ ಮೂರು ಪಾಲು
ಏರ್​ಟೆಲ್
Follow us on

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್​ನ ವ್ಯವಹಾರ ವಿಭಾಗವಾದ ಏರ್​ಟೆಲ್ ಬ್ಯುಸಿನೆಸ್​ನ ಸಿಇಒ ಅಜಯ್ ಚಿಟ್ಕಾರ (Ajay Chitkara) ರಾಜೀನಾಮೆ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಜಯ್ ಚಿಟ್ಕಾರ ರಾಜೀನಾಮೆ ಕೊಟ್ಟಿರುವುದಾಗಿ ಭಾರ್ತಿ ಏರ್ಟೆಲ್ ಸಂಸ್ಥೆ ಷೇರುಪೇಟೆ ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ. ಅಜಯ್ ಚಿಟ್ಕಾರ ರಾಜೀನಾಮೆ ಬಳಿಕ ಏರ್​ಟೆಲ್ ಬ್ಯುಸಿನೆಸ್ (Airtel Business) ಅನ್ನು ಮೂರು ವಿಭಾಗಗಳಾಗಿ ಮಾಡಿ ನಾಯಕತ್ವದ ಮರುರಚನೆ ಮಾಡಿರುವುದು ತಿಳಿದುಬಂದಿದೆ.

ಏರ್ಟೆಲ್ ಬ್ಯುಸಿನೆಸ್ ಅನ್ನು ಗ್ಲೋಬಲ್ ಬ್ಯುಸಿನೆಸ್, ಡೊಮೆಸ್ಟಿಕ್ ಬ್ಯುಸಿನೆಸ್ ಮತ್ತು ಎನ್​ಎಕ್ಸ್​ಟ್ರಾ (Nxtra) ಡಾಟಾ ಸೆಂಟರ್ ಎಂದು ಮೂರು ಭಾಗವಾಗಿ ವಿಭಜಿಸಲಾಗಿದೆ. ಜಾಗತಿಕ ಬ್ಯುಸಿನೆಸ್​ಗೆ ವಾಣಿ ವೆಂಕಟೇಶ್ ಮುಖ್ಯಸ್ಥೆಯಾಗಿದ್ದಾರೆ. ದೇಶೀಯ ವ್ಯವಹಾರ ವಿಭಾಗವನ್ನು ಗಣೇಶ್ ಲಕ್ಷ್ಮೀನಾರಾಯಣನ್ ಮುನ್ನಡೆಸಲಿದ್ದಾರೆ. ಎನ್​ಎಕ್ಸ್​ಟ್ರಾ ಡಾಟಾ ಸೆಂಟರ್​ಗೆ ಆಶೀಶ್ ಅರೋರಾ ನಾಯಕತ್ವ ವಹಿಸಲಿದ್ದಾರೆ ಎಂದು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಭಾರ್ತಿ ಏರ್ಟೆಲ್ ತಿಳಿಸಿದೆ.

ಇದನ್ನೂ ಓದಿIndia Russia Payment Issue: ಭಾರತ ರಷ್ಯಾ ಮಧ್ಯೆ ಚೀನಾ ಕಾಟ; ಪಾಕಿಸ್ತಾನಕ್ಕೆ ಸುಗ್ಗಿ; ಇದು ವಿಧಿ ಆಟವಾ?

‘ಏರ್​ಟೆಲ್ ಬ್ಯುಸಿನೆಸ್ ವೃದ್ಧಿಗಾಗಿ ವಾಣಿ, ಗಣೇಶ್ ಮತ್ತು ಆಶೀಶ್ ಜೊತೆ ಸೇರಿ ಕೆಲಸ ಮಾಡಲು ಎದಿರುನೋಡುತ್ತಿದ್ದೇನೆ. ಅಜಯ್ ಅವರ ಕೊಡುಗೆಯನ್ನು ಸ್ಮರಿಸಲು ಬಯಸುತ್ತೇನೆ. 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಜಯ್ ಅವರು ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ. ಏರ್​ಟೆಲ್ ಬ್ಯುಸಿನೆಸ್ ಅನ್ನು ಒಂದು ಪ್ರಬಲ ಘಟಕವಾಗಿ ರೂಪಿಸಿದ್ದಾರೆ. ಅವರ ಭವಿಷ್ಯದ ಕಾರ್ಯಗಳಿಗೆ ನನ್ನ ಶುಭ ಹಾರೈಕೆ ಇರುತ್ತದೆ’ ಎಂದು ಭಾರ್ತಿ ಏರ್ಟೆಲ್​ನ ಸಿಇಒ ಮತ್ತು ಎಂಡಿ ಗೋಪಾಲ್ ವಿಟ್ಟಲ್ ಹೇಳಿಕೆ ನೀಡಿದ್ದಾರೆ.

ರಾಜೀನಾಮೆ ನೀಡಿರುವ ಅಜಯ್ ಚಿಟ್ಕಾರ ಅವರು 2023 ಆಗಸ್ಟ್ ತಿಂಗಳ ಮೂರನೇ ವಾರದವರೆಗೂ ಕಂಪನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರು ಬೇರೆ ಯಾವ ಸಂಸ್ಥೆಗೆ ಹೋಗಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ