Airtel Recharge Plan: ಏರ್​ಟೆಲ್​ನಿಂದ ದಿನಕ್ಕೆ 2ಜಿಬಿ ಡಾಟಾ, ತಿಂಗಳಿಗೆ 300 ರೂ ಮಾತ್ರ; ಇದು ಒಂದು ವರ್ಷದ ಪ್ಲಾನ್

Airtel recharge plans Rs 3,599 and 3,999: ಉತ್ಕೃಷ್ಟ ಟೆಲಿಕಾಂ ಸೇವೆ ನೀಡುವ ಏರ್​ಟೆಲ್​ನ ಎರಡು ರೀಚಾರ್ಜ್ ಪ್ಲಾನ್​ಗಳು ಜನಪ್ರಿಯತೆ ಪಡೆಯುತ್ತಿವೆ. 365 ದಿನಗಳ ವ್ಯಾಲಿಡಿಟಿಯ 3,599 ರೂ ಮತ್ತು 3,999 ರೂ ಪ್ಲಾನ್​ಗಳು ಭರ್ಜರಿ ಡಾಟಾ ಮತ್ತು ಸಬ್​ಸ್ಕ್ರಿಪ್ಷನ್ ಪ್ಯಾಕೇಜ್ ನೀಡುತ್ತವೆ. 3,599 ರೂ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡಾಟಾ ಸಿಗುತ್ತದೆ. 3,999 ರೂ ಪ್ಲಾನ್​ನಲ್ಲಿ ದಿನಕ್ಕೆ 2.5 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ ಡಿಸ್ನಿ ಹಾಟ್​ಸ್ಟಾರ್ 1 ವರ್ಷದ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ.

Airtel Recharge Plan: ಏರ್​ಟೆಲ್​ನಿಂದ ದಿನಕ್ಕೆ 2ಜಿಬಿ ಡಾಟಾ, ತಿಂಗಳಿಗೆ 300 ರೂ ಮಾತ್ರ; ಇದು ಒಂದು ವರ್ಷದ ಪ್ಲಾನ್
ಏರ್ಟೆಲ್
Follow us
|

Updated on: Aug 06, 2024 | 3:57 PM

ಏರ್ಟೆಲ್​ನ ರೀಚಾರ್ಜ್ ದರಗಳು ಗರಿಷ್ಠ ಎನಿಸಿದರೂ ಅದರ ನೆಟ್ವರ್ಕ್ ಸರ್ವಿಸ್ ಉತ್ಕೃಷ್ಟವಾಗಿರುತ್ತದೆ. ಅದರ ವಿವಿಧ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್​ಗಳ ದರಗಳನ್ನು ಕಳೆದ ತಿಂಗಳು ಹೆಚ್ಚಿಸಲಾಗಿದೆ. ಬಹುತೇಕ ಎಲ್ಲಾ ಪ್ಲಾನ್​ಗಳ ಬೆಲೆ ಏರಿಕೆ ಮಾಡಲಾಗಿದೆ. ಏರ್ಟೆಲ್​ನ ರೀಚಾರ್ಜ್ ಪ್ಲಾನ್​ಗಳು ತುಸು ದುಬಾರಿ ಎನಿಸಿದರೂ ವಿವಿಧ ಒಟಿಟಿಗಳ ಸಬ್​ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಕೊಡುತ್ತವೆ. ಏರ್​ಟೆಲ್​ನ 365 ದಿನಗಳ ರೀಚಾರ್ಜ್ ಪ್ಲಾನ್ ತಿಂಗಳಿಗೆ 300 ರೂಗೆ ಆಕರ್ಷಕ ಡಾಟಾ ಪ್ಯಾಕೇಜ್ ಒದಗಿಸುತ್ತದೆ.

ಏರ್ಟೆಲ್ 3,599 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್

ಏರ್ಟೆಲ್ ಬಳಿ 365 ದಿನಗಳಿಗೆ ವ್ಯಾಲಿಡಿಟಿ ಇರುವ ಮೂರು ರೀಚಾರ್ಜ್ ಪ್ಲಾನ್​ಗಳಿವೆ. 1,999 ರೂ, 3,599 ರೂ ಮತ್ತು 3,999 ರೂ ರೀಚಾರ್ಜ್ ಪ್ಲಾನ್​ಗಳಿವೆ. ಇದರಲ್ಲಿ 1,999 ರೂ ಪ್ಲಾನ್​ನಲ್ಲಿ ಒಟ್ಟಾರೆ 24 ಜಿಬಿ ಡಾಟಾ ಮಾತ್ರವೇ ಸಿಗುತ್ತದೆ.

3,599 ರೂ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಹೈಸ್ಪೀಡ್ ಡಾಟಾ ಉಚಿತವಾಗಿ ಸಿಗುತ್ತದೆ. ಇದರಲ್ಲಿ ಅನ್​ಲಿಮಿಟೆಡ್ 5ಜಿ ಡಾಟಾ ಸೌಲಭ್ಯ ಇರುತ್ತದೆ. ಅಂದರೆ 5ಜಿ ನೆಟ್ವರ್ಕ್ ಇರುವ ಪ್ರದೇಶಗಳಲ್ಲಿ ನೀವು ಮುಕ್ತವಾಗಿ 5ಜಿ ಡಾಟಾ ಬಳಸಬಹುದು.

ಇದನ್ನೂ ಓದಿ: Jio Recharge Plan: ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಿ ಶಾಕ್ ಕೊಟ್ಟ ಜಿಯೋ

ಈ ರೀಚಾರ್ಜ್ ಪ್ಲಾನ್​ನಲ್ಲಿ ಅಪೋಲೋ ಸರ್ಕಲ್ ಸೌಲಭ್ಯವನ್ನು ಮೂರು ತಿಂಗಳು ಉಚಿತವಾಗಿ ಪಡೆಯಬಹುದು. ವಿಂಕ್ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಪಡೆಯಬಹುದು. ಇವೆಲ್ಲವೂ ನಿಮಗೆ ತಿಂಗಳಿಗೆ 300 ರೂ ಬೆಲೆಗೆ ಸಿಗುತ್ತದೆ.

3,999 ರೂ ಪ್ಲಾನ್​ನಲ್ಲಿ ದಿನಕ್ಕೆ ಎರಡೂವರೆ ಜಿಬಿ ಡಾಟಾವನ್ನು 365 ದಿನಗಳ ಕಾಲ ಪಡೆಯಬಹುದು. 3,599 ರೂ ಪ್ಲಾನ್​ನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳೂ ಈ ಪ್ಲಾನ್​ನಲ್ಲಿ ಸಿಗುತ್ತದೆ. ಜೊತೆಗೆ ಡಿಸ್ನಿ ಹಾಟ್​​ಸ್ಟಾರ್​ಗೆ 1 ವರ್ಷದ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಇದರ ಮೌಲ್ಯ 499 ರೂ ಆಗುತ್ತದೆ. ಅಂದರೆ ಕೇವಲ 333 ರೂಗೆ ಇವೆಲ್ಲವೂ ನಿಮಗೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ