AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Recharge Plan: ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಿ ಶಾಕ್ ಕೊಟ್ಟ ಜಿಯೋ

ರಿಲಾಯನ್ಸ್ ಜಿಯೋದ ಗ್ರಾಹಕರಲ್ಲಿ ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಇನ್ಮುಂದೆ ಸಿಕ್ಕೋದಿಲ್ಲ. ಎಆರ್​ಪಿಯು ಅಥವಾ ಸರಾಸರಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಯೋ ಈ ಎರಡು ಜನಪ್ರಿಯ ಪ್ಲಾನ್​ಗಳನ್ನು ಕೈಬಿಟ್ಟಿರುವ ಸಾಧ್ಯತೆ ಇದೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ತಮ್ಮ ಎಲ್ಲಾ ರೀಚಾರ್ಜ್ ದರಗಳನ್ನು ಕಳೆದ ತಿಂಗಳು ಏರಿಕೆ ಮಾಡಿವೆ.

Jio Recharge Plan: ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಿ ಶಾಕ್ ಕೊಟ್ಟ ಜಿಯೋ
ರಿಲಾಯನ್ಸ್ ಜಿಯೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2024 | 12:01 PM

Share

ನವದೆಹಲಿ, ಆಗಸ್ಟ್ 6: ಬಹಳ ಜನಪ್ರಿಯವಾಗಿದ್ದ ಮತ್ತು ಅನ್​ಲಿಮಿಟೆಡ್ 5ಜಿ ಡಾಟಾ ಕೊಡುತ್ತಿದ್ದ ಎರಡು ಜನಪ್ರಿಯ ಪ್ಲಾನ್​ಗಳನ್ನು ರಿಲಾಯನ್ಸ್ ಜಿಯೋ ಕೈಬಿಟ್ಟಿದೆ. ಜಿಯೋದಲ್ಲಿ 395 ರೂ ಮತ್ತು 1,559 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್​ಗಳು ಇನ್ಮುಂದೆ ಸಿಕ್ಕುವುದಿಲ್ಲ. ತನ್ನ ಸರಾಸರಿ ಆದಾಯ (ಎಆರ್​ಪಿಯು) ಹೆಚ್ಚಿಸಲು ರಿಲಾಯನ್ಸ್ ಜಿಯೋ ಮಾಡಿರುವ ದೊಡ್ಡ ಪ್ಲಾನ್​ನ ಒಂದು ಭಾಗ ಇದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್​ಗಳಲ್ಲಿ ಸಾಕಷ್ಟು ವ್ಯತ್ಯಯಗಳಾಗುವ ಸಾಧ್ಯತೆ ಇದೆ.

ರಿಲಾಯನ್ಸ್ ಜಿಯೋ ಕೈಬಿಟ್ಟಿರುವ 395 ರೂ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. 1,559 ರೂ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊದಿತ್ತು. ಈ ಎರಡೂ ಪ್ಲಾನ್​ಗಳು ಅನ್​ಲಿಮಿಟೆಡ್ 5ಜಿ ಡಾಟಾ ಆಫರ್ ಮಾಡುತ್ತಿದ್ದವು. ಬಹಳಷ್ಟು ಗ್ರಾಹಕರು ಈ ಪ್ಲಾನ್​ಗಳನ್ನು ಸಬ್​ಸ್ಕ್ರೈಬ್ ಮಾಡಿದ್ದರು. ಇದು ಜಿಯೋದ ಎಆರ್​ಪಿಯುಗೆ (ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯ) ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಪ್ಲಾನ್​ಗಳನ್ನು ಜಿಯೋ ಕೈಬಿಟ್ಟಿರಬಹುದು.

ಇದನ್ನೂ ಓದಿ: ಸ್ವದೇಶಿ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಬಿಎಸ್​ಎನ್​ಎಲ್ 4ಜಿ, ಯಾವಾಗ ಸಿಗಲಿದೆ ಹೈ ಸ್ಪೀಡ್ ಇಂಟರ್ನೆಟ್?

ಜುಲೈನಲ್ಲಿ ಜಿಯೋ ಕೈಗೊಂಡ ದರ ಹೆಚ್ಚಳ

  • 2ಜಿಬಿ ಡಾಟಾ ಮತ್ತು 28 ದಿನ ವ್ಯಾಲಿಡಿಟಿಯ ಪ್ಲಾನ್ ದರ 155 ರೂನಿಂದ 189 ರೂಗೆ ಹೆಚ್ಚಳ
  • ದಿನಕ್ಕೆ 1ಜಿಬಿ ಡಾಟಾ, 28 ದಿನ ವ್ಯಾಲಿಡಿಯ ಪ್ಲಾನ್ ದರ: 209ರೂನಿಂದ 249 ರೂಗೆ ಏರಿಕೆ.
  • ದಿನಕ್ಕೆ 1.5ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್ ದರ: 239 ರೂನಿಂದ 299 ರೂಗೆ ಏರಿಕೆ.
  • ದಿನಕ್ಕೆ 2ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್​ನ ದರ 299 ರೂನಿಂದ 349 ರೂಗೆ ಹೆಚ್ಚಳ.

ರಿಲಾಯನ್ಸ್ ಜಿಯೋದ ಈ ಬೇಸ್ ಪ್ಲಾನ್​ಗಳಷ್ಟೇ ಅಲ್ಲ, 84 ದಿನಗಳದ್ದು, 56 ದಿನಗಳದ್ದು, ಒಂದು ವರ್ಷದ್ದು ಹೀಗೆ ದೀರ್ಘಾವಧಿ ಪ್ಲಾನ್​ಗಳ ದರಗಳಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದೆ. 365 ದಿನಗಳ ವ್ಯಾಲಿಡಿಟಿ ಮತ್ತು ದಿನಕ್ಕೆ 2.5 ಜಿಬಿ ಡಾಟಾ ಕೊಡುತ್ತಿದ್ದ 2,999 ರೂ ಪ್ಲಾನ್​ನ ದರವನ್ನು 600 ರೂನಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಪ್ರೈಮ್ ಗ್ರಾಹಕರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ

5ಜಿ ನೆಟ್ವರ್ಕ್​ಗೆ ಬಹಳಷ್ಟು ಹೂಡಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಕಳೆದ ತಿಂಗಳು ಸ್ವಾಭಾವಿಕವಾಗಿ ಟೆಲಿಕಾಂ ದರಗಳನ್ನು ಏರಿಕೆ ಮಾಡಿದ್ದವು. ಇಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಇನ್ನೂ 5ಜಿ ಅಖಾಡಕ್ಕೆ ಇಳಿಯದೇ ಇರುವುದು. ಹೀಗಾಗಿ, ಬಿಎಸ್ಸೆನ್ನೆಲ್ ಅಗ್ಗದ ದರದಲ್ಲಿ 3ಜಿ ಮತ್ತು 4ಜಿ ಸೇವೆ ನೀಡಿ, ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, 5ಜಿ ಸರ್ವಿಸ್ ಬಯಸುವವರಿಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮಾತ್ರವೇ ಸದ್ಯಕ್ಕೆ ಇರುವ ಆಯ್ಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ