AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ರೀಫಂಡ್ ಆಗಿದೆ ಎಂದು ಬಂದ ಮೆಸೇಜ್​ನಲ್ಲಿರುವ ಲಿಂಕ್ ಕ್ಲಿಕ್ ಮಾಡದಿರಿ, ಜೋಕೆ; ಐಟಿ ಇಲಾಖೆ ಎಚ್ಚರಿಕೆ

Income Tax Refund scam: ನಿಮಗೆ ಆದಾಯ ತೆರಿಗೆ ರೀಫಂಡ್​ಗೆ ಅನುಮೋದನೆ ಆಗಿದೆ. ಬ್ಯಾಂಕ್ ಖಾತೆ ಸರಿ ಇದೆಯಾ ಎಂದು ಪರಿಶೀಲಿಸಿ. ಸರಿ ಇಲ್ಲದಿದ್ದರೆ ಅಕೌಂಟ್ ಮಾಹಿತಿ ಅಪ್​ಡೇಟ್ ಮಾಡಿ ಎನ್ನುವ ಮೆಸೇಜ್ ಬಹಳಷ್ಟು ಮಂದಿಗೆ ಬರುತ್ತಿದೆ. ಇನ್ಕಮ್ ಟ್ಯಾಕ್ಸ್ ವಿಭಾಗದಿಂದ ಅಧಿಕೃತವಾಗಿ ಈ ಮೆಸೇಜ್ ಬಂದಿಲ್ಲದೇ ಇದ್ದರೆ ಅಲರ್ಟ್ ಆಗಿರಿ. ಈ ಮೆಸೇಜ್​ನಲ್ಲಿರುವ ಯಾವ ಲಿಂಕ್ ಅನ್ನು ಕ್ಲಿಕ್ ಮಾಡಲು ಹೋಗಬೇಡಿ. ಕೇಂದ್ರ ಸರ್ಕಾರದ ಸೈಬರ್ ದೋಸ್ತ್ ವಿಭಾಗದಿಂದ ಅಲರ್ಟ್ ಹೊರಡಿಸಲಾಗಿದೆ

ನಿಮಗೆ ರೀಫಂಡ್ ಆಗಿದೆ ಎಂದು ಬಂದ ಮೆಸೇಜ್​ನಲ್ಲಿರುವ ಲಿಂಕ್ ಕ್ಲಿಕ್ ಮಾಡದಿರಿ, ಜೋಕೆ; ಐಟಿ ಇಲಾಖೆ ಎಚ್ಚರಿಕೆ
ರೀಫಂಡ್ ಸ್ಕ್ಯಾಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2024 | 6:31 PM

Share

ನವದೆಹಲಿ, ಆಗಸ್ಟ್ 6: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿರುವವರಲ್ಲಿ ಕೆಲವರಿಗೆ ಈಗಾಗಲೇ ರೀಫಂಡ್ ಬಂದಿದೆ. ಇನ್ನೂ ಬಹಳಷ್ಟು ಜನರು ರೀಫಂಡ್​ಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಬೇಗನೇ ರೀಫಂಡ್ ಸಿಗಬಹುದು, ಇನ್ನೂ ಕೆಲವರಿಗೆ ಹಲವು ತಿಂಗಳುಗಳೇ ಆಗಬಹುದು. ಈ ಸಂದರ್ಭದಲ್ಲಿ ತೆರಿಗೆ ಪಾವತಿದಾರರನ್ನು ವಂಚಿಸಲು ದುಷ್ಟರ ಜಾಲ ಸದಾ ಕಣ್ಣಿಟ್ಟಿರುತ್ತದೆ. ನಾನಾ ತರಹದ ಪ್ರಯತ್ನಗಳನ್ನು ವಂಚಕರು ಮಾಡುತ್ತಿರುತ್ತಾರೆ. ಅದರಲ್ಲಿ ಆಕರ್ಷಕ ಆಫರ್​ಗಳನ್ನು ಕೊಡುವ ಮೆಸೇಜ್​ನಲ್ಲಿ ಎನ್​ಕ್ರಿಪ್ಟ್ ಆಗಿರುವ ಲಿಂಕ್​ವೊಂದನ್ನು ಸೇರಿಸಿ ಜನರು ಅದನ್ನು ಕ್ಲಿಕ್ ಮಾಡುವಂತೆ ಮಾಡಿ ಆ ಮೂಲಕ ಬ್ಯಾಂಕ್ ಅಕೌಂಟ್​ನಿಂದ ಹಣ ಎಗರಿಸುವ ಕೆಲಸ ನಡೆಯುತ್ತಿರುತ್ತದೆ. ಈ ಶೈಲಿಯಲ್ಲಿಯೇ ರೀಫಂಡ್ ಬಂದಿದೆ ಎನ್ನುವ ಮೆಸೇಜ್​ನ ಸ್ಕ್ಯಾಮ್ ಎಲ್ಲೆಡೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಸೈಬರ್ ದೋಸ್ತ್ ಎಂಬ ವಿಭಾಗವೊಂದು ಸೋಷಿಯಲ್ ಮೀಡಿಯಾದಲ್ಲಿ ಈ ಸ್ಕ್ಯಾಮ್ ಬಗ್ಗೆ ಅಲರ್ಟ್ ಮೆಸೇಜ್ ಹಾಕಿದೆ.

‘ಇನ್ಕಮ್ ಟ್ಯಾಕ್ಸ್ ರೀಫಂಡ್ ಸ್ಕ್ಯಾಮ್ ಬಗ್ಗೆ ಎಚ್ಚರದಿಂದಿರಿ. ನೀವು ರೀಫಂಡ್ ಪಡೆದಿದ್ದೀರಿ ಎನ್ನುವ ಇಂಥ ಸಂದೇಶಗಳನ್ನು ವಂಚಕರು ಕಳುಹಿಸುತ್ತಿದ್ದಾರೆ. ಅಧಿಕೃತ ತಾಣಗಳ ಮೂಲಕ ಪರಿಶೀಲನೆ ನಡೆಸಿ ನಿಮ್ಮ ಹಣಕಾಸು ಮಾಹಿತಿಯನ್ನು ರಕ್ಷಿಸಿಕೊಳ್ಳಿ. ಎಚ್ಚರದಿಂದಿರಿ..’ ಎಂದು ಸೈಬರ್ ದೋಸ್ತ್​ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಏರ್​ಟೆಲ್​ನಿಂದ ದಿನಕ್ಕೆ 2ಜಿಬಿ ಡಾಟಾ, ತಿಂಗಳಿಗೆ 300 ರೂ ಮಾತ್ರ; ಇದು ಒಂದು ವರ್ಷದ ಪ್ಲಾನ್

ಈ ಪೋಸ್ಟ್​ನಲ್ಲಿ ಹಾಕಿರುವ ವಂಚಕರ ಮೆಸೇಜ್ ಈ ರೀತಿ ಇದೆ….

‘ಡಿಯರ್ ಸರ್, ನಿಮಗೆ 15,490 ರೂ ಮೊತ್ತದ ಇನ್ಕಮ್ ಟ್ಯಾಕ್ಸ್ ರೀಫಂಡ್​ಗೆ ಅನುಮೋದನೆ ಆಗಿದೆ. ಈ ಹಣ ನಿಮ್ಮ ಖಾತೆಗೆ ಶೀಘ್ರದಲ್ಲೇ ಜಮೆ ಆಗಲಿದೆ. ನಿಮ್ಮ ಖಾತೆ ಸಂಖ್ಯೆ 5XXXXX6755 ಅನ್ನು ದಯವಿಟ್ಟು ಪರಿಶೀಲಿಸಿ. ಇದು ಸರಿ ಅಲ್ಲವಾಗಿದ್ದರೆ ಈ ಕೆಳಗಿನ ಲಿಂಕ್​ಗೆ ಭೇಟಿ ಕೊಟ್ಟು ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪ್​ಡೇಟ್ ಮಾಡಿ,’ ಎಂದು ಬರೆಯಲಾಗಿದೆ.

ಈ ರೀತಿಯ ವಂಚಕ ಮೆಸೇಜ್​ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅವರು ಕೊಟ್ಟಿರುವ ವೆಬ್​ಸೈಟ್​ಗೆ ಹೋಗಿ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ನೀವು ನೀಡಿದ್ದೇ ಆದಲ್ಲಿ ಕ್ಷಣಮಾತ್ರದಲ್ಲಿ ನಿಮ್ಮ ಖಾತೆಯಿಂದ ಹಣವನ್ನು ವಂಚಕರು ಲಪಟಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಜಪಾನೀ ನಿಕ್ಕೇ ಸೂಚಿಯ ಐತಿಹಾಸಿಕ ಕುಸಿತಕ್ಕೆ ಕಾರಣವಾದ ಕ್ಯಾರಿ ಟ್ರೇಡ್ ಅಂದರೆ ಏನು?

ಈ ರೀತಿ ಎಸ್ಸೆಮ್ಮೆಸ್ ಬಂದರೆ ನೀವು ಏನು ಮಾಡಬೇಕು?

ಆಕರ್ಷಕ ಆಫರ್ ತಿಳಿಸುವ ಮತ್ತು ಹಣ ಕ್ರೆಡಿಟ್ ಆಗಲಿದೆ ಎಂದು ಹೇಳುವ ಮೆಸೇಜ್​ಗಳಲ್ಲಿ ಲಿಂಕ್ ಕೊಡಲಾಗಿರುತ್ತದೆ. ಆ ಲಿಂಕ್​ನಲ್ಲಿ ಮೂಲ ಯುಆರ್​ಎಲ್ ಅನ್ನು ಮರೆ ಮಾಚಲಾಗಿರುತ್ತದೆ. ಉದಾಹರಣೆಗೆ, ಆ ಮೆಸೇಜ್ ಇನ್ಕಮ್ ಟ್ಯಾಕ್ಸ್ ಅಥವಾ ಬೇರೆ ಅಧಿಕೃತ ವಾಹಿನಿ ಮೂಲಕ ಬಂದಿದ್ದರೆ ಲಿಂಕ್​ನಲ್ಲಿರುವ ಯುಆರ್​ಎಲ್ ಅದೇ ಹೆಸರಿನಿಂದ ಆರಂಭವಾಗುತ್ತದೆ. ವಂಚಕರು ಶಾರ್ಟ್ ಯುಆರ್​ಎಲ್ ಬಳಸುತ್ತಾರೆ. ಇದು ಅಪಾಯಕಾರಿ ಎಂಬುದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕು. ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ಕ್ಲಿಕ್ ಮಾಡಲು ಹೋಗಬೇಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು