Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ

| Updated By: ಗಣಪತಿ ಶರ್ಮ

Updated on: Nov 02, 2022 | 4:47 PM

5G network; 5ಜಿ ಸೇವೆ ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ ಬುಧವಾರ ತಿಳಿಸಿದೆ. ದೇಶದಲ್ಲಿ 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: 5ಜಿ ಸೇವೆ (5G network) ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ (Bharti Airtel) ಬುಧವಾರ ತಿಳಿಸಿದೆ. 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬಳಿಕ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್​ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಏರ್​ಟೆಲ್ ಹೇಳಿದೆ.

ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್​​ಟೆಲ್ ಹೇಳಿತ್ತು. ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಇದೀಗ ಕಂಪನಿ ತಿಳಿಸಿದೆ.

‘ಭಾರ್ತಿ ಏರ್​ಟೆಲ್​ 5ಜಿ ಗ್ರಾಹಕರ ಸಂಖ್ಯೆ 10 ಲಕ್ಷ ದಾಟಿದೆ. ವಾಣಿಜ್ಯ ಸೇವೆಗೆ ಚಾಲನೆ ನೀಡಿದ ಕೇವಲ 30 ದಿನಗಳಲ್ಲಿ ಕಂಪನಿ ಈ ಸಾಧನೆ ಮಾಡಿದೆ. ನೆಟ್​ವರ್ಕ್​ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ
Petrol, Diesel Price Cut: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ 2 ರೂ. ಇಳಿಕೆ ಸಾಧ್ಯತೆ: ವರದಿ
Petrol Price on November 2: ಕಚ್ಚಾ ತೈಲದ ಬೆಲೆ ಏರಿಕೆ; ಇಂದಿನ ಪೆಟ್ರೋಲ್- ಡೀಸೆಲ್ ದರವೆಷ್ಟು?
Gold Price Today: ಬೆಳ್ಳಿ ದರದಲ್ಲಿ ₹2,000 ಜಿಗಿತ, ಚಿನ್ನದ ದರ ತುಸು ಇಳಿಕೆ
Stock Market Updates: 61000 ಗಡಿ ದಾಟಿದ ಸೆನ್ಸೆಕ್ಸ್, 9 ತಿಂಗಳ ಬಳಿಕ ಗರಿಷ್ಠ ಗಳಿಕೆ; ನಾಲ್ಕನೇ ದಿನವೂ ಮುಂದುವರಿದ ಓಟ

ಇದನ್ನೂ ಓದಿ: India 5G Launch: ಭಾರತದಲ್ಲಿ 5ಜಿ ಯುಗ ಆರಂಭ; ಹೈಸ್ಪೀಡ್ ಇಂಟರ್ನೆಟ್​ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಇದು ಆರಂಭಿಕ ಹಂತವಷ್ಟೇ. ಆದರೆ ಗ್ರಾಹಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಬಹಳ ಉತ್ತಮವಾಗಿದೆ. ಎಲ್ಲಾ 5ಜಿ ಸಾಧನಗಳು ಏರ್‌ಟೆಲ್ 5ಜಿ ಪ್ಲಸ್​ನಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿರುವಂತೆ ನಮ್ಮ ನೆಟ್‌ವರ್ಕ್ ಅನ್ನು ಪ್ರತಿದಿನ ವಿಸ್ತರಿಸಲಾಗುತ್ತಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿದರೆ, ಮುಂದಿನ ವಾರಗಳಲ್ಲಿ ಇದು ಸಾಕಾರಗೊಳ್ಳಲಿದೆ ಎಂದು ಭಾರ್ತಿ ಏರ್​ಟೆಲ್​ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸೆಖಾನ್ ಹೇಳಿದ್ದಾರೆ.

ಇಡೀ ದೇಶವನ್ನು ಬೆಸೆಯುವ ದೃಷ್ಟಿಕೋನದೊಂದಿಗೆ ನಮ್ಮ 5ಜಿ ಸೇವೆಯನ್ನು ವಿಸ್ತರಿಸಲಿದ್ದೇವೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

ದೇಶದಲ್ಲಿ ವಾಣಿಜ್ಯ 5ಜಿ ಸೇವೆ ಪ್ರಾರಂಭವಾಗುತ್ತಿದೆ. ಆದರೆ, ಈ ಸೇವೆ ಸಾಮಾನ್ಯ ಜನರಿಗೆ ತಲುಪಲು ಇನ್ನೂ 1 ವರ್ಷ ಬೇಕಾಗಬಹುದು. 5ಜಿ ತರಂಗಾಂತರ ಹರಾಜಿನಲ್ಲಿ ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ 5ಜಿ ಸೇವೆಯನ್ನು ಆರಂಭಿಸುತ್ತಿದ್ದೇವೆ ಎಂದು ಸಂವಹನ ಸಚಿವಾಲಯ ಅಕ್ಟೋಬರ್ 1ರಂದು ಹೇಳಿಕೆಯಲ್ಲಿ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ