AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya: ಅಕ್ಷಯ ತೃತೀಯಕ್ಕೆ ಸತತ ಎರಡನೇ ವರ್ಷ ನೆಲ ಕಚ್ಚಿದ ಚಿನ್ನದ ಮಾರಾಟ

ಅಕ್ಷಯ ತೃತೀಯಕ್ಕೆ ಸತತ ಎರಡನೇ ವರ್ಷ ಚಿನ್ನದ ಮಾರಾಟ ನೆಲ ಕಚ್ಚಿದೆ. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭರ್ತಿ ಪೆಟ್ಟು ಬಿದ್ದಿದೆ.

Akshaya Tritiya: ಅಕ್ಷಯ ತೃತೀಯಕ್ಕೆ ಸತತ ಎರಡನೇ ವರ್ಷ ನೆಲ ಕಚ್ಚಿದ ಚಿನ್ನದ ಮಾರಾಟ
ಚಿನ್ನಾಭರಣ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: May 15, 2021 | 11:53 AM

ಹೆಚ್ಚೇನಲ್ಲ, ಕೇವಲ ಎರಡು ವರ್ಷದ ಹಿಂದೆ, ಅಂದರೆ 2019ನೇ ಇಸವಿಯಲ್ಲಿ ಕೂಡ ಅಕ್ಷಯ ತೃತೀಯಕ್ಕೆ ಚಿನ್ನದ ಮಾರಾಟ ಭರ್ಜರಿಯಾಗಿತ್ತು. ಆದರೆ 2020 ಮತ್ತು 2021ಕ್ಕೆ ಸತತ ಎರಡನೇ ವರ್ಷ ವ್ಯಾಪಾರ ನೆಲ ಕಚ್ಚಿಹೋಗಿದೆ. ಭಾರತದಲ್ಲಿ ಬಹುತೇಕ ಆಭರಣ ಮಳಿಗೆಗಳು ಅಕ್ಷಯ ತೃತೀಯದಂದು ಮುಚ್ಚಿದ್ದವು. ಯಾವ ದಿನದಂದು ಚಿನ್ನ ಖರೀದಿಸಿದರೆ ಶುಭ ಎಂದು ಭಾವಿಸಲಾಗುತ್ತದೋ ಆ ದಿನ ಒಂದೇ ಒಂದು ಗ್ರಾಮ್​ ಚಿನ್ನವನ್ನೂ ಮಾರಲಾಗದ ಸ್ಥಿತಿಯಲ್ಲಿ ವರ್ತಕರಿದ್ದರು. ಆದರೆ ಗ್ರಾಹಕರಿಗೆ ಚಿನ್ನವನ್ನು ಬೇರೆ ಬೇರೆ ಸ್ವರೂಪದಲ್ಲಿ ಖರೀದಿಸುವುದಕ್ಕೆ ಅವಕಾಶ ಇದ್ದೇ ಇತ್ತು. ಆದರೆ ಆಭರಣ ಅಥವಾ ಫಿಸಿಕಲ್ ಗೋಲ್ಡ್ (ಭೌತಿಕವಾಗಿ ಚಿನ್ನ) ಖರೀದಿಸಲು ಅವಕಾಶ ಇರಲಿಲ್ಲ.

ಮೇ 14ನೇ ತಾರೀಕಿನ ಶುಕ್ರವಾರದಂದು ಅಕ್ಷಯ ತೃತೀಯ ಇತ್ತು. ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಈ ದಿನ ಬಹಳ ಪವಿತ್ರವಾದ ದಿನ. ಚಿನ್ನ ಖರೀದಿ ಸೇರಿದಂತೆ ಇತರ ಶುಭ ಕಾರ್ಯಗಳನ್ನು ಮಾಡುವುದರಿಂದ ಸಂಪತ್ತು ಮತ್ತು ಅದೃಷ್ಟ ತರುತ್ತದೆ ಎಂಬ ನಂಬಿಕೆ ಇದೆ. ಕಳೆದ ವರ್ಷದಿಂದ ಏನಾಗಿದೆ ಅಂದರೆ, ಅಕ್ಷಯ ತೃತೀಯದ ದಿನದಂದು ಚಿನ್ನವನ್ನು ಆನ್​ಲೈನ್​ನಲ್ಲಿ ಖರೀದಿ ಮಾಡಬೇಕು ಅಥವಾ ಎಲ್ಲವನ್ನೂ ಬಿಟ್ಟು ಸುಮ್ಮನಾಗಬೇಕು. ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸಿಕ್ಕಾಪಟ್ಟೆ ಹೆಚ್ಚಾಗಿ ಸಾವು- ನೋವುಗಳು ಸಂಭವಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ವ್ಯಾಪಾರ ಚಟುವಟಿಕೆಗಳು ಸ್ತಬ್ಧವಾಗಿವೆ.

ದೇಶದ ಶೇ 80ರಷ್ಟು ಲಾಕ್​ಡೌನ್​ನಲ್ಲಿದೆ ಭಾರತದಲ್ಲಿ ಸತತವಾಗಿ 20ಕ್ಕೂ ಹೆಚ್ಚು ದಿನಗಳಿಂದ ನಿತ್ಯವೂ 3 ಲಕ್ಷ ಸೋಂಕು ಪ್ರಕರಣಗಳು ವರದಿ ಆಗುತ್ತಲೇ ಇದೆ. ಇನ್ನು ಒಂದು ಸಂಶೋಧನಾ ಮಾಡೆಲ್ ಪ್ರಕಾರ, ಸಾವಿನ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿ ಜುಲೈ ಕೊನೆ ಹೊತ್ತಿಗೆ 10 ಲಕ್ಷಕ್ಕೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ. “ದುರದೃಷ್ಟ ಏನೆಂದರೆ, ದೇಶದ ಶೇ 80ರಷ್ಟು ಲಾಕ್​ಡೌನ್​ನಲ್ಲಿದೆ. ಈ ವರ್ಷವೂ ಮಾರಾಟದ ಮೇಲೆ ಪರಿಣಾಮ ಆಗುತ್ತದೆ. ಕೊರೊನಾ ಎರಡನೇ ಅಲೆಯು ಕಳೆದ ವರ್ಷಕ್ಕಿಂತ ಹೆಚ್ಚು ತೀವ್ರವಾಗಿದೆ. ಇನ್ನು ಪ್ರತಿ ಕುಟುಂಬಕ್ಕೂ ಕೊರೊನಾ ವೈರಸ್ ಬಿಸಿ ತಾಗುತ್ತಿದೆ. ಆದ್ದರಿಂದ ಯಾರೂ ಚಿನ್ನ ಖರೀದಿಸುವ ಮನಸ್ಥಿತಿಯಲ್ಲಿ ಇಲ್ಲ,” ಎಂದು ಮಾಧ್ಯಮದ ಎದುರು ಹೇಳಿದ್ದಾರೆ ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಅಧ್ಯಕ್ಷ ಆಶೀಶ್ ಪೆಥೆ.

ಚಿನ್ನದ ಬೇಡಿಕೆಯು ಕಳೆದ ವರ್ಷದ ಅಕ್ಷಯ ತೃತೀಯಕ್ಕೆ ಹೋಲಿಸಿದರೆ ಅಷ್ಟೇ ಇದೆ. ಮಾರಾಟದ ವಿಷಯಕ್ಕೆ ಬಂದರೆ ಕೋವಿಡ್​ ಮುಂಚಿನ ಸ್ಥಿತಿಯ ಶೇ 10ರಿಂದ 15ರಷ್ಟಾಗುತ್ತದೆ. ಅಕ್ಷಯ ತೃತೀಯದಂದು 30ರಿಂದ 40 ಟನ್​ಗಳಷ್ಟು ಮಾರಾಟ ಆಗಿದೆ. 2021ರ ವರ್ಷದ ಮೊದಲ ಮೂರು ತಿಂಗಳು ಚಿನ್ನದ ಬೇಡಿಕೆ ಚೇತರಿಸಿಕೊಂಡಿತ್ತು. ವಿಪರೀತ ಏರಿದ್ದ ಚಿನ್ನದ ಬೆಲೆ ಇಳಿದು, ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಬೇಡಿಕೆ ಸುಧಾರಿಸಿಕೊಂಡಿತ್ತು. ಆರ್ಥಿಕ ಚಟುವಟಿಕೆ ಸಹ ಸುಧಾರಿಸಿತ್ತು. ಆದರೆ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸೋಂಕು ಪ್ರಕರಣಗಳು ಜಾಸ್ತಿಯಾಗಿ, ಹಲವು ರಾಜ್ಯಗಳಲ್ಲಿ ಲಾಕ್​ಡೌನ್​- ನಿರ್ಬಂಧಗಳನ್ನು ಹೇರಿದ ಮೇಲೆ ಚೇತರಿಕೆಗೆ ಪೆಟ್ಟು ಬಿತ್ತು.

ಕೇರಳದ ಶೇ 20ರಷ್ಟು ಆಭರಣ ಮಳಿಗೆಗಳು ಕಾರ್ಯ ನಿರ್ವಹಣೆ “ತಳಮಟ್ಟದಲ್ಲಿನ ಪರಿಸ್ಥಿತಿಗಳು ಬದಲಾಗುತ್ತಿರುವುದು ಮತ್ತು ವೈಯಕ್ತಿಕ ಆತಂಕಗಳು, ಒಟ್ಟಾರೆ ಭಾರತದಲ್ಲಿ ಅನುಕೂಲಕರ ಸನ್ನಿವೇಶ ಇಲ್ಲ. ಗ್ರಾಹಕರು ಮನೆಯಿಂದ ಹೊರಗೆ ಕಾಲಿಡುವುದಕ್ಕೆ ಸಹ ಹೆದರುತ್ತಿದ್ದಾರೆ,” ಎಂದು ಕಲ್ಯಾಣ್​ ಜ್ಯುವೆಲ್ಲರ್ಸ್​ ಇಂಡಿಯಾ ಲಿಮಿಟೆಡ್​ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ಕಲ್ಯಾಣ್​ ರಾಮನ್ ಹೇಳಿದ್ದಾರೆ. ಅಂದ ಹಾಗೆ ಕೇರಳದ ಶೇ 20ರಷ್ಟು ಆಭರಣ ಮಳಿಗೆಗಳು ಶುಕ್ರವಾರ ಕಾರ್ಯ ನಿರ್ವಹಿಸಿದ್ದು, ನಿಗದಿ ಮಾಡಿದ ಸಮಯದಲ್ಲಷ್ಟೇ ಕಾರ್ಯ ನಿರ್ವಹಿಸಿವೆ.

ಇನ್ನು ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ಆನ್​ಲೈನ್ ಖರೀದಿ ಜನರಿಗೆ ಸಲೀಸಾಗಿದೆ ಎಂಬುದು ಆಶೀಶ್ ಪೆಥೆ ಅಭಿಪ್ರಾಯ. Augmont ಡಿಜಿಗೋಲ್ಡ್ ಎಂಬ ಆನ್​ಲೈನ್ ರೀಟೇಲರ್ ಈ ಅಕ್ಷಯ ತೃತೀಯಕ್ಕೆ 30 ಕೇಜಿ ತನಕ ಚಿನ್ನ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅಕ್ಷಯ ತೃತೀಯಕ್ಕೆ 15 ಕೇಜಿ ಮಾರಾಟ ಆಗಿತ್ತು. “ಅಕ್ಷಯ ತೃತೀಯ ಎಂಬುದು ಮದುವೆ ಸೀಸನ್ ಮಧ್ಯದಲ್ಲಿ ಇರುತ್ತಿತ್ತು. ಈ ವರ್ಷ ದುರ್ಬಲವಾಗಿದೆ. ಈ ತ್ರೈಮಾಸಿಕದಲ್ಲಿ ದೊಡ್ಡ ಮಟ್ಟದಲ್ಲಿ ಪೆಟ್ಟು ಬಿದ್ದಿದೆ. ಆದರೆ ಜನರ ಜೀವ ಉಳಿಸುವುದು ಈಗ ಬಹಳ ಮುಖ್ಯ,” ಎನ್ನುತ್ತಾರೆ ಆಶೀಶ್ ಪೆಥೆ.

ಇದನ್ನೂ ಓದಿ: ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ

(Akshaya Tritiya gold sales in the country dropped in 2021 amidst Corona second wave)

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ