ಏರ್​ಟೆಲ್ ಗ್ರಾಹಕರಿಗೆ ಕೋವಿಡ್ 19 ಸನ್ನಿವೇಶಕ್ಕೆ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಬೆಂಬಲ

ಏರ್​ಟೆಲ್​ ಗ್ರಾಹಕರಿಗೆ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕವಾಗಿ ಕೋವಿಡ್​ 19 ಸಂದರ್ಭಕ್ಕೆ ಬೆಂಬಲ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಏರ್​ಟೆಲ್ ಗ್ರಾಹಕರಿಗೆ ಕೋವಿಡ್ 19 ಸನ್ನಿವೇಶಕ್ಕೆ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಬೆಂಬಲ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 15, 2021 | 6:37 PM

ನವದೆಹಲಿ (ಪಿಟಿಐ): ಗ್ರಾಹಕರಿಗೆ ವಿವಿಧ ಬಗೆಯಲ್ಲಿ ಕೋವಿಡ್ ಸನ್ನಿವೇಶಕ್ಕೆ ಬೆಂಬಲ ನೀಡುವ ಅಭಿಯಾನವನ್ನು ಏರ್​ಟೆಲ್​ನಿಂದ ಡಿಜಿಟಲ್ ಪ್ಲಾಟ್​ಫಾರ್ಮ್ ಮೂಲಕ ಆರಂಭಿಸಲಾಗಿದೆ. ಈ ಮೂಲಕ ಕೊರೊನಾ ಎರಡನೇ ಅಲೆಯಲ್ಲಿ ವಿವಿಧ ಕಂಪೆನಿಗಳು ಡಿಜಿಟಲ್ ಸಾಧನದ ಮೂಲಕ ಸಹಾಯ ಮಾಡುತ್ತಿದ್ದು, ಈಗ ಆ ಸಾಲಿಗೆ ಏರ್​ಟೆಲ್​ ಕೂಡ ಸೇರ್ಪಡೆಯಾಗಿದೆ. ಏರ್​ಟೆಲ್​ನಿಂದ ಸಮಗ್ರವಾದ, ಎಲ್ಲರಿಗೂ ಸಂಪರ್ಕಕ್ಕೆ ಸಿಗುವಂಥ ಕೋವಿಡ್ ಬೆಂಬಲಿತ ಸಂಪನ್ಮೂಲವನ್ನು ಒಗ್ಗೂಡಿಸಲಾಗಿದೆ. ಜತೆಗೆ ಏರ್​​ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್​ನಲ್ಲಿ ಕೋವಿಡ್​ಗೆ ಸಂಬಂಧಪಟ್ಟ ಮಾಹಿತಿ ಸಹ ಇದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ. “ಕೋವಿಡ್ SOS ಎಲ್ಲ ದೃಢಪಟ್ಟ ಮತ್ತು ಅಪ್​ಡೇಟ್​ ಆದ ಕಾಂಟ್ಯಾಕ್ಟ್​ಗಳನ್ನು ಒಗ್ಗೂಡಿಸುತ್ತದೆ. ಔಷಧಿ, ಆಕ್ಸಿಜನ್, ಪ್ಲಾಸ್ಮಾ ದಾನಿಗಳು, ಆಬ್ಯುಲೆನ್ಸ್​ಗಳು, ಆಸ್ಪತ್ರೆ ಬೆಡ್​ಗಳು ಮತ್ತು ಕೋವಿಡ್ ಪರೀಕ್ಷೆ ಕೇಂದ್ರಗಳ ಮಾಹಿತಿ ಕೆಲವೇ ಕ್ಲಿಕ್​​ಗಳಲ್ಲಿ ದೊರೆಯುತ್ತವೆ. ಬಳಕೆದಾರರಿಗೆ ಸೇವೆ ಪೂರೈಸುವವರ/ಸಂಪನ್ಮೂಲದ ಸಂಪರ್ಕ ಒದಗಿಸುತ್ತದೆ. ಈ ಮಾಹಿತಿ ಪಡೆಯಲು ಮೀಸಲಿಟ್ಟ ಸಮಯ ವ್ಯರ್ಥ ಆಗದಂತೆ ಖಾತ್ರಿಪಡಿಸುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೋವಿಡ್​ SOSನಲ್ಲಿ ಸಿಗುವ ಮಾಹಿತಿಯನ್ನು ಏರ್​ಟೆಲ್​ನ ತಂಡದಿಂದ ದೃಢೀಕರಿಸಲಾಗಿರುತ್ತದೆ. ಏರ್​ಟೆಲ್​ IQನಿಂದ ಈ ಪ್ಲಾಟ್​ಫಾರ್ಮ್ ಆಗಿದೆ. “ಏರ್​ಟೆಲ್ ಥ್ಯಾಂಕ್ಸ್ ಬಳಕೆದಾರರು ಕೂಡ ತಮಗೆ ಹಾಗೂ ತಮ್ಮ ಪ್ರೀತಿಪಾತ್ರರಿಗೆ ಈ ಪ್ಲಾಟ್​ಫಾರ್ಮ್ ಬಳಸಿ ಲಸಿಕೆ ಸ್ಲಾಟ್ ಬುಕ್ ಮಾಡಬಹುದು,” ಎಂದು ತಿಳಿಸಲಾಗಿದೆ. ಕೋವಿನ್ ಪ್ಲಾಟ್​ಫಾರ್ಮ್ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್​ಫೇಸ್) ಏರ್​ಟೆಲ್ ಥ್ಯಾಂಕ್ಸ್ ಆ್ಯಪ್ ಜತೆ ಸಮಗ್ರವಾಗಿದ್ದು, ಹತ್ತಿರದ ಲಸಿಕೆ ಕೇಂದ್ರಗಳು ಮತ್ತು ಲಭ್ಯವಿರುವ ಸ್ಲಾಟ್​ಗಳು ಆಗಿಂದಾಗ ಅಪ್​ಡೇಟ್​ ಆಗುತ್ತಿರುತ್ತದೆ. ಸೂಕ್ತವಾದ ಸಂಪನ್ಮೂಲ ದೊರೆಯುವುದಕ್ಕೆ ಬಳಕೆದಾರರು ಇತ್ತೀಚಿನ ವರ್ಷನ್ ಏರ್​ಟೆಲ್​ ಥ್ಯಾಂಕ್ಸ್ ಆ್ಯಪ್ (ಐಇಎಸ್, ಆಂಡ್ರಾಯಿಡ್) ಡೌನ್​ಲೋಡ್ ಮಾಡಬೇಕು. ಎಕ್ಸ್​ಪ್ಲೋರ್ ಎಂಬ ಸೆಕ್ಷನ್​ಗೆ ಹೋಗಿ, ಕೋವಿಡ್​ ಸಪೋರ್ಟ್ ಬ್ಯಾನರ್ಸ್​ ಮೇಲೆ ಕ್ಲಿಕ್ ಮಾಡಬೇಕು.

ಏರ್​ಟೆಲ್ ಐಕ್ಯೂ ಬಳಸಿಕೊಂಡು ಉದ್ಯಮಗಳು ತಮ್ಮ ಸಿಬ್ಬಂದಿಗೆ ಉಚಿಯವಾದ ಹೆಲ್ಪ್​ಲೈನ್ ಸೃಷ್ಟಿಸಬಹುದು. ಈ ಫೀಚರ್​ನಲ್ಲಿ ಏರ್​ಟೆಲ್​ನಿಂದ ಒಂದು ಹೆಲ್ಪ್​ಲೈನ್ ಸಂಖ್ಯೆಗೆ 5000 ನಿಮಿಷಗಳನ್ನು ನೀಡುತ್ತದೆ. ಸಣ್ಣ- ಮಧ್ಯಮ ಗಾತ್ರದ ಕಂಪೆನಿಗಳು ತಕ್ಷಣವೇ ಸುರಕ್ಷಿತವಾದ ಹೆಲ್ಪ್​ಲೈನ್ ಆರಂಭಿಸಬಹುದು. ಅದಕ್ಕೆ ಕಂಪೆನಿಯಲ್ಲಿ ಅದಾಗಲೇ ಮೂಲಸೌಕರ್ಯ ಇರಬೇಕೆಂಬ ಯಾವ ಅಗತ್ಯವೂ ಇಲ್ಲ. ಭಾರತದಲ್ಲಿ 2.40 ಕೋಟಿಗೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ. ಇನ್ನು ಸಾವಿನ ಸಂಖ್ಯೆ 2.65 ಲಕ್ಷ ದಾಟಿದೆ. ಅಂದ ಹಾಗೆ ಇದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರದಂದು ಅಪ್​ಡೇಟ್ ಮಾಡಿರುವಂಥ ಮಾಹಿತಿ.

ಇದನ್ನೂ ಓದಿ: Airtel Payments Bank: ಚಿನ್ನ ಖರೀದಿಗೆ ಡಿಜಿಗೋಲ್ಡ್ ಎಂಬ ಹೊಸ ಪ್ರಾಡಕ್ಟ್ ಆರಂಭಿಸಿದ ಏರ್​ಟೆಲ್​ ಪೇಮೆಂಟ್ ಬ್ಯಾಂಕ್

(Covid 19 support initiative for customers through digital platform launched by Airtel. Here are the details)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್