ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ V ಲಸಿಕೆ

ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ V ಲಸಿಕೆ
ಪ್ರಾತಿನಿಧಿಕ ಚಿತ್ರ

ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ ಲಸಿಕೆ ಹಾಕುವ ಯೋಜನೆ ಇರಿಸಿಕೊಂಡಿದೆ.

Srinivas Mata

|

May 14, 2021 | 10:05 PM


ಔಷಧ ತಯಾರಕ ಕಂಪೆನಿಯಾದ ಡಾ. ರೆಡ್ಡೀಸ್ ಶುಕ್ರವಾರದಂದು ಹೇಳಿರುವ ಪ್ರಕಾರ, ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ ಲಸಿಕೆ ಹಾಕುವ ಯೋಜನೆ ಇರಿಸಿಕೊಂಡಿದೆ. ಕನಿಷ್ಠ ಎರಡು ರಾಜ್ಯಗಳೊಂದಿಗೆ ಕಂಪೆನಿಯು ಮಾತುಕತೆ ನಡೆಸುತ್ತಿದೆ. ಶೇ 15ರಿಂದ 20ರಷ್ಟು ಆರಂಭದ ಪೂರೈಕೆಯು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುವುದು. “ಮುಂದಿನ ಎರಡು ತಿಂಗಳಲ್ಲಿ ನಮಗೆ ಆರ್​ಡಿಐಎಫ್​ನಿಂದ 3.6 ಕೋಟಿ ಡೋಸ್​ನ ಪೂರೈಕೆಯ ಭರವಸೆ ಇದೆ,​” ಎಂದು ಡಾ. ರೆಡ್ಡೀಸ್​ನಲ್ಲಿ ಬ್ರ್ಯಾಂಡೆಡ್ ಫಾರ್ಮ್ಯುಲೇಷನ್ಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಗಿರುವ ಎಂ.ವಿ.ರಮಣ ಹೇಳಿದ್ದಾರೆ.

ವಾಣಿಜ್ಯ ರವಾನೆಯು ಜೂನ್​ ಮಧ್ಯದಿಂದ ಶುರುವಾಗುವ ನಿರೀಕ್ಷೆ ಇದೆ ಎಂದು ಕಂಪೆನಿಯಿಂದ ಹೇಳಲಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಹೇಳಿರುವ ಪ್ರಕಾರ, ರಷ್ಯಾದ ಸ್ಪುಟ್ನಿಕ್ V ಕೋವಿಡ್- 19 ಲಸಿಕೆಯನ್ನು ರೂ. 948+ ಶೇ 5ರಷ್ಟು ಜಿಎಸ್​ಟಿ ಸೇರಿ ಒಂದು ಡೋಸ್​ಗೆ ರೂ. 995.40 ಆಗುತ್ತದೆ. ಈ ಮೊತ್ತವು ಸರ್ಕಾರ ಹಾಗೂ ಖಾಸಗಿ ಚಾನೆಲ್​ಗಳಿಗೆ ಒಂದೇ ಬೆಲೆ ಇರುತ್ತದೆ.

(ಮೈನಸ್) -18 ಸೆಂಟಿಗ್ರೇಡ್​ನಲ್ಲಿ ಲಸಿಕೆ ನಿರ್ವಹಣೆ ಮಾಡಬಹುದಾದ ಮೆಟ್ರೋ ನಗರಗಳ ಆಸ್ಪತ್ರೆಗಳ ಜತೆಗೆ ಕೆಲಸ ಮಾಡುತ್ತಿದ್ದೇವೆ. ಕಂಪೆನಿಯು 35 ನಗರಗಳಲ್ಲಿ ಕೆಲಸ ನಿರ್ವಹಿಸಲು ಸಿದ್ಧತೆ ನಡೆಸುತ್ತಿದೆ. ಡಾ. ರೆಡ್ಡೀಸ್ ಲೈಸೆನ್ಸಿಂಗ್ ಒಪ್ಪಂದದ ಪ್ರಕಾರ, 25 ಕೋಟಿ ಡೋಸ್ ಸ್ಪುಟ್ನಿಕ್ V ಲಸಿಕೆ ತನಕ ಉತ್ಪಾದನೆ ಮಾಡಬಹುದಾಗಿದೆ. ಪರಸ್ಪರ ಒಪ್ಪಂದದ ಮೇಲೆ ಈ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಕೂಡ ಇದೆ. ಡಾ ರೆಡ್ಡೀಸ್ ಇನ್ನೂ ಮುಂದುವರಿದು ಹೇಳಿದಂತೆ, ಒಂದು ಡೋಸ್​ನ ಸ್ಪುಟ್ನಿಕ್ ಲೈಟ್ ಲಸಿಕೆ ಭಾರತಕ್ಕೆ ಶೀಘ್ರದಲ್ಲೇ ಬರಲಿದೆ.

ಇದನ್ನೂ ಓದಿ: Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ

(Drug maker company Dr Reddy’s plan to vaccinate more than 12 crore people in India over next 8 to 12 months)

Follow us on

Related Stories

Most Read Stories

Click on your DTH Provider to Add TV9 Kannada