Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambiga Subramanian: ಹೆಮ್ಮೆಯ ಬೆಂಗಳೂರು ನಾರಿ ಅಂಬಿಗಾ ಸುಬ್ರಮಣಿಯನ್; ಸ್ವಂತವಾಗಿ ಬೆಳೆದು ಯಶಸ್ವಿ ಉದ್ಯಮಿಯಾದ ಈ ಮಹಿಳೆಯ ಸಾಧನೆ ಏನು?

Hurun's List of Wealthiest Indian Women: ಬೆಂಗಳೂರಿನಲ್ಲಿ ಸೋಷಿಯಲ್ ನೆಟ್ವರ್ಕಿಂಗ್ ಪ್ಲಾಟ್​ಫಾರ್ಮ್ ಸ್ಥಾಪಿಸಿರುವ ಅಂಬಿಗಾ ಸುಬ್ರಮಣಿಯನ್ ಅವರು ಹುರೂನ್ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಬೆಂಗಳೂರಿನವರ ಪೈಕಿ 3ನೇ ಸ್ಥಾನ ಪಡೆದಿದ್ದಾರೆ. ಕಿರಣ್ ಮಜುಮ್ದಾರ್ ಮತ್ತು ದಿವ್ಯಾ ಗೋಕುಲನಾಥ್ ನಂತರದ ಸ್ಥಾನ ಅಂಬಿಗಾರದ್ದು.

Ambiga Subramanian: ಹೆಮ್ಮೆಯ ಬೆಂಗಳೂರು ನಾರಿ ಅಂಬಿಗಾ ಸುಬ್ರಮಣಿಯನ್; ಸ್ವಂತವಾಗಿ ಬೆಳೆದು ಯಶಸ್ವಿ ಉದ್ಯಮಿಯಾದ ಈ ಮಹಿಳೆಯ ಸಾಧನೆ ಏನು?
ಅಂಬಿಕಾ ಸುಬ್ರಮಣಿಯನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 08, 2023 | 4:53 PM

ಮುಂಬೈ ವಾಣಿಜ್ಯ ನಗರಿಯಾದರೆ, ಬೆಂಗಳೂರು ಸ್ಟಾರ್ಟಪ್​ಗಳ ನಗರ. ಹಿಂದಿನಿಂದಲೂ ಹಲವು ಪ್ರಮುಖ ಸಂಸ್ಥೆಗಳು ಬೆಂಗಳೂರನ್ನು ತಮ್ಮ ಮನೆಯಾಗಿ ಆಯ್ಕೆ ಮಾಡಿಕೊಂಡಿವೆ. ಬಹಳಷ್ಟು ಉದ್ಯಮಿಗಳು ಇಲ್ಲಿ ನೆಲಯೂರಿದ್ದಾರೆ. ಅನೇಕ ವ್ಯಾವಹಾರಿಕ ಪ್ರಯೋಗಗಳು ಬೆಂಗಳೂರಿನಲ್ಲೇ ಆಗುವುದಿದೆ. ಸ್ವಂತ ಪರಿಶ್ರಮದಿಂದ ಮೇಲೇರುವವರಿಗೆ ಸಿಲಿಕಾನ್ ಸಿಟಿ ಅದಮ್ಯ ವೇದಿಕೆಯಾಗಿದೆ. ಬ್ಯುಸಿನೆಸ್ ಹಿನ್ನೆಲೆ ಇಲ್ಲದ ಹಲವು ಮಂದಿ ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಗಳಾಗಿರುವುದುಂಟು. ಹೈಫನ್ ಡಾಟ್ ಸೋಷಿಯಲ್ (Hypen.Social) ಎಂಬ ಸೋಷಿಯಲ್ ನೆಟ್ವರ್ಕಿಂಗ್ ಸಂಸ್ಥೆಯ ಸ್ಥಾಪಕಿ ಅಂಬಿಗಾ ರಾಜಾರಾಮ್ (Ambiga Jayaram) ಇಂಥ ವ್ಯಕ್ತಿಗಳಲ್ಲಿ ಒಬ್ಬರು.

ಸ್ವಂತ ಬಲದಲ್ಲಿ ಉದ್ಯಮದಲ್ಲಿ ನೆಲೆ ಕಂಡುಕೊಂಡ ಅಂಬಿಕಾ ಬೆಂಗಳೂರಿನ ಮೂರನೇ ಅತಿಶ್ರೀಮಂತ ಮಹಿಳೆ ಎನಿಸಿದ್ದಾರೆ. ಅಲ್ಲದೇ ಒಂದು ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಸ್ಟಾರ್ಟಪ್ ಅನ್ನು ಸ್ಥಾಪಿಸಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಯೂ ಅವರದ್ದಾಗಿದೆ.

ಇದನ್ನೂ ಓದಿ: ಜೊಮಾಟೋದಲ್ಲಿ ಪ್ರತೀ ಫುಡ್ ಆರ್ಡರ್ ಮೇಲೂ 2 ರೂ ಪ್ಲಾಟ್​ಫಾರ್ಮ್ ಶುಲ್ಕ; ಏನು ಕಾರಣ?

ಇತ್ತೀಚೆಗೆ ಬಿಡುಗಡೆಯಾದ ಕೋಟಕ್ ಮತ್ತು ಹುರುನ್​ನ ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸ್ವಂತ ಬಲದಿಂದ ಅತಿಶ್ರೀಮಂತರಾದವರಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಮೊದಲ ಸ್ಥಾನ ಪಡೆದಿದ್ದಾರೆ. ಬೈಜೂಸ್​ನ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಎರಡನೇ ಸ್ಥಾನ ಪಡೆದರೆ, ನಂತರದಲ್ಲಿ ಅಂಬಿಗಾ ಜಯರಾಮ್ ಅವರಿದ್ದಾರೆ. ಈ ಹುರೂನ್ ಪಟ್ಟಿ ಪ್ರಕಾರ ಅಂಬಿಗಾ ಅವರ ಬಳಿ 1,830 ಕೋಟಿ ರೂ ಮೊತ್ತದ ಸಂಪತ್ತು ಇದೆ.

ತಮಿಳುನಾಡು ಮೂಲದ ಅಂಬಿಗಾ ರಾಜಾರಾಮ್ ಚೆನ್ನೈನ ಅಣ್ಣಾ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕ ಮಿಶಿಗನ್​ನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿದ್ದಾರೆ. 1998ರಲ್ಲಿ ಮೋಟರೋಲಾದಲ್ಲಿ ವೃತ್ತಿಜೀವನ ಆರಂಭಿಸಿದ ಅವರು 2004ರಲ್ಲಿ ಮು ಸಿಗ್ಮಾ ಎಂಬ ಅನಾಲಿಟಿಕ್ಸ್ ಸಂಸ್ಥೆಯನ್ನು ಸೇರುತ್ತಾರೆ. ಇದು ಅವರ ಮಾಜಿ ಪತಿ ಧೀರಜ್ ರಾಜಾರಾಮ್ ಸಂಸ್ಥಾಪಿಸಿದ ಸಂಸ್ಥೆ. ಅಲ್ಲಿ ಹಲವು ಹುದ್ದೆಗಳಲ್ಲಿ ಇದ್ದು ಸಿಒಒ ಹಾಗೂ ನಂತರ ಸಿಇಒ ಆಗಿ ಅಂಬಿಗಾ ಕಾರ್ಯವಹಿಸುತ್ತಾರೆ.

ಇದನ್ನೂ ಓದಿ: 2,000 ರೂ ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30 ಕೊನೆಯ ದಿನ; ಬ್ಯಾಂಕುಗಳು ಯಾವ್ಯಾವಾಗ ಮುಚ್ಚಿರುತ್ತೆ ತಿಳಿದಿರಿ

ತಮ್ಮ ಪತಿಯಿಂದ ಬೇರ್ಪಟ್ಟ ಬಳಿಕ ಅಂಬಿಗಾ ಜಯರಾಮ್, ಮು ಸಿಗ್ಮಾವನ್ನು ತೊರೆಯುತ್ತಾರೆ. ಆ ಸಂಸ್ಥೆಯಲ್ಲಿ ಅಂಬಿಗಾ ಹೊಂದಿದ್ದ ಶೇ. 24ರಷ್ಟು ಪಾಲನ್ನು ಮಾಜಿ ಪತಿ ಧೀರಜ್ ಖರೀದಿಸುತ್ತಾರೆ. ಈ ವ್ಯವಹಾರದಿಂದ ಬಂದ ಹಣ ಉಪಯೋಗಿಸಿ ಹೈಫನ್ ಡಾಟ್ ಸೋಷಿಯಲ್ ಎಂಬ ಸೋಷಿಯಲ್ ನೆಟ್ವರ್ಕಿಂಗ್ ಪ್ಲಾಟ್​ಫಾರ್ಮ್ ಅನ್ನು 2018ರಲ್ಲಿ ಅಂಬಿಗಾ ಸ್ಥಾಪಿಸುತ್ತಾರೆ.

ಅಂಬಿಗಾ ಜಯರಾಮ್ ಅವರ ಉದ್ಯಮಸಾಹಸ ಇಷ್ಟಕ್ಕೇ ನಿಲ್ಲುವುದಿಲ್ಲ. ಪೈಪರ್ ಬಯೋಸೈಸನ್ಸ್, ಬಾಕ್ಸ್8, ಐಸಿಈ ಕ್ರಿಯೇಟಿವ್ ಎಕ್ಸೆಲೆನ್ಸ್, ಕಾರ್ಟರ್​ಎಕ್ಸ್ ಇತ್ಯಾದಿ ಹಲವು ಸಂಸ್ಥೆಗಳಿಗೆ ಫಂಡಿಂಗ್ ಕೂಡ ಒದಗಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ