ಜೊಮಾಟೋದಲ್ಲಿ ಪ್ರತೀ ಫುಡ್ ಆರ್ಡರ್ ಮೇಲೂ 2 ರೂ ಪ್ಲಾಟ್​ಫಾರ್ಮ್ ಶುಲ್ಕ; ಏನು ಕಾರಣ?

Zomato Platform Fee: ಫುಡ್ ಡೆಲಿವರಿ ಆ್ಯಪ್ ಜೊಮಾಟೋ ತನ್ನ ಗ್ರಾಹಕರು ಬುಕ್ ಮಾಡುವ ಪ್ರತಿಯೊಂದು ಫುಡ್ ಆರ್ಡರ್ ಮೇಲೂ 2 ರೂ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸುತ್ತಿದೆ. ಇದು ಕೆಲ ಆಯ್ದ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಸ್ವಿಗ್ಗಿ ಈ ಪ್ರಯೋಗವನ್ನು ಮೊದಲು ಆರಂಭಿಸಿತ್ತು.

ಜೊಮಾಟೋದಲ್ಲಿ ಪ್ರತೀ ಫುಡ್ ಆರ್ಡರ್ ಮೇಲೂ 2 ರೂ ಪ್ಲಾಟ್​ಫಾರ್ಮ್ ಶುಲ್ಕ; ಏನು ಕಾರಣ?
ಜೊಮಾಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 08, 2023 | 4:06 PM

ಬೆಂಗಳೂರು, ಆಗಸ್ಟ್ 8: ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮಾಟೋ (Zomato) ತನ್ನ ಪ್ಲಾಟ್​ಫಾರ್ಮ್​ನಲ್ಲಿ ಗ್ರಾಹಕರು ಮಾಡುವ ಪ್ರತಿಯೊಂದು ಆರ್ಡರ್​ಗೂ ಹೆಚ್ಚುವರಿ 2 ರೂ ಶುಲ್ಕ (platform fee) ವಿಧಿಸಲು ಆರಂಭಿಸಿದೆ. ಸದ್ಯ ಕೆಲವೇ ಆಯ್ದ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಶುಲ್ಕ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಈ ಶುಲ್ಕ ಅನ್ವಯ ಆಗಲಿದೆ. ಜೊಮಾಟೋ ಪ್ರತಿಸ್ಪರ್ಧಿ ಸ್ವಿಗ್ಗಿ (Swiggy) ನಾಲ್ಕು ತಿಂಗಳ ಹಿಂದೆಯೇ ಪ್ಲಾಟ್​ಫಾರ್ಮ್ ಫೀ ಸಂಗ್ರಹಿಸಲು ಆರಂಭಿಸಿತ್ತು. ಈಗ ಜೊಮಾಟೋ ಕೂಡ ಅದೇ ಹಾದಿ ಹಿಡಿದಿದೆ.

ಪ್ಲಾಟ್​ಫಾರ್ಮ್ ಶುಲ್ಕ ಹೇಗೆ ಅನ್ವಯ?

ಇಲ್ಲಿ ಜೊಮಾಟೋದಲ್ಲಿ ಆರ್ಡರ್ ಮೌಲ್ಯಕ್ಕೆ ಅನುಗುಣವಾಗಿ ಪ್ಲಾಟ್​ಫಾರ್ಮ್ ಶುಲ್ಕದ ಸಂಗ್ರಹ ಆಗುವುದಿಲ್ಲ. ಎಷ್ಟೇ ಮೌಲ್ಯದ ಆರ್ಡರ್ ಆದರೂ ಶುಲ್ಕ ಹಣ 2 ಮಾತ್ರವೇ ಇರುತ್ತದೆ. ನೀವು 100 ರೂ ಮೊತ್ತದ ಆರ್ಡರ್ ಮಾಡಿದರೂ ಅಷ್ಟೇ ಶುಲ್ಕ, ಎರಡು ಸಾವಿರ ರೂ ಮೌಲ್ಯದ ಆರ್ಡರ್​ಗೂ ಅಷ್ಟೇ ಶುಲ್ಕ ಇರುತ್ತದೆ.

ಇದನ್ನೂ ಓದಿ: Pepperfry CEO Death: ಪೆಪ್ಪರ್​ಫ್ರೈ ಸ್ಟಾರ್ಟಪ್​ನ ಸಿಇಒ ಅಂಬರೀಷ್ ಮೂರ್ತಿ ಹೃದಯಸ್ತಂಭನದಿಂದ ನಿಧನ

ಆರ್ಡರ್ ಬುಕ್ ಮಾಡುವಾಗ ಗ್ರಾಹಕರಿಗೆ, ‘ಬಿಲ್ ಪಾವತಿಸಲು ಮತ್ತು ಜೊಮಾಟೋ ಚಾಲನೆಯಲ್ಲಿರಲು ಸಹಾಯವಾಗಿ’ ಈ ಪ್ಲಾಟ್​ಫಾರ್ಮ್ ಫೀ ಪಡೆಯಲಾಗುತ್ತಿದೆ ಎಂದು ಜೊಮಾಟೋ ಪ್ರಾಮಾಣಿಕವಾಗಿ ಘೋಷಿಸಿದೆ.

ಸ್ವಿಗ್ಗಿ ಏಪ್ರಿಲ್ ತಿಂಗಳಲ್ಲಿ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸಲು ಆರಂಭಿಸಿತು. ಡೆಲಿವರಿ ಕ್ಷೇತ್ರ ಕಷ್ಟದಾಯಕವಾಗಿದೆ ಎಂಬ ಕಾರಣ ಕೊಟ್ಟಿತ್ತು ಸ್ವಿಗ್ಗಿ. ಆದರೆ ಅದು ಕೇವಲ ಫುಡ್ ಡೆಲಿವರಿಯ ಆರ್ಡರ್​ಗಳಿಗೆ ಮಾತ್ರ ಅನ್ವಯ ಆಗುವ ಶುಲ್ಕ. ಸ್ವಿಗ್ಗಿಯ ಇತರ ಡೆಲಿವರಿ ಸರ್ವಿಸ್ ಆದ ಇನ್ಸ್​ಟಾಮಾರ್ಟ್​ಗೆ ಪ್ಲಾಟ್​ಫಾರ್ಮ್ ಫೀ ಪಡೆಯಲಾಗುತ್ತಿಲ್ಲ.

ಅದೇ ರೀತಿ ಜೊಮಾಟೋ ಕೂಡ ಫುಡ್ ಡೆಲಿವರಿ ಆರ್ಡರ್​ಗೆ ಮಾತ್ರವೇ 2 ರೂಗಳ ಪ್ಲಾಟ್​ಫಾರ್ಮ್ ಫೀ ಪಡೆಯುತ್ತಿದೆ. ಅದರ ಬ್ಲಿಂಕಿಟ್ ಡೆಲಿವರಿ ಸೇವೆಗೆ ಈ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: Vaibhav Taneja: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಹೊಸ ಸಿಎಫ್​ಒ ವೈಭವ್ ತನೇಜಾ ಯಾರು?

ಮೊದಲ ಬಾರಿಗೆ ಲಾಭದ ಮುಖ ನೋಡಿದ ಜೊಮಾಟೋ

ಜೊಮಾಟೋ ಸಂಸ್ಥೆ 2023-24ರ ಮೊದಲ ತ್ರೈಮಾಸಿಕವಾದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ 12 ಮಿಲಿಯನ್ ಡಾಲರ್​ನಷ್ಟು (ಸುಮಾರು 100 ಕೋಟಿ ರೂ) ಲಾಭ ಪಡೆದಿದೆ. ಜೊಮಾಟೋ ಆರಂಭಗೊಂಡಂತಾಗಿನಿಂದ ಒಂದು ಕ್ವಾರ್ಟರ್ ಅವಧಿಯಲ್ಲಿ ಲಾಭ ಕಂಡಿದ್ದು ಇದೇ ಮೊದಲು. ಲಾಭದ ಜೊತೆಗೆ ಅದರ ಆದಾಯವೂ ಗಣನೀಯವಾಗಿ ವೃದ್ಧಿಸಿದೆ. ಕಳೆದ ವರ್ಷದ ಇದೇ ಕ್ವಾರ್ಟರ್​ನಲ್ಲಿ ಜೊಮಾಟೋ 186 ಕೋಟಿ ರೂ ನಷ್ಟ ಅನುಭವಿಸಿತ್ತು. ಅದಕ್ಕೆ ಹೋಲಿಸಿದರೆ ಜೊಮಾಟೋ ವ್ಯವಹಾರ ಗಮನಾರ್ಹವಾಗಿ ಸುಧಾರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್