ದಿನಕ್ಕೆ 87 ರೂ ಹೂಡಿಕೆ ಮಾಡಿ, 11 ಲಕ್ಷ ರೂ ಪಡೆಯಿರಿ; ಇದು ಆಧಾರ್ ಶಿಲಾ ಎಲ್​ಐಸಿ ಪ್ಲಾನ್ ಗಮ್ಮತ್ತು

LIC Aadhaar Shila Scheme: ಎಲ್​ಐಸಿ ಮಹಿಳೆಯರಿಗಾಗಿ ತಂದಿರುವ ಆಧಾರ್ ಶಿಲಾ ಪ್ಲಾನ್​ನಲ್ಲಿ ನೀವು ದಿನಕ್ಕೆ 87 ರೂನಂತೆ 10 ವರ್ಷ ಕಟ್ಟಿದರೆ, 15 ವರ್ಷಕ್ಕೆ ಮೆಚ್ಯೂರ್ ಆದಾಗ 11 ಲಕ್ಷ ರೂ ಸಂಪತ್ತು ಸಂಗ್ರಹವಾಗಿರುತ್ತದೆ.

ದಿನಕ್ಕೆ 87 ರೂ ಹೂಡಿಕೆ ಮಾಡಿ, 11 ಲಕ್ಷ ರೂ ಪಡೆಯಿರಿ; ಇದು ಆಧಾರ್ ಶಿಲಾ ಎಲ್​ಐಸಿ ಪ್ಲಾನ್ ಗಮ್ಮತ್ತು
ಎಲ್​​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 08, 2023 | 5:47 PM

ಜೀವ ವಿಮಾ ನಿಗಮ, ಅಥವಾ ಎಲ್​ಐಸಿ ಭಾರತದ ಅಗ್ರಮಾನ್ಯ ಇನ್ಷೂರೆನ್ಸ್ ಕಂಪನಿ. ವಿವಿಧ ಆರ್ಥಿಕ ವರ್ಗದವರಿಗೆ ವಿಶೇಷವಾದ ಪಾಲಿಸಿ ಪ್ಲಾನ್​ಗಳನ್ನು ಅದು ಆಫರ್ ಮಾಡುತ್ತದೆ. ಯಾವುದೇ ಹಣಕಾಸು ಗುರಿಗೂ ಪೂರಕವಾಗಿರುವ ಪ್ಲಾನ್​ಗಳು ಎಲ್​ಐಸಿಯಲ್ಲಿ ಇವೆ. ಎಂಡೋಮೆಂಟ್ ಪ್ಲಾನ್​ಗಳು, ರಿಟೈರ್ಮೆಂಟ್ ಪ್ಲಾನ್​ಗಳು, ಮಾರುಕಟ್ಟೆ ಜೋಡಿತ ಪ್ಲಾನ್​ಗಳು ಹೀಗೆ ನಾನಾ ವೈವಿಧ್ಯತೆ ಇದೆ. ಮಹಿಳೆಯರಿಗೂ ಕೆಲ ಪ್ಲಾನ್​ಗಳನ್ನು ಎಲ್​ಐಸಿ ಆಫರ್ ಮಾಡುತ್ತದೆ. ಇದರಲ್ಲಿ ಆಧಾರ್ ಶಿಲಾ ಸ್ಕೀಮ್ ಒಂದು.

ಎಲ್​ಐಸಿ ಆಧಾರ್ ಶಿಲಾ ಪ್ಲಾನ್ ಮಹಿಳೆಯರಿಗೆಂದು ಇರುವ ನಾನ್-ಲಿಂಕ್ಡ್, ವೈಯಕ್ತಿಕ ಜೀವ ವಿಮಾ ಸ್ಕೀಮ್ ಆಗಿದೆ. ನಾನ್-ಲಿಂಕ್ಡ್ ಎಂದರೆ ಇದು ಈಕ್ವಿಟಿ ಇತ್ಯಾದಿ ಯಾವುದೇ ಮಾರುಕಟ್ಟೆಗೆ ಜೋಡಿತವಾಗಿರುವುದಿಲ್ಲ. ಪೂರ್ವನಿಗದಿತ ದರದಲ್ಲಿ ನಿಮಗೆ ರಿಟರ್ನ್ ಕೊಡುತ್ತದೆ. ಜೀವ ವಿಮಾ ಯೋಜನೆಯಾಗಿರುವ ಆಧಾರ್ ಶಿಲಾದಲ್ಲಿ ಸ್ಕೀಮ್ ಮೆಚ್ಯೂರ್ ಆದ ಬಳಿಕ ನಿಗದಿತ ಹಣ ಕೊಡಲಾಗುತ್ತದೆ. ಪಾಲಿಸಿದಾರ ಪಾಲಿಸಿ ಅವಧಿಯಲ್ಲಿ ಅಕಸ್ಮಾತ್ ನಿಧನರಾದರೆ ಅವರ ಕುಟುಂಬಕ್ಕೆ ಹಣಕಾಸು ನೆರವು ಸಿಗುತ್ತದೆ.

ಇದನ್ನೂ ಓದಿ: ಹೂಡಿಕೆ ಟಿಪ್ಸ್; 1 ಕೋಟಿ ಸಂಪತ್ತು ಸಂಗ್ರಹಕ್ಕೆ 15X15X15 ಸೂತ್ರ

ಆಧಾರ್ ಶಿಲಾ ಪ್ಲಾನ್​ ಪಡೆಯಲು ಮಾನದಂಡವೇನು?

ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು, ಅಂದರೆ ಭಾರತೀಯ ನಾಗರಿಕರಾಗಿರುವ 8ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲಿಸಿದಾರರಾಗಬಹುದು. ಪಾಲಿಸಿ ಅವಧಿ 10ರಿಂದ 20ವರ್ಷದವರೆಗೂ ಇರುತ್ತದೆ. ಪಾಲಿಸಿ ಮೆಚ್ಯೂರ್ ಆಗುವಾಗ ಪಾಲಿಸಿದಾರಳ ವಯಸ್ಸು 70 ವರ್ಷ ಮೀರಿರಬಾರದು. ಹೀಗಾಗಿ, ಪಾಲಿಸಿ ಪಡೆಯುವಾಗ ಪಾಲಿಸಿದಾರಳ ವಯಸ್ಸಿನ ಪ್ರಕಾರವಾಗಿ ಪಾಲಿಸಿಯ ಗರಿಷ್ಠ ಅವಧಿ ಇರುತ್ತದೆ. 55 ವರ್ಷದ ಮಹಿಳೆ ಈ ಪಾಲಿಸಿ ತೆಗೆದುಕೊಂಡರೆ ಅದು 15 ವರ್ಷಕ್ಕಿಂತ ಹೆಚ್ಚಿನದ್ದಿರಲು ಆಗುವುದಿಲ್ಲ.

ಎಲ್​​ಐಸಿ ಆಧಾರ್ ಶಿಲಾ ಸ್ಕೀಮ್​ನಲ್ಲಿ ಒಟ್ಟು ಭರವಸೆ ಮೊತ್ತ (ಸಮ್ ಅಷ್ಯೂರ್ಡ್) ಕನಿಷ್ಠ 75,000 ರೂ ಆದರೆ ಗರಿಷ್ಠ ಮೊತ್ತ 5 ಲಕ್ಷ ರೂ ಇರುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಕುಸಿಯುತ್ತಿದೆಯಲ್ಲಾ..! ಮ್ಯೂಚುವಲ್ ಫಂಡ್ ಮೇಲೆ ಹಣ ಹಾಕಿ ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್

11 ಲಕ್ಷ ರೂ ಗಳಿಸಲು ದಿನಕ್ಕೆ 87 ರೂ ಹೂಡಿಕೆ

ಎಲ್​ಐಸಿ ಆಧಾರ್ ಶಿಲಾ ಪಾಲಿಸಿ ಒಳ್ಳೆಯ ರಿಟರ್ನ್ ಕೊಡುತ್ತದೆ. 55 ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರು ಈ ಪಾಲಿಸಿ ಪಡೆದು ತನ್ನ 70ನೇ ವಯಸ್ಸಿನಲ್ಲಿ 11 ಲಕ್ಷ ರೂ ಹಣ ಪಡೆಯುವ ಗುರಿ ಇಟ್ಟುಕೊಂಡಿರುತ್ತಾರೆ ಎಂದಿಟ್ಟುಕೊಳ್ಳಿ. ಅದರ ಪ್ರಕಾರವಾಗಿ ವರ್ಷಕ್ಕೆ 31,755 ರೂನಂತೆ 10 ವರ್ಷ ಕಟ್ಟಿದರೆ 3,17,550 ರೂ ಹೂಡಿಕೆ ಆಗಿರುತ್ತದೆ. ವರ್ಷಕ್ಕೆ 31,755 ರೂ ಎಂದರೆ ದಿನಕ್ಕೆ 87 ರೂ ಆಗುತ್ತದೆ. ನೀವು ದಿನಕ್ಕೆ 87ರಂತೆ ವರ್ಷಕ್ಕೆ 31,755 ರೂ ಅನ್ನು 15 ವರ್ಷ ಕಟ್ಟಿದ ಬಳಿಕ ಬಳಿಕ 70ರ ವಯಸ್ಸಿಗೆ ಪಾಲಿಸಿ ಮೆಚ್ಯೂರ್ ಆಗುತ್ತದೆ. ಆಗ ನಿಮ್ಮ ಹಣ 11 ಲಕ್ಷ ರೂಗೆ ಬೆಳೆದಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್