Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaibhav Taneja: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಹೊಸ ಸಿಎಫ್​ಒ ವೈಭವ್ ತನೇಜಾ ಯಾರು?

Tesla's New CFO: ಭಾರತ ಮೂಲದ ವೈಭವ್ ತನೇಜಾ ಅವರು ಟೆಸ್ಲಾದ ಸಿಎಫ್​ಒ ಹುದ್ದೆಗೆ ಏರಿದ್ದಾರೆ. 45 ವರ್ಷದ ವೈಭವ್ ಈ ಮುಂಚೆ ಅದೇ ಸಂಸ್ಥೆಯ ಸಿಇಒ ಆಗಿದ್ದರು. ಈಗ ಎರಡೂ ಹುದ್ದೆಗಳನ್ನು ಅವರು ನಿಭಾಯಿಸಲಿದ್ದಾರೆ.

Vaibhav Taneja: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಹೊಸ ಸಿಎಫ್​ಒ ವೈಭವ್ ತನೇಜಾ ಯಾರು?
ವೈಭವ್ ತನೇಜಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 08, 2023 | 10:17 AM

ವಿಶ್ವದ ಟಾಪ್ ಕಂಪನಿಗಳಲ್ಲಿ ಎಕ್ಸಿಕ್ಯೂಟಿವ್ ಹುದ್ದೆ (Executive Job) ಅಲಂಕರಿಸಿದ ಭಾರತೀಯರ ಪಟ್ಟಿಗೆ ಈಗ ಮತ್ತೊಬ್ಬರ ಸೇರ್ಪಡೆಯಾಗಿದ್ದಾರೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ಅವರ ಮಾಲಕತ್ವದ ಟೆಸ್ಲಾ ಸಂಸ್ಥೆಗೆ (Tesla) ಭಾರತ ಮೂಲದ ವೈಭವ್ ತನೇಜಾ ಮುಖ್ಯ ಹಣಕಾಸು ಅಧಿಕಾರಿ (CFO- Chief Finance Officer) ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಿಎಫ್​ಒ ಆಗಿದ್ದ ಜಚಾರಿ ಕಿರ್ಕ್​ಹಾರ್ನ್ (Zachary Kirkhorn) ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ವೈಭವ್ ತನೇಜಾರನ್ನು ನೇಮಕ ಮಾಡಲಾಗಿದೆ. 45 ವರ್ಷದ ವೈಭವ್ ಅವರು ಇದಕ್ಕೂ ಮೊದಲು ಟೆಸ್ಲಾದ ಮುಖ್ಯ ಲೆಕ್ಕ ಅಧಿಕಾರಿ (CAO- Chief Accounting Officer) ಆಗಿದ್ದರು. ಈಗ ಸಿಎಒ ಜೊತೆಗೆ ಸಿಎಫ್​ಒ ಹುದ್ದೆಯನ್ನೂ ಹೆಚ್ಚುವರಿಯಾಗಿ ಅವರು ನಿಭಾಯಿಸಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ವೈಭವ್ ತನೇಜಾ ಸಿಎಫ್​ಒ ಹುದ್ದೆ ಪಡೆದಿರುವುದು ತಾತ್ಕಾಲಿಕವಾಗಿ ಮಾತ್ರವಾ ಎಂಬುದು ಗೊತ್ತಾಗಿಲ್ಲ.

ವೈಭವ್ ತನೇಜಾ ಅವರು ಅಕೌಂಟಿಂಗ್ ಕ್ಷೇತ್ರದಲ್ಲಿ ಎರಡು ದಶಕಗಳಷ್ಟು ಅನುಭವ ಹೊಂದಿದ್ದಾರೆ. ಟೆಸ್ಲಾದ ಹಿಂದಿನ ಸಿಎಫ್​ಒಗಳಾಗಿದ್ದ ದೀಪಕ್ ಅಹುಜಾ ಮತ್ತು ಜಚಾರಿ ಕಿರ್ಕ್​ಹಾರ್ನ್ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಮುಕೇಶ್ ಅಂಬಾನಿ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ಅಚ್ಚರಿ ಮೂಡಿಸುತ್ತದೆ ವಿಶ್ವಶ್ರೀಮಂತನ ಸಂಬಳ ವಿಚಾರ

ವೈಭವ್ ತನೇಜಾ ಬಗ್ಗೆ ತಿಳಿಯಬೇಕಾದ ಸಂಗತಿಗಳು

  • ವೈಭವ್ ತನೇಜಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ.
  • ಪ್ರೈಸ್​ವಾಟರ್​ಹೌಸ್​ಕೂಪರ್ಸ್ (PwC) ಎಂಬ ಹಣಕಾಸು ಸಲಹಾ ಸಂಸ್ಥೆಗೆ 1996ರಲ್ಲಿ ಸೇರಿದರು.
  • ಪ್ರೈಸ್​ವಾಟರ್​ಹೌಸ್​ಕೂಪರ್ಸ್ ಸಂಸ್ಥೆಯ ಭಾರತ ಕಚೇರಿಯಲ್ಲಿದ್ದ ಅವರು ಅಲ್ಲಿಂದ ಅಮೆರಿಕದ ಕಚೇರಿಗೆ ವರ್ಗವಾದರು. ಆ ಸಂಸ್ಥೆಯಲ್ಲಿ 17 ವರ್ಷ ಕೆಲಸ ಮಾಡಿದರು.
  • 2016ರಲ್ಲಿ ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸೋಲಾರ್​ಸಿಟಿ ಎಂಬ ಸೌರಶಕ್ತಿ ಉತ್ಪಾದಕ ಕಂಪನಿ ಸೇರಿದರು. ಅಲ್ಲಿ ಅವರು ವೈಸ್ ಪ್ರೆಸಿಡೆಂಟ್ ಹುದ್ದೆ ಪಡೆದರು. ಕಾರ್ಪೊರೇಟ್ ಕಂಟ್ರೋಲರ್ ಆಗಿಯೂ ಕೆಲಸ ಮಾಡಿದರು.
  • 2017ರಲ್ಲಿ ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಸೋಲಾರ್​ಸಿಟಿಯನ್ನು ಖರೀದಿಸಿದರು. ಆಗ ಎರಡೂ ಕಂಪನಿಗಳ ಅಕೌಂಟಿಂಗ್ ತಂಡಗಳನ್ನು ಒಂದುಗೂಡಿಸುವ ಕೆಲಸವನ್ನು ವೈಭವ್ ತನೇಜಾ ಮಾಡಿದರು.
  • 2021ರ ಜನವರಿಯಲ್ಲಿ ಟೆಸ್ಲಾದ ಭಾರತೀಯ ವಿಭಾಗವಾದ ಟೆಸ್ಲಾ ಇಂಡಿಯಾ ಮೋಟಾರ್ಸ್ ಸಂಸ್ಥೆಗೆ ವೈಭವ್ ಅವರು ಡೈರೆಕ್ಟರ್ ಆಗಿ ನೇಮಕವಾದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ