ಮುಕೇಶ್ ಅಂಬಾನಿ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ಅಚ್ಚರಿ ಮೂಡಿಸುತ್ತದೆ ವಿಶ್ವಶ್ರೀಮಂತನ ಸಂಬಳ ವಿಚಾರ

Mukesh Ambani's Salary: ದೇಶದ ಅತಿದೊಡ್ಡ ಮಾರುಕಟ್ಟೆಮೌಲ್ಯದ ಕಂಪನಿ ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಮುಕೇಶ್ ಅಂಬಾನಿ 2008ರಿಂದಲೂ ವರ್ಷಕ್ಕೆ 15 ಕೋಟಿ ರೂ ಸಂಬಳ ಪಡೆಯುತ್ತಾ ಬಂದವರು. ಆದರೆ, 2020ರಿಂದ ಅವರು ಸಂಬಳ, ಭತ್ಯೆ ಎಲ್ಲವನ್ನೂ ಕೈಬಿಟ್ಟಿದ್ದಾರೆ. ವರ್ಷಕ್ಕೆ 24 ಕೋಟಿ ರೂ ಸಂಭಾವನೆ ಅವರ ಕೈತಪ್ಪಿದೆ.

ಮುಕೇಶ್ ಅಂಬಾನಿ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ಅಚ್ಚರಿ ಮೂಡಿಸುತ್ತದೆ ವಿಶ್ವಶ್ರೀಮಂತನ ಸಂಬಳ ವಿಚಾರ
ಮುಕೇಶ್ ಅಂಬಾನಿ
Follow us
|

Updated on: Aug 07, 2023 | 4:31 PM

ವಿಶ್ವ ಶ್ರೀಮಂತರ ಪೈಕಿ ಒಬ್ಬರಾಗಿರುವ ಮುಕೇಶ್ ಅಂಬಾನಿ (Mukesh Ambani) ಲಕ್ಷಾಂತರ ಕೋಟಿ ರೂ ಮೌಲ್ಯದ ರಿಲಾಯನ್ಸ್ ವ್ಯಾಪಾರ ಸಾಮ್ರಾಜ್ಯದ ಒಡೆಯ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟಿರುವ ಮುಕೇಶ್ ಅಂಬಾನಿ ಅದೆಷ್ಟು ಸಂಭಾವನೆ ಪಡೆಯುತ್ತಿರಬಹುದು ಎಂಬ ಕುತೂಹಲ ಇರುವುದು ಸಹಜ. 2008-09 ರಿಂದ 2019-20 ರವರೆಗೆ ಅವರ ವೇತನ (Salary of Ambani) ಬರೋಬ್ಬರಿ 15 ಕೋಟಿ ರೂ. ಆದರೆ, ಕಳೆದ ಮೂರು ವರ್ಷಗಳಿಂದ ಅಂಬಾನಿ ಪಡೆಯುತ್ತಿರುವ ಸಂಬಳ ಬರೀ ಶೂನ್ಯ. 2020-21ರ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅಂಬಾನಿ ತಾನು ಸಂಬಳ ಪಡೆಯುವುದಿಲ್ಲ ಎಂದು ತೀರ್ಮಾನಿಸಿದರು. ಅವರ ತೀರ್ಮಾನ ಹಾಗೆಯೇ ಮುಂದುವರಿದಿದೆ. 2021 ರಿಂದ 2023 ರವರೆಗೂ ಮುಕೇಶ್ ಅಂಬಾನಿ ಸಂಬಳತ್ಯಾಗದ ಜೊತೆಗೆ ಯಾವುದೇ ಭತ್ಯೆಗಳನ್ನೂ ತೆಗೆದುಕೊಂಡಿಲ್ಲ ಎಂದು ಕಂಪನಿಯು ಇತ್ತೀಚಿನ ಬಿಡುಗಡೆಯಾದ ವರದಿಯಲ್ಲಿ ತಿಳಿಸಿದೆ. ಸಂಬಳ, ಭತ್ಯೆ, ನಿವೃತ್ತಿ ಲಾಭ ಇತ್ಯಾದಿ ಅವರಿಗೆ ವರ್ಷಕ್ಕೆ 24 ಕೋಟಿ ಹಣ ಸಿಗುತ್ತಿತ್ತು. ಅದೆಲ್ಲವನ್ನೂ ಅವರು ಸ್ವ ಇಚ್ಛೆಯಿಂದ ಕೈಬಿಟ್ಟಿದ್ದಾರೆ.

ಸಂಬಳವನ್ನೇ ತ್ಯಾಗ ಮಾಡಿದ ಮುಕೇಶ್ ಅಂಬಾನಿ ಅವರ ಇತರ ವ್ಯಾವಹಾರಿಕ ವೆಚ್ಚಗಳನ್ನು ಕಂಪನಿಯೇ ಭರಿಸಲಿದೆ. ಪ್ರಯಾಣ, ಬೋರ್ಡಿಂಗ್, ಲಾಡ್ಜಿಂಗ್ ವೆಚ್ಚಗಳು, ಅವರ ಮತ್ತವರ ಕುಟುಂಬದ ಭದ್ರತಾ ವೆಚ್ಚಗಳನ್ನೂ ಆರ್​ಐಎಲ್ ಭರಿಸುತ್ತದೆ. ಭಾರತದ ಅತಿದೊಡ್ಡ ಮಾರುಕಟ್ಟೆಮೌಲ್ಯದ ಕಂಪನಿ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಮತ್ತು ಎಂಡಿಯಾಗಿ ಅವರು 2029ರವರೆಗೂ ಮುಂದುವರಿಯಲಿದ್ದಾರೆ. ಅರ್​ಐಎಲ್ ಕಾನೂನಿನ ಪ್ರಕಾರ ಉನ್ನತ ಸ್ತರದ ಹುದ್ದೆಯಲ್ಲಿರುವವರು 70 ವರ್ಷ ಮೀರಿರಬಾರದು ಎಂದಿದೆ. ಅಂಬಾನಿ ವಯಸ್ಸು 70 ವರ್ಷ ದಾಟಬಹುದಾದರೂ 2029ರವರೆಗೂ ಅವರನ್ನು ಛೇರ್ಮನ್ ಆಗಿ ಮುಂದುವರಿಸಲು ಷೇರುದಾರರು ಅನುಮೋದನೆ ನೀಡಿದ್ದಾರೆ. ಅಲ್ಲಿಯವರೆಗೂ ಅಂಬಾನಿ ಸಂಬಳ, ಭತ್ಯೆರಹಿತವಾಗಿ ಕೆಲಸ ಮಾಡಲಿದ್ದಾರೆ. ಆದರೆ, ಅವರ ಬಳಿ ಇರುವ ಅಪಾರ ಷೇರುಸಂಪತ್ತು ಅವರ ಸಿರಿತನ ಕುಂದದಂತೆ ನೋಡಿಕೊಳ್ಳುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?

ಹಣಕಾಸು ಪ್ರಪಂಚಕ್ಕೆ ಕಾಲಿಟ್ಟ ರಿಲಾಯನ್ಸ್

ಜಿಯೋ ಮೂಲಕ ಭಾರತದ ಮೊಬೈಲ್ ಟೆಲಿಫೋನ್ ಮತ್ತು ಬ್ರಾಡ್‌ಬ್ಯಾಂಡ್ ವ್ಯವಹಾರದಲ್ಲಿ ಸಂಚಲನ ಸೃಷ್ಟಿಸಿದ್ದವರು, ಮತ್ತು ರಿಲಾಯನ್ಸ್ ರೀಟೇಲ್ ಮೂಲಕ ದೇಶದ ದಿನಸಿ ವ್ಯಾಪಾರದಲ್ಲಿ ಛಾಪು ಮೂಡಿಸಿದ್ದವರು ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ. ಇದೀಗ ಅವರು ಹೊಸ ಕ್ಷೇತ್ರದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಎನ್​ಬಿಎಫ್​ಸಿ ಕ್ಷೇತ್ರಕ್ಕೆ ರಿಲಾಯನ್ಸ್ ಸಾಮ್ರಾಜ್ಯ ವಿಸ್ತರಣೆ ಆಗಲಿದೆ. ಕಂಪನಿಯ ವರದಿಯ ಪ್ರಕಾರ, ಮುಕೇಶ್ ಅಂಬಾನಿ ಈಗ ತಮ್ಮ ಹಣಕಾಸು ಸೇವಾ ಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಮೂಲಕ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಕಾಣಲು ನೋಡುತ್ತಿದ್ದಾರೆ. JFSL ಮೂಲಕ ಭಾರತದ ಅತಿದೊಡ್ಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (NBFC) ಆಗುವ ಗುರಿಯನ್ನು ಅಂಬಾನಿ ಹೊಂದಿದ್ದಾರೆ.

ರಿಲಯನ್ಸ್ ರೀಟೇಲ್ ವಹಿವಾಟು ಶತಕೋಟಿ ರೂಗೂ ಹೆಚ್ಚು

2022-23ರ ಹಣಕಾಸು ವರ್ಷದಲ್ಲಿ ರಿಲಯನ್ಸ್ ರಿಟೇಲ್ ಒಂದು ಬಿಲಿಯನ್ ಡಾಲರ್ ವಹಿವಾಟಿನ ಗಡಿ ದಾಟಿದೆ. ಈ ಮಾಹಿತಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಿಲಯನ್ಸ್ ರಿಟೇಲ್ ಡಿಜಿಟಲ್ ಕಾಮರ್ಸ್, ಹೊಸ ವಾಣಿಜ್ಯ ವ್ಯವಹಾರಗಳು FY 2022-23 ರಲ್ಲಿ ರೂ. 2.60 ಲಕ್ಷ ಕೋಟಿ ಆದಾಯಕ್ಕೆ ಶೇ 18ರಷ್ಟು ಕೊಡುಗೆ ನೀಡಿದೆ. ಪರಿಶೀಲನೆಯ ಅವಧಿಯಲ್ಲಿ ಕಂಪನಿಯು 3,300 ಹೊಸ ಮಳಿಗೆಗಳನ್ನು ತೆರೆಯಿತು. ಈಗ ಒಟ್ಟು 18,040 ಅಂಗಡಿಗಳಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯ ಪ್ರಕಾರ, “2022-23 ರ ಹಣಕಾಸು ವರ್ಷದಲ್ಲಿ, ವ್ಯವಹಾರವು ವರ್ಷದಿಂದ ವರ್ಷಕ್ಕೆ 42 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಒಂದು ಶತಕೋಟಿ ವಹಿವಾಟುಗಳ ಸಂಖ್ಯೆಯನ್ನು ದಾಟುತ್ತದೆ.

ಇದನ್ನೂ ಓದಿ: Mukesh Ambani: ಅಂಬಾನಿ ಹೊಸ ಕಾರಿಗೆ ಪೈಂಟ್​ ಮಾಡಿಸಲು ಕೋಟಿ ರೂ ಖರ್ಚು, ಇನ್ನು ಅದರ ಪೂರ್ತಿ ಬೆಲೆ ತಿಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ!

ಜಿಯೋಗೆ $2.2 ಬಿಲಿಯನ್ ಆರ್ಥಿಕ ಬೆಂಬಲ

ನಮ್ಮ ದೇಶದ ಅತಿದೊಡ್ಡ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ 5G ಸೇವೆಗಳಿಗೆ ಉಪಕರಣಗಳ ಹಣಕಾಸುಗಾಗಿ ಸ್ವೀಡಿಷ್ ರಫ್ತು ಕ್ರೆಡಿಟ್ ಏಜೆನ್ಸಿಯಿಂದ $2.2 ಬಿಲಿಯನ್ ಆರ್ಥಿಕ ಸಹಾಯವನ್ನು ಪಡೆದುಕೊಂಡಿದೆ. ಕಂಪನಿಯು ತನ್ನ 5G ನೆಟ್‌ವರ್ಕ್ ಅನ್ನು ವಿಸ್ತರಿಸಲು ಸ್ವೀಡಿಷ್ ಕಂಪನಿ ಎರಿಕ್ಸನ್ ಮತ್ತು ಫಿನ್ನಿಶ್ ಕಂಪನಿ ನೋಕಿಯಾದಿಂದ ಹೆಚ್ಚಿನ ಟೆಲಿಕಾಂ ಸಾಧನಗಳನ್ನು ಖರೀದಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ