ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ

AMCA fighter jet programme, RIL partnership with Rolls Royce to develop indigenous engine: ಭಾರತದ ಮಹತ್ವಾಕಾಂಕ್ಷಿ ಎಎಂಸಿಎ ಫೈಟರ್ ಜೆಟ್ ಪ್ರಾಜೆಟ್​ಗೆ ದೇಶೀಯವಾಗಿ ಎಂಜಿನ್ ಅಭಿವೃದ್ಧಿಪಡಿಸಲು ಬ್ರಿಟನ್ ಮೂಲದ ರೋಲ್ಸ್ ರಾಯ್ಸ್ ಜೊತೆ ರಿಲಯನ್ಸ್ ಇಂಡಸ್ಟ್ರೀಸ್ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದೆ. ಎಂಜಿನ್ ತಯಾರಿಸುವ ಗುತ್ತಿಗೆ ಪಡೆಯಲು ಇವೆರಡು ಸಂಸ್ಥೆಗಳು ಜಂಟಿಯಾಗಿ ಬಿಡ್ ಸಲ್ಲಿಸಬಹುದು.

ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ
ಎಎಂಸಿಎ ಫೈಟರ್ ಜೆಟ್​ನ ಮಾದರಿ
Image Credit source: PTI

Updated on: Aug 14, 2026 | 7:47 PM

ಮುಂಬೈ, ಆಗಸ್ಟ್ 14: ಭಾರತದ 5ನೇ ಪೀಳಿಗೆಯ ಯುದ್ಧ ವಿಮಾನ ಯೋಜನೆಯಾದ ‘ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್’ (AMCA) ಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಇಂಜಿನ್ ತಯಾರಿಸಲು ಆಸಕ್ತಿ ತೋರಿದೆ. ಇದಕ್ಕಾಗಿ ಬ್ರಿಟನ್ ಮೂಲದ ರೋಲ್ಸ್ ರಾಯ್ಸ್ (Rolls-Royce) ಜೊತೆ ಆರ್​ಐಎಲ್ ಸಹಭಾಗಿತ್ವ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು ಸೇರಿ ಎಎಂಸಿಎ ಯೋಜನೆಯಡಿ ತಯಾರಾಗುವ ಜೆಟ್​ಗೆ ಸ್ವಂತವಾಗಿ ಕಾಂಬ್ಯಾಟ್ ಇಂಜಿನ್ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಮಾಡಲು ಸಜ್ಜಾಗಿವೆ. ಪ್ರಾಜೆಕ್ಟ್​ನಲ್ಲಿ ಈ ಸಂಸ್ಥೆಗಳು ಬಿಡ್ ಸಲ್ಲಿಸಬಹುದು.

ಏರೋಸ್ಪೇಸ್ ಗ್ಯಾಸ್ ಟರ್ಬೈನ್ ಕಾಂಪ್ಲೆಕ್ಸ್ ಸ್ಥಾಪನೆ

ಈ ಪಾಲುದಾರಿಕೆಯ ಭಾಗವಾಗಿ, ಉಭಯ ಸಂಸ್ಥೆಗಳು ಭಾರತದಲ್ಲಿ ಪವರ್ ಮತ್ತು ಪ್ರೊಪಲ್ಷನ್ ತಂತ್ರಜ್ಞಾನಕ್ಕಾಗಿ ‘ಏರೋಸ್ಪೇಸ್ ಗ್ಯಾಸ್ ಟರ್ಬೈನ್ ಕಾಂಪ್ಲೆಕ್ಸ್’ ಸ್ಥಾಪಿಸಲು ನಿರ್ಧರಿಸಿವೆ. ಇದು ಇಂಜಿನ್ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆ ಸೇರಿದಂತೆ ಸಂಪೂರ್ಣ ಹಂತಗಳನ್ನು ಭಾರತದಲ್ಲಿಯೇ ನಿರ್ವಹಿಸುವ ಕೇಂದ್ರವಾಗಲಿದೆ.

ಇದನ್ನೂ ಓದಿ: CBDC ಆಧಾರಿತ DBTಗೆ ಚಾಲನೆ: ಪ್ರಲ್ಹಾದ್ ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್

ಆತ್ಮನಿರ್ಭರ ಭಾರತಕ್ಕೆ ಬಲ

ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಮತ್ತು ದೇಶೀಯ ರಕ್ಷಣಾ ವಲಯದ ಬಲವರ್ಧನೆಯ ದೃಷ್ಟಿಕೋನಕ್ಕೆ ಈ ಒಪ್ಪಂದವು ಪ್ರಮುಖ ಹೆಜ್ಜೆಯಾಗಲಿದೆ. ಭಾರತದ ಯುದ್ಧ ವಿಮಾನಗಳಿಗೆ ಅಗತ್ಯವಿರುವ ಇಂಜಿನ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ರೋಲ್ಸ್ ರಾಯ್ಸ್​ನ ಟೆಕ್ನಾಲಜಿ, ರಿಲಯನ್ಸ್​ನ ಸ್ಕೇಲಿಂಗ್ ಸಾಮರ್ಥ್ಯದ ಸಮ್ಮಿಲನ: ಅಂಬಾನಿ

“ಭಾರತದ ಕಾರ್ಯತಂತ್ರದ ಸ್ವಾಯತ್ತತೆಗೆ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಅಗತ್ಯ. ರೋಲ್ಸ್-ರಾಯ್ಸ್ ಸಂಸ್ಥೆಯ ವಿಶ್ವದರ್ಜೆಯ ಪ್ರೊಪಲ್ಷನ್ ತಂತ್ರಜ್ಞಾನ ಮತ್ತು ರಿಲಯನ್ಸ್‌ನ ಉತ್ಪಾದನೆ ಹಾಗೂ ಅನುಷ್ಠಾನ ಸಾಮರ್ಥ್ಯವನ್ನು ಒಟ್ಟುಗೂಡಿಸಿ, ಭಾರತದಲ್ಲೇ ಬಲವಾದ ಏರೋ-ಇಂಜಿನ್ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ” ಎಂದು ರಿಲಯನ್ಸ್ ಇಂಡಸ್ಟ್ರೀಸ್​ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಅನಂತ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ

ಶತಮಾನದ ಅನುಭವ ರಿಲಯನ್ಸ್ ಜೊತೆ ಹಂಚಿಕೊಳ್ಳುತ್ತೇವೆ: ರೋಲ್ಸ್ ರಾಯ್ಸ್

“ನಮ್ಮ ಒಂದು ಶತಮಾನದ ಇಂಜಿನಿಯರಿಂಗ್ ಅನುಭವ ಮತ್ತು ಇಂಜಿನ್ ಪರಿಣತಿಯನ್ನು ಭಾರತದ ಪ್ರಮುಖ ಸಂಸ್ಥೆಯಾದ ರಿಲಯನ್ಸ್ ಜೊತೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಇದು ಭಾರತದಲ್ಲಿ ಸಶಸ್ತ್ರ ಏರೋಸ್ಪೇಸ್ ವಲಯವನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ರೋಲ್ಸ್ ರಾಯ್ಸ್ ಪಿಎಲ್​ಸಿಯ ಸಿಇಒ ತುಫಾನ್ ಎರ್ಗಿನ್‌ಬಿಲ್ಗಿಚ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us