Tim Cook: ಆ್ಯಪಲ್ ಸಿಇಒ ನ್ಯಾಷನಲ್ ಪಾರ್ಕ್​ಗೆ ಸದಾ ಯಾಕೆ ಹೋಗ್ತಾರೆ? ಬೆಳಗ್ಗೆ 5ಗಂಟೆಗೆ ಇಮೇಲ್ ಯಾಕೆ ನೋಡ್ತಾರೆ? ಟಿಮ್ ಕುಕ್ ವಿಶೇಷತೆಗಳು

Apple CEO Interesting Things: ಜಿಕ್ಯೂ ಮ್ಯಾಗಝಿನ್​ನಲ್ಲಿ ಟಿಮ್ ಕುಕ್ ಅವರ ಸಂದರ್ಶನವೊಂದು ಪ್ರಕಟವಾಗಿದೆ. ಇದರಲ್ಲಿ ಅವರು ಸಾರ್ವಜನಿಕರ ಇಮೇಲ್ ಓದುವ ಪರಿಪಾಟದ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ತಮಗೆ ಸ್ಫೂರ್ತಿ ಕೊಡುವ ಸಂಗತಿಗಳ್ಯಾವುವು ಎಂದೂ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Tim Cook: ಆ್ಯಪಲ್ ಸಿಇಒ ನ್ಯಾಷನಲ್ ಪಾರ್ಕ್​ಗೆ ಸದಾ ಯಾಕೆ ಹೋಗ್ತಾರೆ? ಬೆಳಗ್ಗೆ 5ಗಂಟೆಗೆ ಇಮೇಲ್ ಯಾಕೆ ನೋಡ್ತಾರೆ? ಟಿಮ್ ಕುಕ್ ವಿಶೇಷತೆಗಳು
ಟಿಮ್ ಕುಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 07, 2023 | 12:57 PM

ಬಾಸ್​ಗಳು ಪ್ರತ್ಯೇಕ ಚೇಂಬರ್​ನಲ್ಲಿ ಆರಾಮವಾಗಿ ದಿನ ಕಳೆಯುತ್ತಾರೆ ಎಂದೇ ಬಹಳ ಮಂದಿ ಉದ್ಯೋಗಿಗಳು ಭಾವಿಸುವುದುಂಟು. ಒಬ್ಬ ಉದ್ಯೋಗಿ ಒಂದೊಂದು ಹಂತ ಮೇಲೆ ಏರಿದಂತೆಲ್ಲಾ ಅವರ ಜವಾಬ್ದಾರಿಗಳು ಹಿಗ್ಗುತ್ತಾ ಹೋಗುತ್ತವೆ. ಸಿಇಒ ಮಟ್ಟದಲ್ಲಿರುವವರ ನಿತ್ಯ ಬದುಕು 24 ಗಂಟೆ ಕಾಯಕವೇ. ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದೆನಿಸಿದ ಆ್ಯಪಲ್​ನ ಸಿಇಒ ಟಿಮ್ ಕುಕ್ (Apple CEO Tim Cook) ದಿನಚರಿ ಹಾಗೂ ಅವರ ಇಷ್ಟಾನಿಷ್ಟಗಳು ಯಾರಿಗಾದರೂ ಸ್ಫೂರ್ತಿ ಕೊಡಬಹುದು. ತಮ್ಮ ಇಮೇಲ್ ಅನ್ನು ಸಾರ್ವತ್ರಿಕವಾಗಿ ಬಹಿರಂಗಪಡಿಸಿರುವ ಕೆಲವೇ ಸಿಇಒಗಳಲ್ಲಿ ಟಿಮ್ ಕುಕ್ ಕೂಡ ಒಬ್ಬರು. ದಿನಕ್ಕೆ ಸಾವಿರದಷ್ಟು ಇಮೇಲ್​ಗಳು ಇವರ ಇನ್​ಬಾಕ್ಸ್​ಗೆ ಬಂದು ಬೀಳುತ್ತವೆ. ಸಾರ್ವಜನಿಕರು ಬರೆದದ್ದು ಎಂದು ಟಿಮ್ ಕುಕ್ ಈ ಇಮೇಲ್​ಗಳನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬೆಳಗ್ಗೆ 5ಗಂಟೆಗೆ ಇವರು ಎಲ್ಲಾ ಇಮೇಲ್​ಗಳನ್ನು ತಪ್ಪದೇ ಓದುತ್ತಾರೆ. ಈ ಪರಿಪಾಟವನ್ನು ನಿತ್ಯವೂ ಚಾಚೂತಪ್ಪದೇ ಮಾಡುತ್ತಾರೆ ಟಿಮ್ ಕುಕ್. ಹಾಗಂತ ಅವರು ಹಿಂದೆಲ್ಲಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳೂ ಈ ಸಂಗತಿಯನ್ನು ಹಂಚಿಕೊಂಡಿದ್ದಿದೆ.

ಮೂರ್ನಾಲ್ಕು ದಿನಗಳ ಹಿಂದೆ GQ ಮ್ಯಾಗಝಿನ್​ನಲ್ಲಿ ಟಿಮ್ ಕುಕ್ ಅವರ ಸಂದರ್ಶನವೊಂದು ಪ್ರಕಟವಾಗಿದೆ. ಇದರಲ್ಲಿ ಅವರು ಸಾರ್ವಜನಿಕರ ಇಮೇಲ್ ಓದುವ ಪರಿಪಾಟದ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ತಮಗೆ ಸ್ಫೂರ್ತಿ ಕೊಡುವ ಸಂಗತಿಗಳ್ಯಾವುವು ಎಂದೂ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ಕೊಡುವ ಕಂಪನಿಯ ಸಿಇಒ ಆಡುವ ಮಾತುಗಳು ಯಾವತ್ತಿಗೂ ತೂಕ ಹೊಂದಿರುವಂಥವೇ. ಅಂಥ ಕೆಲ ವಿಚಾರಗಳು ಇಲ್ಲಿವೆ….

ಆ್ಯಪಲ್ ಸಿಇಒ ಟಿಮ್ ಕುಕ್​ಗೆ ಸಾರ್ವಜನಿಕರ ಇಮೇಲ್ ಯಾಕೆ ಮುಖ್ಯ?

ಆ್ಯಪಲ್ ಸಿಇಒ ಟಿಮ್ ಕುಕ್ ಬೆಳಗ್ಗೆ 3:45ಕ್ಕೆಲ್ಲಾ ಎದ್ದುಬಿಡುತ್ತಾರಂತೆ. 5 ಗಂಟೆಗೆಗೆ ತಮ್ಮ ಇಮೇಲ್ ಇನ್​ಬಾಕ್ಸ್ ತೆರೆದು ಓದುವುದರೊಂದಿಗೆ ಕೆಲಸದ ದಿನಚರಿ ಆರಂಭಿಸುತ್ತಾರೆ. ‘ಜನರ ಜೀವನಕ್ಕೆ ಸಹಾಯಕವಾಗಬಲ್ಲ ತಂತ್ರಜ್ಞಾನ ತಯಾರಿಕೆಯಲ್ಲಿರುವ ನಮ್ಮಂತಹ ಉದ್ಯಮದಲ್ಲಿರುವವರಿಗೆ, ಈ ತಂತ್ರಜ್ಞಾನ ಎಂಥ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜನರು ಏನು ಭಾವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಯಸುತ್ತೀರಿ’ ಎಂದು ಟಿಮ್ ಕುಕ್ ಹೇಳುತ್ತಾರೆ.

ಇದನ್ನೂ ಓದಿInspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ

‘ನನಗೆ ಕೆಲ ದೂರುಗಳೂ ಬರುತ್ತವೆ. ಜನರು ಏನು ಯೋಚಿಸುತ್ತಿದ್ದಾರೆ ಎಂಬುದು ನನಗೆ ಮುಖ್ಯವಾದ್ದರಿಂದ ದೂರುಗಳು ಬಂದರೆ ಅಡ್ಡಿ ಇಲ್ಲ’ ಎನ್ನುವ ಟಿಮ್ ಕುಕ್, ಇಂಥ ಕೆಲ ದೂರುಗಳನ್ನು ತಮ್ಮ ಆ್ಯಪಲ್ ಸಹೋದ್ಯೋಗಿಗಳಿಗೆ ಫಾರ್ವರ್ಡ್ ಮಾಡುತ್ತಾರೆ. ಏನಾದರೂ ದೋಷಗಳಿದ್ದರೆ ಸರಿಪಡಿಸುವಂತೆ ಹೇಳುತ್ತಾರೆ.

ಆ್ಯಪಲ್ ಉತ್ಪನ್ನದ ಬಗ್ಗೆ ಜನರು ಸಂತುಷ್ಟರಾಗಿ ಫೀಡ್​ಬ್ಯಾಕ್ ಕೊಟ್ಟರೆ ಟಿಕ್ ಕುಕ್​ಗೆ ಸಂತೃಪ್ತಿಯ ಭಾವನೆ ಬರುತ್ತದಂತೆ. ಇದು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಅವರಿಗೆ ಪ್ರೇರೇಪಿಸುತ್ತದೆ. ಜಿಕ್ಯೂ ಸಂದರ್ಶನದಲ್ಲಿ ಟಿಮ್ ಕುಕ್ ಐಫೋನ್14ನ ಎಮರ್ಜೆನ್ಸಿ ಕನೆಕ್ಟಿವಿಟಿಯ ಸೌಲಭ್ಯವು ಒಬ್ಬ ವ್ಯಕ್ತಿಯ ಪ್ರಾಣ ಉಳಿಸಿದ ಘಟನೆ ಬಗ್ಗೆ ಮಾತನಾಡಿದ್ದಾರೆ.

ಒಬ್ಬ ಕಾರು ಚಾಲಕ ನನಗೆ ಒಂದು ಇಮೇಲ್ ಕಳುಹಿಸಿದರು. ಕಾರು ಚಲಾಯಿಸುತ್ತಿದ್ದಾಗ ಚಾಲಕನಿಗೆ ದಿಢೀರ್ ಪ್ರಜ್ಞೆ ಕಳೆದುಹೋಗಿದೆ. ಕಾರು ಅಪಘಾತವಾಗಿದೆ. ಕಾರಿನಲ್ಲಿದ್ದವರ ಬಳಿ ಐಫೋನ್14 ಇತ್ತು. ಆ ಫೋನ್​ನಲ್ಲಿ ಕ್ರ್ಯಾಷ್ ಡಿಟೆಕ್ಷನ್ ಫೀಚರ್ ಇತ್ತು. ಆ ಫೋನ್ ಆಟೊಮ್ಯಾಟಿಕ್ ಆಗಿ ತುರ್ತು ಸಂಖ್ಯೆಗೆ ಕರೆ ಮಾಡಿತು ಎಂದು ಟಿಮ್ ಕುಕ್ ಆ ಘಟನೆಯ ವಿವರವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಟಿಮ್ ಕುಕ್ ಅವರ ಇಮೇಲ್ ಏನು ಎಂಬ ಕುತೂಹಲ ಹಲವರಿಗೆ ಇರಬಹುದು. ಇದು ಅವರ ಇಮೇಲ್: tcook@apple.com

ಇದನ್ನೂ ಓದಿPanipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ

ಐಫೋನ್14ನ ವಿಶೇಷ ಫೀಚರ್​ಗಳಲ್ಲಿ ಕ್ರ್ಯಾಷ್ ಡಿಟೆಕ್ಷನ್ ಕೂಡ ಒಂದು. ದಿಢೀರ್ ಅಪಘಾತವಾದರೆ ಅದನ್ನು ಈ ಫೋನ್ ತಾನಾಗಿಯೇ ಗ್ರಹಿಸಬಲ್ಲುದು. ಮೊಬೈಲ್ ನೆಟ್ವರ್ಕ್ ಸಿಗದ ಜಾಗದಲ್ಲಿ ಅಪಘಾತವಾದರೆ ಎಮರ್ಜೆನ್ಸಿ ಸೆಟಿಲೈಟ್ ಸಂಪರ್ಕಿಸಿ ಹೆಲ್ಪ್​ಲೈನ್​ಗೆ ತಾನಾಗೆಯೇ ಅಲರ್ಟ್ ಮಾಡಬಲ್ಲ ಫೀಚರ್ ಅದು. ಇಂಥ ತಂತ್ರಜ್ಞಾನಗಳು ಜನರಿಗೆ ಉಪಯೋಗಕ್ಕೆ ಬಂದರೆ ಸಾರ್ಥಕ ಎಂಬುದು ಟಿಮ್ ಕುಕ್ ಭಾವನೆ.

ಹೆಚ್ಚು ಶ್ರೀಮಂತರಲ್ಲ ಟಿಮ್ ಕುಕ್

ಆ್ಯಪಲ್​ನಂತಹ ಕಂಪನಿಗೆ ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ ಸಿಇಒ ಆಗಿರುವ ಟಿಮ್ ಕುಕ್ ವೈಯಕ್ತಿಕವಾಗಿ ಹಣಕ್ಕೆ ಪ್ರಾಧಾನ್ಯತೆ ಕೊಟ್ಟಂತಿಲ್ಲ. ಅವರ ಒಟ್ಟು ಆಸ್ತಿ 170-180 ಕೋಟಿ ಡಾಲರ್ (ಸುಮಾರು 14,000 ಕೋಟಿ ರುಪಾಯಿ) ಇರಬಹುದು. ಇತ್ತೀಚೆಗೆ ಅವರು ತಮ್ಮ ಸಂಬಳದಲ್ಲಿ ಶೇ. 40ರಷ್ಟನ್ನು ಕಡಿತ ಕೂಡ ಮಾಡಿಕೊಂಡಿದ್ದಾರೆ. ಕಂಪನಿಯ ಷೇರು ಪಾಲುದಾರಿಕೆಯಲ್ಲೂ ಸಾಕಷ್ಟು ತ್ಯಜಿಸಲೂ ಅವರು ನಿರ್ಧರಿಸಿದ್ದಾರೆ.

ಟಿಮ್ ಕುಕ್ ಪ್ರವಾಸ ಎಂದರೆ ಅದು ನ್ಯಾಷನಲ್ ಪಾರ್ಕ್; ಏನಿದೆ ಅದರ ವಿಶೇಷತೆ?

ಟಿಮ್ ಕುಕ್ ಅವರ ವೈಯಕ್ತಿಕ ವಿಚಾರಗಳು ಅಷ್ಟೇನೂ ತಿಳಿದಿಲ್ಲ. ಅವರು ವಿದೇಶ ಪ್ರವಾಸ, ಮೋಜು ಮಸ್ತಿ ಎಂದು ಹೋಗುವ ಪೈಕಿಯವರಲ್ಲ. ಅಮೆರಿಕದಲ್ಲೇ ಇರುವ ನ್ಯಾಷನಲ್ ಪಾರ್ಕ್​ಗಳಿಗೆ ಕುಕ್ ಪ್ರತೀ ವರ್ಷವೂ ಹೋಗಿ ಒಂದಷ್ಟು ಕಾಲ ಕಳೆಯುತ್ತಾರೆ.

ಇದನ್ನೂ ಓದಿSamosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಇಲ್ಲಿ ಹೋದರೆ ಹೊರಜಗತ್ತನ್ನು ಮರೆಯುವ ಅವಕಾಶ ಸಿಗುತ್ತದೆ. ಮೊಬೈಲ್ ನೆಟ್ವರ್ಕ್ ಸಿಗದೇ ಇರುವುದರಿಂದ ಹೊರ ಜಗತ್ತಿನ ಸಂಪರ್ಕ ಕಡಿತಗೊಳ್ಳುತ್ತದೆ. ಈ ನ್ಯಾಷನಲ್ ಪಾರ್ಕ್​ಗಳನ್ನು ನೋಡುತ್ತಿದ್ದರೆ, ಈ ಪ್ರಕೃತಿ ಎಂಥ ಮಹೋನ್ನತದವಾದುದು, ನಾವು ಮನುಷ್ಯರು ಎಷ್ಟು ಕುಬ್ಜರು ಎಂಬ ಸತ್ಯದ ಅರಿವಾಗುತ್ತದೆ. ನ್ಯಾಷನಲ್ ಪಾರ್ಕ್​ನಲ್ಲಿ ಸುತ್ತಾಡುತ್ತಿದ್ದರೆ ಮನಸಿಗೆ ಶಾಂತಿ ದೊರೆಯುತ್ತದೆ ಎಂದು ಟಿಮ್ ಕುಕ್ ಹೇಳಿಕೊಂಡಿದ್ದಾರೆ.

ಆ್ಯಪಲ್ ಉದ್ಯೋಗಿಗಳ ಬಗ್ಗೆ ಸಿಇಒಗೆ ಹೆಮ್ಮೆ

ವಿಶ್ವದ ಶ್ರೇಷ್ಠ ಉದ್ಯೋಗಿಗಳು ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಟಿಮ್ ಕುಕ್ ಈ ಹಿಂದೆ ಹೆಮ್ಮೆಯಿಂದ ಬೀಗಿದ್ದುಂಟು. ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಜ್ಞಾನ ವಿಸ್ತಾರ ಎಷ್ಟಿದೆ ಎಂಬುದನ್ನು ಟಿಮ್ ಕುಕ್ ಸ್ವಯಂ ಆಗಿ ಅಳೆಯುತ್ತಲೇ ಇರುತ್ತಾರೆ. ಉದ್ಯೋಗಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ, ಆ್ಯಪಲ್ ಉತ್ಪನ್ನದ ಬಗ್ಗೆ ಜ್ಞಾನ ಭಂಡಾರದ ಆಳ ಎಷ್ಟಿದೆ ಎಂದು ತಿಳಿದುಕೊಳ್ಳುತ್ತಾರೆ. ಹಾಗೆಯೇ, ಒಂದು ವಿಚಾರದ ಬಗ್ಗೆ ತಮಗಿಂತ ಭಿನ್ನ ಅಭಿಪ್ರಾಯವನ್ನು ಯಾರಾದರೂ ಹೊಂದಿದ್ದರೆ ಹಾಗು ಅದನ್ನು ತೋರ್ಪಡಿಸಿದರೆ ಟಿಮ್ ಕುಕ್ ಬೇಸರಗೊಳ್ಳುವುದಿಲ್ಲ. ಬದಲಾಗಿ ಅಂಥ ವರ್ತನೆಯನ್ನು ಸ್ವಾಗತಿಸುತ್ತಾರೆ. ಒಂದು ವಿಚಾರವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡುವುದನ್ನು ತಾನು ಇಂತ ಉದ್ಯೋಗಿಗಳನ್ನು ನೋಡಿ ಕಲಿಯುತ್ತೇನೆ ಎನ್ನುತ್ತಾರೆ ಆ್ಯಪಲ್ ಸಿಇಒ.

ಅಂದಹಾಗೆ, ಆ್ಯಪಲ್ ಕಂಪನಿಯ ಯಾವುದೇ ಹೊಸ ಉತ್ಪನ್ನದ ಬಿಡುಗಡೆ ಆಗುತ್ತಿದ್ದರೆ ಟಿಮ್ ಕುಕ್ ಹಗಲೂ ಇರುಳೂ ಕೆಲಸ ಮಾಡುತ್ತಿರುತ್ತಾರೆ. ರಾತ್ರಿ ಪೂರ್ತಿ ಕಚೇರಿಯಲ್ಲೇ ಇದ್ದು ಕೆಲಸ ಮಾಡುತ್ತಾರಂತೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Fri, 7 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್