Apple iPhone 12: ಆಪಲ್ ಐಫೋನ್​ ಖರೀದಿಗೆ ಪುಕ್ಕಟೆ ಏರ್​ಪಾಡ್ಸ್ ಅಥವಾ ಏರ್​ಪಾಡ್ಸ್​ ಪ್ರೊಗೆ ಭಾರೀ ರಿಯಾಯಿತಿ

| Updated By: Srinivas Mata

Updated on: Oct 09, 2021 | 4:37 PM

ಆಪಲ್ ಕಂಪೆನಿಯ ಐಫೋನ್ 12 ಹಾಗೂ 12 ಮಿನಿ ಮೇಲೆ ಭಾರೀ ಡಿಸ್ಕಾಂಟ್ ಘೋಷಣೆ ಮಾಡಲಾಗಿದೆ. ಏನು ಆ ಹೊಸ ಆಫರ್ ಎಂಬುದುರ ಬಗ್ಗೆ ವಿವರ ಇಲ್ಲಿದೆ.

Apple iPhone 12: ಆಪಲ್ ಐಫೋನ್​ ಖರೀದಿಗೆ ಪುಕ್ಕಟೆ ಏರ್​ಪಾಡ್ಸ್ ಅಥವಾ ಏರ್​ಪಾಡ್ಸ್​ ಪ್ರೊಗೆ ಭಾರೀ ರಿಯಾಯಿತಿ
ಆಪ ಐಫೋನ್
Follow us on

ಆಪಲ್​ನಿಂದ ಕಳೆದ ವರ್ಷದ ಐಫೋನ್ 12ರ ಮೇಲೆ ವಿಶೇಷ ದೀಪಾವಳಿ ಆಫರ್ ಘೋಷಣೆ ಮಾಡಲಾಗಿದೆ. ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿದಾರರು ಈ ಆಫರ್​ಗೆ ಅರ್ಹರು. ಆಪಲ್ ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿ ಜತೆಗೆ ಏರ್​​ಪಾಡ್​ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಂಪೆನಿಯ ಅಧಿಕೃತ ವೆಬ್​ಸೈಟ್​ ಮೂಲಕವಾಗಿ ಆಪಲ್​ ಖರೀದಿದಾರರು ಈ ಹೊಸ ಆಫರ್ ಪಡೆಯಬಹುದು. ಐಫೋನ್ 12ರ ಪುಟಕ್ಕೆ ತೆರಳಿ ತಮ್ಮ ಆಯ್ಕೆಯ, ಅಂದರೆ 64GB, 128GB ಅಥವಾ 256GB ಪೈಕಿ ಒಂದನ್ನು ಹಾಗೂ ಅದೇ ರೀತಿ ಆರು ಬಣ್ಣಗಳಲ್ಲಿ (ನೇರಳೆ, ನೀಲಿ, ಹಸಿರು, ಬಿಳಿ, ಕಪ್ಪು ಮತ್ತು ಕೆಂಪು) ಈ ಪೈಕಿ ಒಂದನ್ನು ಆರಿಸಿಕೊಳ್ಳಬೇಕು.

ಹೀಗೆ ಆಯ್ಕೆ ಮಾಡಿದ ಮೇಲೆ Continue ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಆ ನಂತರ ತೆರೆದುಕೊಳ್ಳುವ ಪುಟದಲ್ಲಿ ತಮ್ಮ ಆಯ್ಕೆಯ ಆಫರ್​ ಅನ್ನು ಆರಿಸಿಕೊಳ್ಳಬಹುದು. ಮೊದಲನೆಯದು, ಏರ್​ಪಾಡ್ಸ್ ಹಾಗೂ ಜತೆಗೆ ಚಾರ್ಜಿಂಗ್ ಕೇಸ್. ಇದಕ್ಕೆ ಖರೀದಿದಾರರು ಏನನ್ನೂ ಪಾವತಿಸುವ ಅಗತ್ಯ ಇಲ್ಲ. ಎರಡನೆಯದು, ಏರ್​ಪಾಡ್ಸ್ ಜತೆಗೆ ವಯರ್​ಲೆಸ್ ಚಾರ್ಜಿಂಗ್. ಇದಕ್ಕಾಗಿ ಖರೀದಿದಾರರು 4000 ರೂಪಾಯಿ ಪಾವತಿಸಬೇಕು. ಇನ್ನು ಏರ್​ಪಾಡ್ಸ್ ಪ್ರೊಗಾಗಿ ಖರೀದಿಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ 10,000 ರೂಪಾಯಿ ಕೊಡಬೇಕಾಗುತ್ತದೆ. ಅಂತಿಮ ಹಂತವು ಖರೀದಿಸಿದ ಉತ್ಪನ್ನಗಳಿಗೆ ಪಾವತಿ ಮಾಡುವುದಾಗಿದೆ.

ಆಪಲ್ ಐಫೋನ್ 12 ಅನ್ನು ಫ್ಲಿಪ್​ಕಾರ್ಟ್​ನಲ್ಲಿ ರಿಯಾಯಿತಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಭಾರೀ ದರ ಕಡಿತವನ್ನು ಮಾಡಲಾಗಿದೆ. 64GBಯ ಫೋನ್​ಗೆ 52,999 ರೂಪಾಯಿ ಇದ್ದರೆ, 128GB ಫೋನ್ 57,999ಕ್ಕೆ ಮಾರಲಾಗುತ್ತಿದೆ. ಇದರ ಜತೆಗೆ ಫ್ಲಿಪ್​ಕಾರ್ಟ್​ನಿಂದ ವಿನಿಮಯ ಮೌಲ್ಯ ರೂ. 15,600ರ ತನಕ ಆಫರ್​ ಮಾಡಲಾಗುತ್ತಿದೆ. ಕ್ಯಾಶ್​ಬ್ಯಾApfmಕ್​ ಕೂಡ ಸಿಗುತ್ತಿರುವುದರಿಂದ ಮತ್ತಷ್ಟು ಬೆಲೆ ಕಡಿತದ ಆಯ್ಕೆಗಳಿವೆ. ​

ಇದನ್ನೂ ಓದಿ:Apple iPhone 13: ಆಪಲ್​ ಐಫೋನ್​ 13 ಖರೀದಿಸಲು ಯಾವ ದೇಶದ ಜನ ಎಷ್ಟು ಸಮಯ ದುಡಿಯಬೇಕು ಗೊತ್ತಾ?