ಮೈಕ್ರೋಸಾಫ್ಟ್ ಸಂಸ್ಥೆಯ (Microsoft Corporation) ಷೇರುಗಳು ದಾಖಲೆ ಮಟ್ಟಕ್ಕೆ ಏರಿದ ಸುದ್ದಿ ಬಂದಿದೆ. ಅದರ ಒಟ್ಟು ಷೇರುಸಂಪತ್ತು 2.588 ಟ್ರಿಲಿಯನ್ ಡಾಲರ್ಗೆ ಏರಿದೆ. ಆ್ಯಪಲ್ ಸಂಸ್ಥೆಯ (Apple Inc) ಷೇರುಗಳೂ ಏರಿಕೆ ಕಂಡಿದ್ದು ಅದರ ಷೇರುಸಂಪತ್ತು 2.935 ಟ್ರಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಹೆಚ್ಚೂಕಡಿಮೆ 3 ಟ್ರಿಲಿಯನ್ ಡಾಲರ್ ಸಮೀಪದಲ್ಲಿದೆ. ಈ ಗಡಿ ಇವತ್ತೇ ಮುಟ್ಟಬಹುದು. ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಕಂಪನಿಗಳಲ್ಲಿ ಹೆಚ್ಚಿನವು ಅಮೆರಿಕದವೇ. ವಿಶ್ವದ ಕಾರ್ಪೊರೇಟ್ ಜಗತ್ತು (Corporate World) ಹೆಚ್ಚು ನೆಲಸಿರುವುದೇ ಅಮೆರಿಕದಲ್ಲಿ. ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಟಾಪ್10 ಪಟ್ಟಿಯಲ್ಲಿ 8 ಕಂಪನಿಗಳು ಅಮೆರಿಕದವೇ. ಸೌದಿ ಅರೇಬಿಯಾದ ಸೌದಿ ಅರಾಮ್ಕೋ ಮತ್ತು ತೈವಾನ್ ದೇಶದ ಟಿಎಸ್ಎಂಸಿ ಸಂಸ್ಥೆಗಳು ಮಾತ್ರ ಕ್ರಮವಾಗಿ 3 ಮತ್ತು 10ನೇ ಸ್ಥಾನದಲ್ಲಿವೆ. ಇವೆರಡು ಕಂಪನಿಗಳು ಅಮೆರಿಕದ ಕೃಪಾಶೀರ್ವಾದ ಇರುವ ದೇಶಗಳದ್ದು ಎಂಬುದು ಗಮನಾರ್ಹ.
ಈಗ ಚೀನಾ ಕಂಪನಿಗಳೂ ಮುಂಚೂಣಿಗೆ ಬರುತ್ತಿರುವುದು ಹೌದು. ಆದರೆ, ಷೇರುಸಂಪತ್ತಿನಲ್ಲಿ ಜಗತ್ತಿನ 100 ಕಂಪನಿಗಳ ಪಟ್ಟಿಯಲ್ಲಿ 62 ಕಂಪನಿಗಳು ಅಮೆರಿಕದವು ಎಂಬುದನ್ನೂ ಇಲ್ಲಿ ಉಲ್ಲೇಖಿಸಬಹುದು. ಈ ಪಟ್ಟಿಯಲ್ಲಿ ಇತರ ದೇಶಗಳಿಗೆ ಸೇರಿದ 38 ಕಂಪನಿಗಳಿವೆ. ಭಾರತದ 2 ಕಂಪನಿಗಳೂ ಒಳಗೊಳಗೊಂಡಿವೆ. ನಿರೀಕ್ಷೆಯಂತೆ ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಒಟ್ಟು ಷೇರುಸಂಪತ್ತಿನಲ್ಲಿ 49ನೇ ಸ್ಥಾನದಲ್ಲಿದೆ. ಇನ್ನು, ಭಾರತದ ಅತಿದೊಡ್ಡ ಐಟಿ ಸಂಸ್ಥೆ ಟಿಸಿಎಸ್ 85ನೇ ಸ್ಥಾನದಲ್ಲಿದೆ. ಹಿಂಡನ್ಬರ್ಗ್ ಹೊಡೆತ ಇಲ್ಲದೇ ಹೋಗಿದ್ದರೆ ಅದಾನಿ ಗ್ರೂಪ್ನ ಕಂಪನಿ ಕೂಡ ಪಟ್ಟಿಯಲ್ಲಿ ಇರುವ ಸಾಧ್ಯತೆ ಇತ್ತು.
ಇದನ್ನೂ ಓದಿ: Microsoft: ಮೈಕ್ರೋಸಾಫ್ಟ್ ಷೇರುಬೆಲೆ ಹೊಸ ದಾಖಲೆ; ಷೇರುಸಂಪತ್ತು 212 ಲಕ್ಷ ಕೋಟಿ ರೂ
ರಿಲಾಯನ್ಸ್ ಇಂಡಸ್ಟ್ರೀಸ್, ಭಾರತ: 212.36 ಬಿಲಿಯನ್ ಡಾಲರ್ (49ನೇ ಸ್ಥಾನ)
ಟಿಸಿಎಸ್, ಭಾರತ: 142.60 ಬಿಲಿಯನ್ ಡಾಲರ್ (85ನೇ ಸ್ಥಾನ)
ಇದನ್ನೂ ಓದಿ: Pakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು
ಆ್ಯಪಲ್ ಕಂಪನಿಯ ಒಟ್ಟು ಷೇರುಸಂಪತ್ತು 2.935 ಟ್ರಿಲಿಯನ್ ಡಾಲರ್ನಷ್ಟಿದೆ. ಅಂದರೆ 240 ಲಕ್ಷ ಕೋಟಿ ರೂಪಾಯಿಯಷ್ಟು ಮೊತ್ತದ ಷೇರುಸಂಪತ್ತು ಆ್ಯಪಲ್ಗೆ ಇದೆ. ಭಾರತದ ಜಿಡಿಪಿಗೆ ಬಹಳ ಸಮೀಪ ಇದೆ. ಭಾರತದ ಜಿಡಿಪಿ 260 ಲಕ್ಷ ಕೋಟಿ ರೂನಷ್ಟು ಇದೆ.
ಈ ಅಂಕಿ ಅಂಶ ಮೇಲ್ನೋಟಕ್ಕೆ ಅಷ್ಟು ಮಹತ್ವ ಅನಿಸದು, ಅಥವಾ ಗಮನ ಸೆಳೆಯದೇ ಹೋಗಬಹುದು. ಆ್ಯಪಲ್ ಹೊಂದಿರುವ ಒಟ್ಟು ಷೇರುಸಂಪತ್ತು ಎಷ್ಟಿದೆ ಎಂದರೆ ಜಗತ್ತಿನ 127 ದೇಶಗಳ ಜಿಡಿಪಿಯನ್ನು ಒಟ್ಟಿಗೆ ಸೇರಿಸಿದರೆ ಆಗುವ ಮೊತ್ತಕ್ಕಿಂತಲೂ ತುಸು ಹೆಚ್ಚೇ ಇದೆ. ಆ್ಯಪಲ್ ಷೇರುಸಂಪತ್ತು 2.935 ಟ್ರಿಲಿಯನ್ ಡಾಲರ್ ಇದ್ದರೆ ಈ 127 ದೇಶಗಳ ಒಟ್ಟು ಜಿಡಿಪಿ 2.85 ಟ್ರಿಲಿಯನ್ ಡಾಲರ್ ಆಗುತ್ತದೆ. 127 ದೇಶಗಳಲ್ಲಿ ಮಾಲ್ಡೀವ್ಸ್, ಕಿರ್ಗಿಸ್ತಾನ್, ಸೊಮಾಲಿಯಾ, ಸಿರಿಯಾ, ಮಾರಿಷಸ್, ನಮೀಬಿಯಾ, ಆರ್ಮೇನಿಯಾ, ಅಫ್ಘಾನಿಸ್ತಾನ, ಯೆಮೆನ್, ಝಾಂಬಿಯಾ, ಲೆಬನಾನ್, ಉಗಾಂಡ, ಟುನಿಶಿಯಾ, ಉಜ್ಬೆಕಿಸ್ತಾನ್ ಇತ್ಯಾದಿ ಇವೆ. ಶ್ರೀಲಂಕಾವನ್ನೂ ಈ ಪಟ್ಟಿಗೆ ಸೇರಿಸಬಹುದು.
ಜಗತ್ತಿನ ಟಾಪ್ 10 ಕಾರ್ಪೊರೇಟ್ ಕಂಪನಿಗಳ ಒಟ್ಟು ಷೇರುಸಂಪತ್ತು ವಿಶ್ವದ ಮುಕ್ಕಾಲು ಪಾಲು ದೇಶಗಳ ಜಿಡಿಪಿಗಿಂತ ಹೆಚ್ಚೇ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ