Fact Check: ಮೂರು ದಿನ ಎಟಿಎಂ, ಆನ್​ಲೈನ್ ಟ್ರಾನ್ಸಾಕ್ಷನ್ಸ್ ಬಂದ್ ಆಗುತ್ತವಾ? ಸರ್ಕಾರ ನೀಡಿದ ಸ್ಪಷ್ಟನೆ

PIB fact check on viral news of ATMs closing for 2-3 days: ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸತ್ಯದ ಸುದ್ದಿಗಳು ಹೂತುಹೋಗುವಷ್ಟು ಸುಳ್ಳು ಸುದ್ದಿಗಳ ರಾಶಿ ಇದೆ. ಯುದ್ಧದ ಕಾರಣ ರ್ಯಾನ್ಸಮ್​​ವೇರ್ ವೈರಸ್ ದಾಳಿಯಾಗಿದ್ದು, 2-3 ದಿನ ಎಟಿಎಂಗಳನ್ನು ಬಂದ್ ಮಾಡಲಾಗುತ್ತದೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಫೇಕ್ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟೀಮ್ ಸ್ಪಷ್ಟಪಡಿಸಿದೆ.

Fact Check: ಮೂರು ದಿನ ಎಟಿಎಂ, ಆನ್​ಲೈನ್ ಟ್ರಾನ್ಸಾಕ್ಷನ್ಸ್ ಬಂದ್ ಆಗುತ್ತವಾ? ಸರ್ಕಾರ ನೀಡಿದ ಸ್ಪಷ್ಟನೆ
ಎಟಿಎಂ

Updated on: May 09, 2025 | 3:03 PM

ನವದೆಹಲಿ, ಮೇ 9: ಯುದ್ಧ ಭೀತಿಯ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಅಂತೆ ಕಂತೆಗಳ ಸಂತೆ ಸಾಕಷ್ಟಿದೆ. ನಾನಾ ತರಹದ ಸುಳ್ಳು ಸುದ್ದಿಗಳು (fake news) ಹರಡುತ್ತಿವೆ. ಯಾವುದೋ ದೇಶದ, ಯಾವಾಗಲೋ ನಡೆದ ದೃಶ್ಯಗಳು ಈಗ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರತ್ಯಕ್ಷವಾಗುತ್ತಿವೆ. ಅದರಲ್ಲಿ ಎಟಿಎಂ ಬಂದ್ ಆಗುತ್ತೆನ್ನುವ ಸುದ್ದಿಯೂ ಒಂದು. ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕುಗಳು, ಎಟಿಎಂಗಳು ಬಂದ್ ಆಗಿರುತ್ತವೆ ಎನ್ನುವಂತಹ ಸುದ್ದಿ ಕೇಳಿಬರುತ್ತಿದೆ. ಗಡಿಭಾಗದಲ್ಲಿ ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಎಟಿಎಂ ಬಂದ್ ಆಗಬಹುದು ಎನ್ನುವ ಸುದ್ದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಮ್ಮತಿ ಸಿಕ್ಕಂತಿದೆ. ಅದು ವೈರಲ್ ಆಗುತ್ತಿದೆ. ಇದೇ ವೇಳೆ ಸರ್ಕಾರವು ಈ ಸುದ್ದಿಯನ್ನು ಅಲ್ಲಗಳೆದಿದೆ. ಎಟಿಎಂ ಬಂದ್ ಆಗುವುದಿಲ್ಲ ಎಂದಿದೆ.

ಸರ್ಕಾರದ ಪಿಐಬಿ ಇಲಾಖೆಯ ಫ್ಯಾಕ್ಟ್ ಚೆಕ್ ವಿಭಾಗದ ಎಕ್ಸ್ ಅಕೌಂಟ್ ಈ ನಕಲಿ ಸುದ್ದಿಯನ್ನು ಬಸ್ಟ್ ಮಾಡಿದೆ. ‘ಎಟಿಎಂಗಳು 2-3 ದಿನ ಮುಚ್ಚಿರುತ್ತವೆ ಎಂಬುದು ಸುಳ್ಳು ಸುದ್ದಿ. ಮಾಮೂಲಿಯಂತೆ ಇವು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ವೆರಿಫೈ ಆಗದ ಮೆಸೇಜ್​​ಗಳನ್ನು ಶೇರ್ ಮಾಡಬೇಡಿ’ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್​​​ನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ
ಪೆಟ್ರೋಲ್ ಸಿಗುತ್ತೆ, ಗಾಬರಿ ಬೇಡ: ಇಂಡಿಯನ್ ಆಯಿಲ್ ಸ್ಪಷ್ಟನೆ
ಟರ್ಕಿಶ್ ಏರ್​​ಲೈನ್ಸ್ ಜೊತೆ ಸಹಭಾಗಿತ್ವ ಕಡಿದ ಭಾರತೀಯ ಕಂಪನಿ
ಇವತ್ತಿನ ಷೇರುಬಜಾರು ಭಾರತಕ್ಕೆ ಹೊಡೆತ
ಪಾಕಿಸ್ತಾನಕ್ಕೆ 110552678340 ರೂ ಐಎಂಎಫ್ ಸಾಲಕ್ಕೆ ಭಾರತದಿಂದ ಅಡ್ಡಗಾಲು?

ಇದನ್ನೂ ಓದಿ: ಪೆಟ್ರೋಲ್ ಪಡೆಯಲು ಮುಗಿಬಿದ್ದ ಜನರು; ಗಾಬರಿ ಬೇಡ… ಭಾರತದಲ್ಲಿ ಇಂಧನ ಸಾಕಷ್ಟಿದೆ: ಇಂಡಿಯನ್ ಆಯಿಲ್ ಸ್ಪಷ್ಟನೆ

ಎಸ್​​ಬಿಐ ಕೂಡ ಈ ಸುದ್ದಿಗೆ ಸ್ಪಷ್ಟನೆ ನೀಡಿದೆ. ತಮ್ಮ ಎಲ್ಲಾ ಎಟಿಎಂಗಳು, ಸಿಡಿಎಂಗಳು, ಡಿಜಿಟಲ್ ಸರ್ವಿಸ್​​​ಗಳು ಸಾರ್ವಜನಿಕವಾಗಿ ಲಭ್ಯ ಇರುತ್ತವೆ. ವೆರಿಫೈ ಆಗದ ಮಾಹಿತಿಯನ್ನು ನಂಬಬೇಡಿ ಎಂದು ಎಸ್​​​ಬಿಐ ಹೇಳಿದೆ.

ಡ್ಯಾನ್ಸ್ ಆಫ್ ದಿ ಹಿಲರಿ… ಏನಿದೆ ಆ ವೈರಲ್ ಮೆಸೇಜ್​​ನಲ್ಲಿ…?

‘ಎಟಿಎಂಗಳು ಮುಂದಿನ 2-3 ದಿನ ಮುಚ್ಚಿರಬಹುದು. ಪಾಕಿಸ್ತಾನದೊಂದಿಗಿನ ಯುದ್ಧದ ವೇಳೆ ರಾನ್ಸಮ್​ವೇರ್ ಸೈಬರ್ ದಾಳಿ ಇದಕ್ಕೆ ಕಾರಣ ಇರಬಹುದು… ಇವತ್ತು ಯಾವುದೇ ಆನ್ಲೈನ್ ಟ್ರಾನ್ಸಾಕ್ಷನ್ ಮಾಡಬೇಡಿ. ಡ್ಯಾನ್ಸ್ ಆಫ್ ದಿ ಹಿಲರಿ ಎನ್ನುವ ಹೆಸರಿನ ವಿಡಿಯೋವನ್ನು ತೆರೆಯಬೇಡಿ ಎಂದು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್​​ನಲ್ಲಿರುವವರಿಗೆಲ್ಲಾ ತಿಳಿಸಿ.

‘ನಿಮ್ಮ ಮೊಬೈಲ್ ಅನ್ನು ಫಾರ್ಮ್ಯಾಟ್ ಮಾಡಬಲ್ಲ ವೈರಸ್ ಅದು. ಅದು ಬಹಳ ಡೇಂಜರಸ್ ಎಂಬುದು ಗೊತ್ತಿರಲಿ. ಬಿಬಿಸಿ ರೇಡಿಯೋದಲ್ಲಿ ಇವತ್ತು ಇದನ್ನು ಘೋಷಿಸಲಾಗಿದೆ’ ಎಂದು ಈ ಮೆಸೇಜ್​​​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಟರ್ಕಿ ಏರ್​​ಲೈನ್ಸ್ ಜೊತೆ ಪಾರ್ಟ್ನರ್​ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್​​ಸ್ಟೇಸ್ ಘೋಷಣೆ

ಈ ರೀತಿಯ ಫೇಕ್ ಸುದ್ದಿಗಳನ್ನು ಗುರುತಿಸುವುದು ತುಸು ಸುಲಭ. ಹೆಚ್ಚಿನ ಮೆಸೇಜ್​​​ಗಳು, ತತ್​​ಕ್ಷಣ ಶೇರ್ ಮಾಡಿ ಎಂದು ಕೊನೆಯಲ್ಲಿ ಬರೆದಿರುತ್ತವೆ. ಅಥವಾ, ದೂರದರ್ಶನದಲ್ಲಿ ಹೇಳಲಾಯಿತೆಂದೋ, ಬಿಬಿಸಿ ಚಾನಲ್​​​ನಲ್ಲಿ ಹೇಳಲಾಯಿತೆಂದೋ ಹೀಗೆ ಬರೆದಿದ್ದರೆ ಅದು ಬಹುತೇಕ ಸುಳ್ಳು ಸುದ್ದಿಯೇ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 9 May 25