ಭಾರತದಲ್ಲಿ ಕಂಪನಿ ಮುಖ್ಯಸ್ಥರ ಸಂಭಾವನೆ ಶೇ. 40ರಷ್ಟು ಹೆಚ್ಚಳ; ಸಿಇಒಗಳ ಸರಾಸರಿ ಸಂಬಳ ಎಷ್ಟಿದೆ ಗೊತ್ತಾ?

Average CEO compensation in India: ಭಾರತದಲ್ಲಿ ಸಿಇಒಗಳ ಸರಾಸರಿ ಕಾಂಪೆನ್ಸೇಶನ್ ಗಣನೀಯವಾಗಿ ಹೆಚ್ಚಾಗಿದೆ. ಡುಲಾಯ್ಟ್ ಸಮೀಕ್ಷಾ ವರದಿ ಪ್ರಕಾರ ಕೋವಿಡ್ ಮುಂಚಿನ ಸ್ಥಿತಿಗೆ ಹೋಲಿಸಿದರೆ ಸಿಇಒ ಸಂಭಾವನೆ ಶೇ. 40ರಷ್ಟು ಹೆಚ್ಚಾಗಿದೆ. ಸರಾಸರಿ ಸಿಇಒ ಕಾಂಪೆನ್ಸೇಶನ್ ವರ್ಷಕ್ಕೆ 13.8 ಕೋಟಿ ರೂ ಇದೆ. ಪ್ರಮೋಟರ್​ಗಳೂ ಆಗಿರುವ ಸಿಇಒಗಳ ಸರಾಸರಿ ಕಾಂಪೆನ್ಸೇಶನ್ 16 ಕೋಟಿ ರೂಗೂ ಹೆಚ್ಚು. ಡುಲಾಯ್ಟ್ ಸಮೀಕ್ಷೆಯಲ್ಲಿ ಭಾರತದ ಪ್ರಮುಖ 400ಕ್ಕೂ ಹೆಚ್ಚು ಖಾಸಗಿ ಕಂಪನಿಗಳನ್ನು ಬಳಸಿಕೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕಂಪನಿಗಳ ಪೈಕಿ ಶೇ. 45ರಷ್ಟು ಕಂಪನಿಗಳ ಸಿಇಒಗಳು ಕಳೆದ 5 ವರ್ಷದಲ್ಲಿ ಬದಲಾಗಿದ್ದಾರೆ.

ಭಾರತದಲ್ಲಿ ಕಂಪನಿ ಮುಖ್ಯಸ್ಥರ ಸಂಭಾವನೆ ಶೇ. 40ರಷ್ಟು ಹೆಚ್ಚಳ; ಸಿಇಒಗಳ ಸರಾಸರಿ ಸಂಬಳ ಎಷ್ಟಿದೆ ಗೊತ್ತಾ?
ಸಂಬಳ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2024 | 11:47 AM

ನವದೆಹಲಿ, ಏಪ್ರಿಲ್ 9: ಭಾರತದಲ್ಲಿ ಸಿಇಒಗಳ ವೇತನ ಮತ್ತು ಸಂಭಾವನೆ (CEO compensation) ಗಣನೀಯವಾಗಿ ಹೆಚ್ಚಾಗಿದೆ. ಡುಲೋಯ್ಟ್ ವರದಿಯೊಂದರ (Deloitte report) ಪ್ರಕಾರ ಕೋವಿಡ್ ಮುಂಚಿನ ಕಾಲಘಟ್ಟಕ್ಕೆ ಹೋಲಿಸಿದರೆ ಈಗ ಸಿಇಒಗಳ ಕಾಂಪೆನ್ಸೇಶನ್ ಶೇ. 40ರಷ್ಟು ಹೆಚ್ಚಾಗಿದೆ. ಸರಾಸರಿ ಸಿಇಒ ಕಾಂಪೆನ್ಸೇಶನ್ 13.8 ಕೋಟಿ ರೂ ಇದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಮೊತ್ತವು ಇನ್ಸೆಂಟಿವ್​ಗಳಿಂದ ಕೂಡಿದೆ. ಡುಲಾಯ್ಟ್ ಇಂಡಿಯಾ ಎಕ್ಸಿಕ್ಯೂಟಿವ್ ಪರ್ಫಾರ್ಮೆನ್ಸ್ ಅಂಡ್ ರಿವಾರ್ಡ್ಸ್ ಸರ್ವೆ 2024 ವರದಿಯಲ್ಲಿ ಸಿಇಒಗಳ ಸಾಧನೆ ಮತ್ತು ಸಂಭಾವನೆ ಕುರಿತ ಮಾಹಿತಿ ಪ್ರಕಟಿಸಲಾಗಿದೆ. ಸಿಇಒಗಳ ಸರಾಸರಿ ಸಂಭಾವನೆ ವಾರ್ಷಿಕವಾಗಿ 13.8 ಕೋಟಿ ರೂ ಇದ್ದರೆ, ಕಂಪನಿಯ ಮುಖ್ಯಸ್ಥರು ಅಥವಾ ಅವರ ಕುಟುಂಬ ಸದಸ್ಯರು ಸಿಇಒಗಳಾಗಿದ್ದರೆ (CEOs from Promoters family) ಅವರ ಸರಾಸರಿ ಸಂಭಾವನೆ 16.7 ಕೋಟಿ ರೂ ಎಂದು ಈ ವರದಿ ಹೇಳುತ್ತದೆ.

ಹೊರಗಿನ ವ್ಯಕ್ತಿ ಸಿಇಒ ಆದರೆ ನೀಡುವ ಕಾಂಪೆನ್ಸೇಶನ್​ಗಿಂತ ಪ್ರೊಮೋಟರ್ ಸಿಇಒ ಪಡೆಯುವ ಸಂಭಾವನೆ ಹೆಚ್ಚಾಗಿರಲು ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದು, ಪ್ರೊಮೋಟರ್ಸ್​ಗೆ ಹೋಲಿಸಿದರೆ, ವೃತ್ತಿಪರ ಸಿಇಒಗಳು ಹೆಚ್ಚು ಹೆಚ್ಚು ಅವಧಿ ಇರುವುದಿಲ್ಲ. ಇದು ಕಾಂಪೆನ್ಸೇಶನ್ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಶ್ರೀಮಂತರ ಸಂಪತ್ತು ಕರಗಿಸಿ ಬಡವರಿಗೆ ಹಂಚುವ ಕೆಲಸ ಸಾಧ್ಯವಾ? ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಯತ್ತ ಒಂದು ನೋಟ

ಡುಲಾಯ್ಟ್ ವರದಿಯಲ್ಲಿ ಉಲ್ಲೇಖಿಸಲಾಗಿರುವ ಎರಡನೆಯ ಅಂಶವೆಂದರೆ, ಪ್ರೊಮೋಟರ್ ಸಿಇಒ ಕಾಂಪೆನ್ಸೇನ್​ನ ವಿಸ್ತಾರ ದೊಡ್ಡದಿರುತ್ತದೆ. ಇದರಿಂದ ಹೆಚ್ಚು ಕಾಂಪೆನ್ಸೇಶನ್ ಇರುತ್ತದೆ.

ಇದೇ ವೇಳೆ, ಭಾರತದ ಪ್ರಮುಖ ಕಂಪನಿಗಳಲ್ಲಿ ಕಳೆದ ಐದು ವರ್ಷದಲ್ಲಿ ಶೇ. 45ರಷ್ಟು ಸಿಇಒಗಳ ಬದಲಾವಣೆ ಆಗಿದೆ. ಪ್ರಮುಖ 400ಕ್ಕೂ ಹೆಚ್ಚು ಖಾಸಗಿ ಕಂಪನಿಗಳನ್ನು ಈ ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದೆ. ಹೊಸದಾಗಿ ಸಿಇಒಗಳಾಗಿರುವವರಲ್ಲಿ ಶೇ. 60ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ. ಮಿಕ್ಕ ಶೇ. 40ರಷ್ಟು ಹೊಸ ಸಿಇಒಗಳು ವಿದೇಶಗಳಿಂದ ತರಲಾಗಿರುವವರಾಗಿದ್ದಾರೆ.

ಇದನ್ನೂ ಓದಿ: Apple Houses: ಚೀನಾ, ವಿಯೆಟ್ನಾಂದಲ್ಲಿಯಂತೆ ಭಾರತದಲ್ಲೂ ಉದ್ಯೋಗಿಗಳಿಗೆ ಮನೆ ಕಟ್ಟಿಕೊಡಲಿದೆ ಆ್ಯಪಲ್

ಸೆಪ್ಟಂಬರ್​ನಿಂದ ಈ ಸಮೀಕ್ಷೆ ನಡೆದಿದ್ದು, ಸರ್ಕಾರಿ ಕಂಪನಿಗಳನ್ನು ಪರಿಗಣಿಸಲಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ