
ಹತ್ತಿರ ಹತ್ತಿರ ಏಳು ವರ್ಷದ ಹಿಂದೆ ಆರಂಭವಾದ ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ (AB-JAY- Ayushman Bharat Jan Aarogya Yojana) ದುರ್ಬಲ ಸಮುದಾಯಕ್ಕೆ ಬಹಳ ಉಪಯುಕ್ತ ಎನಿಸಿದೆ. ನಿರ್ಗತಿಕರು, ವಿಶೇಷ ಚೇತನರು ಇತ್ಯಾದಿ ದುರ್ಬಲ ಸಮುದಾಯಗಳ ಜೊತೆಗೆ 70 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ವರ್ಗಗಳ ಹಿರಿಯ ನಾಗರಿಕರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈಗ ಈ ಸ್ಕೀಮ್ ಹಿಂದೆಂದಿಗಿಂತಲೂ ಗಮನಾರ್ಹ ಎನಿಸಿದೆ.
ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ ಅಡಿ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನ ಕಾರ್ಡ್ ಅಥವಾ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಬಹುದು. ಇದು ವರ್ಷಕ್ಕೆ 5 ಲಕ್ಷ ರೂವರೆಗೆ ಉಚಿತ ಹೆಲ್ತ್ ಇನ್ಷೂರೆನ್ಸ್ ಕವರೇಜ್ ನೀಡುವ ಯೋಜನೆಯಾಗಿದೆ. ಆಧಾರ್ ಕಾರ್ಡ್ ದಾಖಲೆ ಇದ್ದರೆ ಸಾಕು ಈ ಹೆಲ್ತ್ ಇನ್ಷೂರೆನ್ಸ್ ಕಾರ್ಡ್ ಅನ್ನು ಪಡೆಯಬಹುದು.
ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ
ದೇಶಾದ್ಯಂತ ಈ ಯೋಜನೆ ಅಡಿ ಎನ್ಲಿಸ್ಟ್ ಆಗಿರುವ ಸಾವಿರಾರು ಆಸ್ಪತ್ರೆಗಳಲ್ಲಿ ಎಲ್ಲಿ ಬೇಕಾದರೂ ಕಾರ್ಡ್ದಾರರು ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ಸಿಗುತ್ತದೆ. ಆಯುಷ್ಮಾನ್ ಭಾರತ್ ಸ್ಕೀಮ್ನ ಆ್ಯಪ್ಗೆ ಹೋಗಿ ಸುಲಭವಾಗಿ ನೊಂದಾಯಿಸಿ ಕಾರ್ಡ್ ಪಡೆಯಿರಿ.
ABHA ಎಂದರೆ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್. ಇದು ಡಿಜಿಟಲ್ ಹೆಲ್ತ್ ಐಡಿಯಾಗಿದೆ. ಪ್ಯಾನ್ ಕಾರ್ಡ್ ಹೇಗೆ ನಿಮ್ಮ ಹಣಕಾಸು ವಹಿವಾಟುಗಳನ್ನು ಒಂದೇ ಕಡೆ ಕ್ರೋಢೀಕರಿಸುತ್ತದೋ, ಯುಎಎನ್ ಹೇಗೆ ನಿಮ್ಮ ಎಲ್ಲಾ ಇಪಿಎಫ್ ದಾಖಲೆಗಳನ್ನು ಒಳಗೊಂಡಿರುತ್ತದೋ, ಹಾಗೆಯೇ, ಆಭಾ ಕಾರ್ಡ್ ಕೂಡ ನಿಮ್ಮ ಎಲ್ಲಾ ಆರೋಗ್ಯ ದಾಖಲೆಗಳನ್ನು ಒಂದೇ ಕಡೆ ಸೇರಿಸುತ್ತದೆ.
ಇದನ್ನೂ ಓದಿ: 500 ರೂ ನೋಟು ನಿಷೇಧ ಆಗುತ್ತೆ ಅನ್ನೋದು ಸುಳ್ಳು ಸುದ್ದಿ; ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ ಇದು
ನೀವು ಆಸ್ಪತ್ರೆಗೆ ದಾಖಲಾದಾಗೆಲ್ಲಾ ಅಥವಾ ಒಪಿಡಿಗೆ ಹೋದಾಗೆಲ್ಲಾ ಇನ್ಷೂರೆನ್ಸ್ ಕಾರ್ಡ್ ಜೊತೆಗೆ ಆಭಾ ಐಡಿಯನ್ನೂ ನೀಡಬಹುದು. ಇದರಿಂದ ನಿಮ್ಮ ಹೆಲ್ತ್ ಹಿಸ್ಟರಿ ಒಂದೇ ಕಡೆ ದಾಖಲಾಗುತ್ತಾ ಹೋಗುತ್ತದೆ. ನೀವು ಆಸ್ಪತ್ರೆಗೆ ದಾಖಲಾದಾಗ ವೈದ್ಯರಿಗೆ ನಿಮ್ಮ ಮೆಡಿಕಲ್ ಹಿಸ್ಟರಿ ಸುಲಭವಾಗಿ ಸಿಗುತ್ತದೆ. ಇದರಿಂದ ಚಿಕಿತ್ಸೆ ನೀಡುವುದು ಬಹಳ ಸುಲಭವಾಗುತ್ತದೆ.ಹಾಗೆಯೇ, ಆಭಾ ಐಡಿ ಇದ್ದರೆ ನೀವು ಸುಲಭವಾಗಿ ಇನ್ಷೂರೆನ್ಸ್ ಕ್ಲೇಮ್ ಸೆಟಲ್ಮೆಂಟ್ ಮಾಡಬಹುದು.
ನೀವು ಈ ವೆಬ್ಸೈಟ್ಗೆ ಹೋಗಿ: abha.abdm.gov.in
ಕ್ರಿಯೇಟ್ ಆಭಾ ನಂಬರ್ ಕ್ಲಿಕ್ ಮಾಡಿ. ಇಲ್ಲಿ ಆಧಾರ್ ನಂಬರ್ ಇತ್ಯಾದಿ ವಿವರಗಳನ್ನು ನಮೂದಿಸಿದಾಗ ನಿಮಗೆ 14 ಅಂಕಿಗಳ ಆಭಾ ಐಡಿ ಜನರೇಟ್ ಆಗುತ್ತದೆ. ಇದನ್ನು ನೀವು ಆಯುಷ್ಮಾನ್ ಭಾರತ್ ಸ್ಕೀಮ್ನಲ್ಲಿ ಬಳಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ