AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 27 ಇದ್ದ ಅತಿಬಡತನ 11 ವರ್ಷದಲ್ಲಿ ಶೇ. 5.3ಕ್ಕೆ ಇಳಿಕೆ; ವಿಶ್ವಬ್ಯಾಂಕ್ ದತ್ತಾಂಶದಿಂದ ಮಾಹಿತಿ

India's extreme poverty down to 5.3%: ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ದತ್ತಾಂಶ ಪ್ರಕಾರ ಭಾರತದಲ್ಲಿ 11 ವರ್ಷದಲ್ಲಿ ಅತಿ ಬಡತನ ಪ್ರಮಾನ ಶೇ. 27ರಿಂದ ಶೇ. 5.3ಕ್ಕೆ ಇಳಿದಿದೆ. 2011-12ರಲ್ಲಿ ಅತಿಬಡತನ ಶೇ. 27.1 ಇತ್ತು. 2022-23ರಲ್ಲಿ ಇದು ಶೇ. 5.3ಕ್ಕೆ ಇಳಿದಿದೆ. ಅತಿಬಡತನಕ್ಕೆ ಕನಿಷ್ಠ ಆದಾಯ ಮಟ್ಟವನ್ನು 2.1 ಡಾಲರ್​​ನಿಂದ 3 ಡಾಲರ್​​ಗೆ ಏರಿಸಿದರೂ ಭಾರತದಲ್ಲಿ ಅತಿಬಡತನ ತಗ್ಗಿರುವುದು ಗಮನಾರ್ಹ.

ಶೇ. 27 ಇದ್ದ ಅತಿಬಡತನ 11 ವರ್ಷದಲ್ಲಿ ಶೇ. 5.3ಕ್ಕೆ ಇಳಿಕೆ; ವಿಶ್ವಬ್ಯಾಂಕ್ ದತ್ತಾಂಶದಿಂದ ಮಾಹಿತಿ
ಬಡತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2025 | 7:38 PM

Share

ನವದೆಹಲಿ, ಜೂನ್ 8: ಭಾರತದಲ್ಲಿ ಬಡತನ ಮತ್ತು ಅತಿಬಡತನ (extreme poverty) ಸಾಕಷ್ಟು ಕಡಿಮೆ ಆಗುತ್ತಿರುವುದು ವಿವಿಧ ಸಂಸ್ಥೆಗಳ ಅಂಕಿ ಅಂಶದಿಂದ ತಿಳಿದುಬರುತ್ತದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಅತಿಬಡತನ ಕಳೆದ ಒಂದು ದಶಕದಲ್ಲಿ ಗಣನೀಯವಾಗಿ ತಗ್ಗಿದೆ. 2011-12ರಲ್ಲಿ ಶೇ. 27.1ರಷ್ಟಿದ್ದ ಅತಿಬಡತನವು 2022-23ರಲ್ಲಿ ಶೇ. 5.3ಕ್ಕೆ ಇಳಿದಿದೆ. ಗಮನಾರ್ಹ ಸಂಗತಿ ಎಂದರೆ, ಅತಿಬಡತನಕ್ಕೆ ಪರಿಗಣಿಸಲಾದ ಕನಿಷ್ಠ ಮಟ್ಟವನ್ನು ಎತ್ತರಿಸಲಾಗಿದ್ದರೂ ಇದು ಇಷ್ಟು ಪ್ರಮಾಣದಲ್ಲಿ ಇಳಿಕೆ ಆಗಿದೆ.

ಯಾರು ಅತಿಬಡವರು?

ಒಬ್ಬ ವ್ಯಕ್ತಿಯ ಒಂದು ದಿನದ ಆದಾಯ 3 ಡಾಲರ್ (ಸುಮಾರು 250 ರೂ) ಮಟ್ಟಕ್ಕಿಂತ ಕಡಿಮೆ ಇದ್ದರೆ ಅದನ್ನು ಅತಿಬಡತನ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ 2.15 ಡಾಲರ್ ಇದ್ದ ಮಾನದಂಡ ಮಟ್ಟವನ್ನು ಹೆಚ್ಚಿಸಿ, 2021ರ ಪರ್ಚೇಸಿಂಗ್ ಪವರ್ ಪ್ಯಾರಿಟಿ ಆಧಾರದ ಮೇಲೆ ಲೆಕ್ಕ ಮಾಡಲಾಯಿತು. ಈ ಹಿಂದಿನ ಮಾನದಂಡದಲ್ಲಿ 2017ರ ಪರ್ಚೇಸಿಂಗ್ ಪವರ್ ಪ್ಯಾರಿಟಿ ಲೆಕ್ಕ ಪರಿಗಣಿಸಲಾಗಿತ್ತು.

ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ

ಈ ರೀತಿ ಅತಿಬಡತನಕ್ಕೆ ಮಾನದಂಡ ಮಟ್ಟವನ್ನು ಹೆಚ್ಚಿಸಿದ ಬಳಿಕ ಜಾಗತಿಕವಾಗಿ ಅತಿಬಡತನ ಪ್ರಮಾಣ 12.5 ಕೋಟಿಯಷ್ಟು ಹೆಚ್ಚಾಯಿತು. ಆದರೆ, ಭಾರತದಲ್ಲಿ ಅಚ್ಚರಿ ಎಂಬಂತೆ ಈ ಅತಿಬಡತನ ಕಡಿಮೆ ಆಗಿದೆ.

2011-12ರಲ್ಲಿ 34.45 ಕೋಟಿ ಜನರು ಅತಿಬಡತನದ ಸ್ಥಿತಿಯಲ್ಲಿದ್ದರು. 2022-23ರಲ್ಲಿ ಈ ಸಂಖ್ಯೆ 7.52 ಕೋಟಿಗೆ ಇಳಿಮುಖವಾಗಿದೆ. ಬಡತನ ಎಷ್ಟಿದೆ ಎಂದು ತಿಳಿಯಲು ಸರಿಯಾದ ದತ್ತಾಂಶ ಪಡೆಯುವುದು ಮುಖ್ಯ ಎಂಬುದನ್ನು ಈ ಅಂಕಿ ಅಂಶ ತೋರಿಸುತ್ತದೆ ಎಂಬುದು ಸರ್ಕಾರದ ಅನಿಸಿಕೆ.

ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ

ಭಾರತವು ಅತಿ ಬಡತನ ಅಳೆಯಲು ಇರುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿತು. ತನ್ನ ಗೃಹ ಅನುಭೋಗ ವೆಚ್ಚ ಸಮೀಕ್ಷೆಯಲ್ಲಿ ಈ ಮೊದಲು ಯೂನಿಫಾರ್ಮ್ ರೆಫರೆನ್ಸ್ ಪೀರಿಯಡ್ ವಿಧಾನ ಅನುಸರಿಸಲಾಗುತ್ತಿತ್ತು. ಇದರ ಬದಲು ಮಾಡಿಫೈಡ್ ಮಿಕ್ಸೆಡ್ ರೀಕಾಲ್ ಪೀರಿಯಡ್ ವಿಧಾನವನ್ನು ಅನುಸರಿಸಲಾಯಿತು. ಇದರಿಂದ ದೇಶದಲ್ಲಿ ಅನುಭೋಗ ಮಟ್ಟವನ್ನು ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗಿದೆ. ಹಾಗೆಯೇ, ಬಡತನ ಮಟ್ಟವನ್ನೂ ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗಿದೆ. ಹೀಗಾಗಿ, ಭಾರತದಲ್ಲಿ ಅತಿಬಡತನ ಪ್ರಮಾಣ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ