
ಬೆಂಗಳೂರು, ಅಕ್ಟೋಬರ್ 22: ಡಿಜಿಟಲ್ ಐಡೆಂಟಿಟಿ ಮತ್ತು ಸೈಬರ್ ಸೆಕ್ಯೂರಿಟಿ ಕಂಪನಿಯಾದ ಇಮುದ್ರ (eMudhra) ತನ್ನ ಜಾಗತಿಕ ವೆಬ್‌ಸೈಟ್ ಸೆಕ್ಯೂರಿಟಿ ಸರ್ಟಿಫಿಕೇಶನ್ ಬ್ಯುಸಿನೆಸ್ನಿಂದ ಹೊರಬೀಳುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರ ಕೆಲ ಜಾಗತಿಕ ಡಿಜಿಟಲ್ ಸೆಕ್ಯೂರಿಟಿ ಸರ್ಟಿಫಿಕೇಟ್‌ಗಳಲ್ಲಿ ಕೀ ಉತ್ಪಾದನಾ ದೋಷದ (Key generation flaw) ವಿವಾದ ಹುಟ್ಟಿಕೊಂಡ ಬೆನ್ನಲ್ಲೇ, ಕಂಪನಿಯು ಈ ಹೆಜ್ಜೆ ಇಡುತ್ತಿದೆ.
ಕೆಲ ತಿಂಗಳುಗಳ ಹಿಂದೆ ಇಮುದ್ರದ ಕೆಲವು ಜಾಗತಿಕ ಮಧ್ಯಂತರ ಸರ್ಟಿಫಿಕೇಟ್‌ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಅತಿ ದುರ್ಬಲವಾದ ಖಾಸಗಿ ಕೀಗಳು (Weak cryptographic keys) ಉತ್ಪತ್ತಿಯಾಗಿದ್ದವು. ಇದರಿಂದಾಗಿ ಜಾಗತಿಕ ಸೈಬರ್ ಭದ್ರತೆ ಮತ್ತು ಬ್ರೌಸರ್‌ಗಳ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಗಿ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಆ ಸರ್ಟಿಫಿಕೇಟ್‌ಗಳನ್ನು ಬ್ಲಾಕ್ ಮಾಡಿವೆ.
ಇದನ್ನೂ ಓದಿ: ಲಕ್ಷಾಂತರ ವೆಬ್ಸೈಟ್ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ
ಈ ವಿವಾದದ ನಂತರ ಜಾಗತಿಕ ವೆಬ್‌ಸೈಟ್ ಭದ್ರತಾ ಸರ್ಟಿಫಿಕೇಟ್ ವಿಭಾಗದಲ್ಲಿ ಮುಂದುವರಿಯುವುದಕ್ಕಿಂತ, ತನ್ನ ಪ್ರಮುಖ ಹಾಗೂ ಬಲವಾದ ದೇಶೀಯ ವ್ಯವಹಾರಗಳತ್ತ ಗಮನಹರಿಸಲು ಕಂಪನಿ ತೀರ್ಮಾನಿಸಿದೆ.
ಜಾಗತಿಕ ವೆಬ್‌ಸೈಟ್ ದೃಢೀಕರಣ ಪ್ರಮಾಣಪತ್ರದ ವ್ಯವಹಾರಗಳು ಇಮುದ್ರಾಗೆ ತೀರಾ ದೊಡ್ಡ ಆದಾಯ ತಂದುಕೊಡುವಂಥದ್ದಲ್ಲ. ಅದರ ಒಟ್ಟು ಆದಾಯದಲ್ಲಿ ಇದರ ಪಾಲು ಶೇ. 1 ಮಾತ್ರವೇ ಎಂದು ಸಂಸ್ಥೆಯ ಸಂಸ್ಥಾಪಕ ವಿ ಶ್ರೀನಿವಾಸನ್ ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇ-ಮುದ್ರಾ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಖಾಸಗಿ ಕಂಪನಿಯಾಗಿದೆ. ಈ ಘಟನೆ ಬೆಳಕಿಗೆ ಬರುತ್ತಲೇ ಅದರ ಷೇರುಗಳು ಗುರುವಾರ ಕುಸಿದಿವೆ.
ಇದನ್ನೂ ಓದಿ: ಇ-ಮುದ್ರಾ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ; ನಿಜಕ್ಕೂ ಏನಾಯ್ತು?
ಭಾರತದಲ್ಲಿ ಇಮುದ್ರ ಒದಗಿಸುತ್ತಿರುವ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್‌ಗಳು (DSC) ಮತ್ತು ಇ-ಸೈನ್ (eSign) ಸೇವೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಎಂದಿನಂತೆ ಮುಂದುವರಿಯಲಿವೆ. ಈ ಜಾಗತಿಕ ನಿರ್ಧಾರಕ್ಕೂ ಭಾರತದ ದೇಶೀಯ ಎಸ್‌ಎನ್‌ಸಿ ಅಥವಾ ಇ-ಸೈನ್ ಸೇವೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ