Bank Account Scam: ನಿಮಗೆ ಗೊತ್ತಿಲ್ಲದೇ ನಿಮ್ಮ ಹೆಸರಲ್ಲಿ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಸೃಷ್ಟಿ; ಬೆಚ್ಚಿಬೀಳಿಸುತ್ತದೆ ಈ ಸ್ಕ್ಯಾಮ್
Shocker In West Bengal: ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಬುರ್ದ್ವಾನ್ನ ಖಂಡಘೋಷ್ನಲ್ಲಿ ನೂರಾರು ಜನರ ಹೆಸರಿನಲ್ಲಿ ಅವರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಖಾತೆ ಸೃಷ್ಟಿ ಮಾಡಲಾಗಿದೆ. ಜನರ ದಾಖಲೆಯನ್ನು ಉಪಯೋಗಿಸಿ ಬ್ಯಾಂಕ್ ಖಾತೆ ಸೃಷ್ಟಿಸಿ ಅದರಲ್ಲಿ ಲಕ್ಷಾಂತರ ರೂ ಹಣದ ಅಕ್ರಮ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ಖಾತೆಗೆ ನೊಂದಣಿ ಮಾಡಿದ ಫೋನ್ ನಂಬರ್ ಅನ್ನು ಪರಿಶೀಲಿಸಿದಾಗ ಅದು ಅಸ್ತಿತ್ವದಲ್ಲಿ ಇಲ್ಲ ಎನ್ನುವಂತಹ ಸಂದೇಶ ಬರುತ್ತಿದೆ.
ಕೋಲ್ಕತಾ, ಡಿಸೆಂಬರ್ 1: ನಮಗೆ ಗೊತ್ತಿಲ್ಲದಂತೆ ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಇದೀಗ ನಮ್ಮ ಹೆಸರಿನಲ್ಲಿ ನಮಗೇ ಗೊತ್ತಿಲ್ಲದಂತೆ ಬ್ಯಾಂಕ್ ಖಾತೆ ಸೃಷ್ಟಿಸುವ ಪ್ರಕರಣಗಳು (bank account scam) ಹೆಚ್ಚೆಚ್ಚು ಬೆಳಕಿಗೆ ಬರುತ್ತಿದೆ. ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ನ ಖಂಡಘೋಷ್ನ (Khandaghosh) ಜನರಿಗೆ ಇಂಥದ್ದೊಂದು ಶಾಕ್ ಸಿಕ್ಕಿದೆ. ಮನೆಗೆ ಪೋಸ್ಟ್ ಮೂಲಕ ಬಂದ ಎಟಿಎಂ ಕಾರ್ಡ್ ಕಂಡು ಜನರು ದಂಗಾಗಿದ್ದಾರೆ. ತಾವು ಬ್ಯಾಂಕ್ ಖಾತೆ ತೆರೆದೇ ಇಲ್ಲದಿದ್ದರೂ ತಮ್ಮ ಹೆಸರಿನಲ್ಲಿ ಎಟಿಎಂ ಕಾರ್ಡ್ ಬಂದಿರುವುದು ದಿಗ್ಮೂಢರನ್ನಾಗಿಸಿದೆ. ಇಂಥ ಘಟನೆ ಒಬ್ಬಿಬ್ಬರಿಗೆ ಅಲ್ಲ, ಘಂಡಘೋಷ್ನ ನೂರಾರು ಮಂದಿಗೆ ಆಗಿದೆ.
ಜನರ ಹೆಸರಿನಲ್ಲಿ ಬ್ಯಾಂಕ್ ಖಾತೆ ಸೃಷ್ಟಿಸಲಾಗಿದೆ. ಪ್ರತಿಯೊಂದು ಖಾತೆಯಲ್ಲೂ ಲಕ್ಷಾಂತರ ರೂ ಹಣದ ವಹಿವಾಟುಗಳು ನಡೆದಿವೆ. ಇವು ಅಕ್ರಮ ವಹಿವಾಟುಗಳಾಗಿರುವ ಸಾಧ್ಯತೆ ಇದೆ. ಈ ಖಾತೆಯನ್ನು ಯಾರು ಮಾಡಿದರು, ಏಕೆ ಮಾಡಿದರು ಎಂಬುದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಬ್ಯಾಂಕ್ನವರಿಗೂ ಕೂಡ ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಈ ಖಾತೆ ರಚಿಸಲು ಬಳಸಿದ ದಾಖಲೆ ಈ ಜನರದ್ದೇ ಆಗಿದೆ. ಹೆಸರು, ವಿಳಾಸವೂ ಅವರದ್ದೆಯೇ. ಆದರೆ, ಫೋನ್ ನಂಬರ್ ಮಾತ್ರ ಬೇರೆಯದ್ದಿದೆ. ಟಿವಿ9 ವಾಹಿನಿಯ ವರದಿಗಾರ ಈ ಫೋನ್ ನಂಬರ್ ಡಯಲ್ ಮಾಡಿದಾಗ ಸ್ವಿಚ್ ಆಫ್ ಬರುತ್ತಿದೆ. ಅಥವಾ ಮೊಬೈಲ್ ನಾಟ್ ಇನ್ ಯೂಸ್ ಎಂಬ ಸಂದೇಶ ಬರುತ್ತಿದೆ.
ಇದನ್ನೂ ಓದಿ: ಮುಂದೆ ಯಾರು ಮುಖ್ಯಸ್ಥ? ಸ್ಥಗಿತಗೊಂಡಿರುವ ಸೋನಿ ಮತ್ತು ಝೀ ವಿಲೀನ ಕಾರ್ಯ
ಖಾತೆ ತೆರೆಯಲು ಏನು ಬೇಕು ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಫೋಟೋವನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಬೇಕು. ಆನ್‌ಲೈನ್‌ನಲ್ಲಿ ಖಾತೆ ತೆರೆಯುವಾಗಲೂ ಇವು ಕಡ್ಡಾಯವಾಗಿರುತ್ತವೆ. ಅಷ್ಟೇ ಅಲ್ಲ ಗ್ರಾಹಕರ ಸಹಿ ಕೂಡ ಕಡ್ಡಾಯ. ಬೇರೆಯವರ ದಾಖಲೆಯನ್ನು ತೆಗೆದುಕೊಂಡು ಸಹಿಯನ್ನೂ ಹಾಕಿಸಿ ಬ್ಯಾಂಕ್‌ಗೆ ಸಲ್ಲಿಸಿ ಖಾತೆ ರಚಿಸುವುದಕ್ಕೆ ಅವಕಾಶ ಇರುವುದಿಲ್ಲ. ಯಾರ ಹೆಸರಲ್ಲಿ ಖಾತೆ ತೆರೆಯಲಾಗುತ್ತದೋ ಆ ವ್ಯಕ್ತಿಯೇ ಖುದ್ದಾಗಿ ಬ್ಯಾಂಕ್ನಲ್ಲಿ ಹಾಜರಿರಬೇಕು. ಈ ಕಟ್ಟುನಿಟ್ಟಿನ ನಿಯಮವನ್ನು ಮೀರಿ ಬ್ಯಾಂಕ್ ಖಾತೆ ಹೇಗೆ ತೆರೆಯಲಾಯಿತು ಎಂಬುದೇ ಸೋಜಿಗ.
ಖಂಡಘೋಷ್ ಪ್ರಕರಣಗಳಲ್ಲಿ ಮುನ್ನೆಲೆಗೆ ಬಂದಿರುವ ಖಾಸಗಿ ಬ್ಯಾಂಕ್‌ಗಳ ಸಂಖ್ಯೆ ಕಡಿಮೆಯೇನಲ್ಲ. ಯಾವುದೇ ಅರ್ಜಿ ಸಲ್ಲಿಸದಿದ್ದರೂ ಖಾತೆಯನ್ನು ಹೇಗೆ ತೆರೆಯಲಾಯಿತು ಎಂದು ತಜ್ಞರು ಆಶ್ಚರ್ಯ ಪಡುತ್ತಿದ್ದಾರೆ!
ಇದನ್ನೂ ಓದಿ: ನವೆಂಬರ್ 30ರ ನಂತರ ಬದಲಾಗುವ ಕೆಲ ಹಣಕಾಸು ನಿಯಮಗಳು, ಕ್ರಮಗಳೇನು? ಇವುಗಳಿಂದ ಪರಿಣಾಮಗಳೇನು ತಿಳಿಯಿರಿ
ಯಾರೋ ಒಬ್ಬರ ಖಾತೆಯನ್ನು ದುರುಪಯೋಗಪಡಿಸಿಕೊಂಡರೂ ಸಹ ಐಪಿ ವಿಳಾಸದ ಮೂಲಕ ಹಿಡಿಯಬಹುದು. ಹಾಗಾಗಿ ಸಿಕ್ಕಿಬೀಳದೇ ಇರಲು ಸಾಧ್ಯವೇ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Fri, 1 December 23