Bank Holidays in November: ನವೆಂಬರ್​ನಲ್ಲಿ 17 ದಿನ ಬ್ಯಾಂಕ್ ರಜಾ; ಯಾವ ದಿನಗಳು ಕಾರ್ಯ ನಿರ್ವಹಿಸಲ್ಲ ಇಲ್ಲಿದೆ ಮಾಹಿತಿ

Bank Holidays in Karnataka 2021: 2021ರ ನವೆಂಬರ್​ ತಿಂಗಳಲ್ಲಿ ಒಟ್ಟು 17 ದಿನ ಬ್ಯಾಂಕ್ ರಜಾ ಇದೆ. ರಿಸರ್ವ್ ಬ್ಯಾಂಕ್ ಇಂಡಿಯಾದ ಅಧಿಕೃತ ಪಟ್ಟಿಯ ಪ್ರಕಾರ ಯಾವ್ಯಾವ ದಿನಗಳು ರಜಾ ಇವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Bank Holidays in November: ನವೆಂಬರ್​ನಲ್ಲಿ 17 ದಿನ ಬ್ಯಾಂಕ್ ರಜಾ; ಯಾವ ದಿನಗಳು ಕಾರ್ಯ ನಿರ್ವಹಿಸಲ್ಲ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Oct 26, 2021 | 12:49 PM

Bank Holidays in November 2021 | ದೇಶದಾದ್ಯಂತ ಇರುವ ಸಾರ್ವಜನಿಕ ಬ್ಯಾಂಕ್​ಗಳು ಮತ್ತು ಖಾಸಗಿ ಬ್ಯಾಂಕ್​ಗಳು ನವೆಂಬರ್ ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚಾಗಿ ರಜಾ ದಿನಗಳನ್ನು ಹೊಂದಿವೆ. 30 ದಿನಗಳಲ್ಲಿ 17 ದಿನಗಳು ರಜಾದಲ್ಲೇ ಕಳೆದುಹೋಗುತ್ತದೆ. ಇದರಲ್ಲಿ ಹಬ್ಬಗಳು, ವಾರಾಂತ್ಯಗಳು ಸಹ ಒಳಗೊಂಡಿವೆ. ಆದ್ದರಿಂದ ಬ್ಯಾಂಕ್​ ಶಾಖೆಗೇ ಹೋಗಿ ಮಾಡುವಂಥ ವಹಿವಾಟು, ವ್ಯವಹಾರಗಳು ಏನಾದರೂ ಇದ್ದಲ್ಲಿ ಆ ಬಗ್ಗೆ ಸರಿಯಾದ ಯೋಜನೆ ರೂಪಿಸಿಕೊಳ್ಳಿ. ಇನ್ನು ಮತ್ತೊಂದು ಅಂಶ ಕೂಡ ಗಮನದಲ್ಲಿ ಇರಿಸಿಕೊಳ್ಳಬೇಕು: ಅದೇನೆಂದರೆ, ಕೆಲವು ರಜಾ ದಿನಗಳು ಆಯಾ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತವೆ. ಎಲ್ಲ ಕಡೆಗೂ ಅದು ಲಾಗೂ ಆಗಲ್ಲ. ಉದಾಹರಣೆಗೆ ಕನ್ನಡ ರಾಜ್ಯೋತ್ಸವ. ನವೆಂಬರ್ 1ನೇ ತಾರೀಕಿನಂದು ಕರ್ನಾಟಕದಲ್ಲಿ ಮಾತ್ರ ಬ್ಯಾಂಕ್​ಗಳಿಗೆ ರಜಾ ದಿನ. ದೇಶದ ಉಳಿದ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮಾಮೂಲಿನಂತೆ ಲಭ್ಯ ಇರುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಪಟ್ಟಿಯ ಪ್ರಕಾರ ರಜಾ ದಿನಗಳು ಅಂತ ಇರುವುದು 11 ದಿನ. ಬಾಕಿ ಉಳಿದವು ವಾರಾಂತ್ಯದ ರಜಾ. ಆರ್‌ಬಿಐನ ರಜಾದಿನಗಳ ಪಟ್ಟಿ ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳ ವರ್ಗಕ್ಕೆ ಬರುತ್ತದೆ. ಆದರೂ ಅಧಿಕೃತ ವರ್ಗೀಕರಣಗಳನ್ನು ಪರಿಗಣಿಸಬೇಕಾದರೆ, ರಜಾದಿನಗಳ ಪಟ್ಟಿಯನ್ನು ಸಾಮಾನ್ಯವಾಗಿ ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು’, ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ರಜಾದಿನಗಳು’ ಮತ್ತು ‘ಬ್ಯಾಂಕುಗಳ’ ಖಾತೆಗಳ ಕ್ಲೋಸಿಂಗ್ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಮಾಡಲಾಗುತ್ತದೆ.

ನವೆಂಬರ್​ ತಿಂಗಳಲ್ಲಿ ರಜಾ ದಿನಗಳ ಪಟ್ಟಿ ಇಲ್ಲಿದೆ: ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುಟ್ – ಬೆಂಗಳೂರು, ಇಂಫಾಲ್

ನವೆಂಬರ್ 3: ನರಕ ಚತುರ್ದಶಿ – ಬೆಂಗಳೂರು

ನವೆಂಬರ್ 4: ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜೆ -ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ , ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್​ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂ

ನವೆಂಬರ್ 5: ದೀಪಾವಳಿ (ಬಲಿ ಪಾಡ್ಯಮಿ)/ವಿಕ್ರಮ್ ಸಂವಂತ್ ಹೊಸ ವರ್ಷದ ದಿನ/ಗೋವರ್ಧನ ಪೂಜೆ – ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ, ಕಾನ್ಪುರ್, ಲಖನೌ, ಮುಂಬೈ, ನಾಗ್ಪುರ.

ನವೆಂಬರ್ 6: ಭಾಯಿ ದುಜ್/ಚಿತ್ರಗುಪ್ತ್ ಜಯಂತಿ/ಲಕ್ಷ್ಮಿ ಪೂಜೆ/ದೀಪಾವಳಿ/ನಿಂಗೋಲ್ ಚಕ್ಕೌಬಾ – ಗ್ಯಾಂಗ್ಟಕ್, ಇಂಫಾಲ್, ಕಾನ್ಪುರ್, ಲಖನೌ, ಶಿಮ್ಲಾ.

ನವೆಂಬರ್ 10: ಛತ್ ಪೂಜೆ/ಸೂರ್ಯ ಪಷ್ಟಿ ದಲಾ ಛಾತ್ (ಸಯನ್ ಅರ್ಧ್ಯ) – ಪಾಟ್ನಾ, ರಾಂಚಿ

ನವೆಂಬರ್ 11: ಛತ್ ಪೂಜೆ – ಪಾಟ್ನಾ

ನವೆಂಬರ್ 12: ವಂಗಲಾ ಉತ್ಸವ – ಶಿಲ್ಲಾಂಗ್

ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತೀಕ ಪೂರ್ಣಿಮಾ – ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್​ಪುರ, ರಾಂಚಿ, ಶಿಮ್ಲಾ ಮತ್ತು ಶ್ರೀನಗರ

ನವೆಂಬರ್ 22: ಕನಕದಾಸ ಜಯಂತಿ – ಬೆಂಗಳೂರು

ನವೆಂಬರ್ 23: ಸೆಂಗ್ ಕುಟ್​ಸೆನೆಮ್ – ಶಿಲ್ಲಾಂಗ್

ವಿವಿಧ ರಾಜ್ಯವಾರು ರಜಾದಿನಗಳ ಹೊರತಾಗಿ ವಾರಾಂತ್ಯದ ಕೆಲವು ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಇವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ

ನವೆಂಬರ್ 7: ಭಾನುವಾರ

ನವೆಂಬರ್ 13: ತಿಂಗಳ ಎರಡನೇ ಶನಿವಾರ

ನವೆಂಬರ್ 14: ಭಾನುವಾರ

ನವೆಂಬರ್ 21: ಭಾನುವಾರ

ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ

ನವೆಂಬರ್ 28: ಭಾನುವಾರ

ಇದನ್ನೂ ಓದಿ: SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು

Published On - 12:27 pm, Tue, 26 October 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ