Bank Holidays: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

|

Updated on: Feb 28, 2024 | 10:42 AM

2024 March, Bank holidays list: ಆರ್​ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ 2024ರ ಮಾರ್ಚ್ ತಿಂಗಳಲ್ಲಿ 14 ದಿನಗಳು ರಜೆ ಇದೆ. ಇದರಲ್ಲಿ ಭಾನುವಾರ, ಶನಿವಾರದ ರಜೆ ಒಳಗೊಂಡಿವೆ. ಮಾರ್ಚ್​ನಲ್ಲಿ ಮಹಾಶಿವರಾತ್ರಿ, ಹೋಳಿ ಮತ್ತು ಗುಡ್ ಫ್ರೈಡೆ ಹಬ್ಬಗಳಿವೆ. ಮಾರ್ಚ್ 22ರಿಂದ 31ರವರೆಗೆ ಎಂಟು ದಿನ ರಜೆಗಳಿವೆ. ಕರ್ನಾಟಕದಲ್ಲಿ ಒಟ್ಟು 9 ರಜೆಗಳಿವೆ. ಇದರಲ್ಲಿ 5 ಭಾನುವಾರದ ರಜೆಗಳೇ ಇವೆ.

Bank Holidays: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ
ಬ್ಯಾಂಕ್ ರಜೆ
Follow us on

ಫೆಬ್ರುವರಿ ಕಳೆದು ಮಾರ್ಚ್ (March 2024) ಸಮೀಪಿಸುತ್ತಿದೆ. ಮಹಾಶಿವರಾತ್ರಿ (Maha Shivaratri) ಸೇರಿದಂತೆ ಸಾಕಷ್ಟು ರಜೆಗಳು ಮಾರ್ಚ್ ತಿಂಗಳಲ್ಲಿ ಇವೆ. ಬ್ಯಾಂಕುಗಳಿಗೆ ಪ್ರತ್ಯೇಕ ರಜಾ ಕ್ಯಾಲಂಡರ್ (Bank holidays list) ಇದೆ. ಸಾಮಾನ್ಯವಾಗಿ ಸರ್ಕಾರಿ ರಜಾ ದಿನಗಳೇ ಬ್ಯಾಂಕುಗಳಿಗೆ ಇರುತ್ತದೆ. ಆದರೆ, ಆರ್​ಬಿಐನಿಂದ ಪ್ರತ್ಯೇಕವಾಗಿ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಈ ಪಟ್ಟಿ ಪ್ರಕಾರ ಮಾರ್ಚ್ ತಿಂಗಳಲ್ಲಿ 14 ದಿನ ರಜೆಗಳಿವೆ. ಇದರಲ್ಲಿ ವಾರದ ರಜೆಗಳೂ ಒಳಗೊಂಡಿವೆ. ಮಾರ್ಚ್ ತಿಂಗಳಲ್ಲಿ ಮಹಾ ಶಿವರಾತ್ರಿ, ಹೋಳಿ, ಗುಡ್ ಫ್ರೈಡೆ ಹಬ್ಬಗಳಿವೆ. ಈ ಹಬ್ಬಗಳು ಆರ್​ಬಿಐನ ಹಾಲಿಡೇ ಕ್ಯಾಲೆಂಡರ್​ನಲ್ಲಿ ಒಳಗೊಂಡಿವೆಯಾದರೂ ಎಲ್ಲಾ ಪ್ರದೇಶಗಳಲ್ಲೂ ರಜೆಗಳಿರುವುದಿಲ್ಲ.

ಮಾರ್ಚ್ 22ರಿಂದ 27ರವರೆಗೂ ಸತತ ಆರು ದಿನಗಳ ಕಾಲ ರಜೆಗಳಿವೆ. ಇದರಲ್ಲಿ ಪಟ್ನಾದಲ್ಲೇ ಐದು ದಿನಗಳ ಕಾಲ ರಜೆ ಇದೆ. ಮಾರ್ಚ್ 22ರಿಂದ 31ರವರೆಗೂ ಇರುವ 10 ದಿನಗಳಲ್ಲಿ ಎಂಟು ದಿನಗಳು ರಜೆ ಇದೆ. ಹೀಗಾಗಿ, ಬ್ಯಾಂಕ್ ಕಾರ್ಯ ಇರುವವರು ತುಸು ಗಮನ ಹರಿಸಬೇಕಾಗುತ್ತದೆ. ಮಾರ್ಚ್ ತಿಂಗಳಲ್ಲಿ ಇರುವ ಶಿವರಾತ್ರಿ, ಹೋಳಿ ಮತ್ತು ಗುಡ್ ಫ್ರೈಡೆ ಹಬ್ಬಗಳ ಪೈಕಿ ಹೋಳಿ ಹಬ್ಬಕ್ಕೆ ಮಾತ್ರ ಕರ್ನಾಟಕದಲ್ಲಿ ರಜೆ ಇರುವುದಿಲ್ಲ. ಶಿವರಾತ್ರಿ ಮತ್ತು ಗುಡ್ ಫ್ರೈಡೆಗೆ ರಜೆಗಳಿವೆ.

ಇದನ್ನೂ ಓದಿ: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

2024ರ ಮಾರ್ಚ್ ತಿಂಗಳ ರಜಾ ದಿನಗಳ ಪಟ್ಟಿ

  • ಮಾರ್ಚ್ 1, ಶುಕ್ರವಾರ: ಛಪಚರ್ ಕುಟ್ (ಮಿಝೋರಾಮ್​ನಲ್ಲಿ ರಜೆ)
  • ಮಾರ್ಚ್ 3: ಭಾನುವಾರ
  • ಮಾರ್ಚ್ 8: ಮಹಾಶಿವರಾತ್ರಿ ಹಬ್ಬ (ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಚಂಡೀಗಡ, ಉತ್ತರಾಖಂಡ್, ತೆಲಂಗಾಣ, ಜಮ್ಮು, ಉತ್ತರಪ್ರದೇಶ, ಕೇರಳ, ಮಹಾರಾಷ್ಟ್ರ, ಛತ್ತೀಸ್​ಗಡ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 9: ಎರಡನೇ ಶನಿವಾರ
  • ಮಾರ್ಚ್ 10: ಭಾನುವಾರ
  • ಮಾರ್ಚ್ 17: ಭಾನುವಾರ
  • ಮಾರ್ಚ್ 22, ಶುಕ್ರವಾರ: ಬಿಹಾರ ದಿವಸ್ (ಬಿಹಾರ ರಾಜ್ಯದಲ್ಲಿ ರಜೆ)
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 25, ಸೋಮವಾರ: ಹೋಳಿ ಹಬ್ಬ (ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚಿ, ಕೋಹಿಮಾ, ಪಟ್ನಾ, ಶ್ರೀನಗರ ಮತ್ತು ತಿರುವನಂತಪುರಂ ಹೊರತುಪಡಿಸಿ ಉಳಿದ ಕಡೆ ಬ್ಯಾಂಕ್ ರಜೆ ಇರುತ್ತದೆ)
  • ಮಾರ್ಚ್ 26, ಮಂಗಳವಾರ: ಹೋಳಿ ಹಬ್ಬ ಎರಡನೇ ದಿನ (ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 27, ಬುಧವಾರ: ಹೋಳಿ ಹಬ್ಬ (ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ (ಅಗಾರ್ಟಲಾ, ಗುವಾಹಟಿ, ಜೈಪುರ್, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ಕಡೆ ರಜೆ)
  • ಮಾರ್ಚ್ 31: ಭಾನುವಾರ

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ

ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

  • ಮಾರ್ಚ್ 3: ಭಾನುವಾರ
  • ಮಾರ್ಚ್ 8: ಮಹಾಶಿವರಾತ್ರಿ ಹಬ್ಬ
  • ಮಾರ್ಚ್ 9: ಎರಡನೇ ಶನಿವಾರ
  • ಮಾರ್ಚ್ 10: ಭಾನುವಾರ
  • ಮಾರ್ಚ್ 17: ಭಾನುವಾರ
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ
  • ಮಾರ್ಚ್ 31: ಭಾನುವಾರ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ