Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ

ಭಾರತದ ಬಹುತೇಕ ರಾಜ್ಯಗಳಲ್ಲಿ ಇಂದಿನಿಂದ 4 ದಿನ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ.

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Aug 20, 2021 | 12:22 AM

ಬ್ಯಾಂಕ್​ ಶಾಖೆಗೆ ಹೋಗಿ ಮಾಡುವಂಥ ಅಥವಾ ಪೂರ್ತಿಗೊಳಿಸಬೇಕಾದ ಜವಾಬ್ದಾರಿಗಳು ಏನಾದರೂ ಇದ್ದವಾ? ಹಾಗಿದ್ದರೆ ಅದಕ್ಕಾಗಿ ಸೋಮವಾರದ ತನಕ ಕಾಯಲೇಬೇಕು ಬಿಡಿ. ಖಾಸಗಿ ವಲಯವೇ ಇರಲಿ ಅಥವಾ ಸರ್ಕಾರಿ ಬ್ಯಾಂಕ್​ಗಳೇ ಆಗಿರಲಿ, ಕೆಲವು ನಗರಗಳಲ್ಲಿ 4 ದಿನಗಳ ಕಾಲ ರಜಾ ಇದೆ. ಆದರೆ ಆನ್​ಲೈನ್​ ಬ್ಯಾಂಕಿಂಗ್ ವಹಿವಾಟುಗಳಿಗೇನೂ ಸಮಸ್ಯೆ ಆಗಲ್ಲ ಮತ್ತು ಎಟಿಎಂ ಮಶೀನ್​ಗಳಿಂದ ಹಣ ತೆಗೆದುಕೊಳ್ಳುವುದಕ್ಕೆ ಏನೂ ತೊಂದರೆ ಇಲ್ಲ. ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಆಯಾ ರಾಜ್ಯಗಳಿಗೆ ಅನ್ವಯ ಆಗುವಂತೆ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಬಹುತೇಕ ರಾಜ್ಯಗಳಿಗೆ ಅನ್ವಯ ಆಗುವ ಸಾಮಾನ್ಯ ರಜಾ ದಿನಗಳು ಅಂದರೆ ಅದು ಮೊಹರಂ ಹಾಗೂ ಕೃಷ್ಣಾಷ್ಟಮಿ.

ಆಗಸ್ಟ್ 19- ಗುರುವಾರ ಆಗಸ್ಟ್ 19ನೇ ತಾರೀಕಿನಂದು ಮೊಹರಂ ಪ್ರಯುಕ್ತ ಬಹುತೇಕ ರಾಜ್ಯಗಳಲ್ಲಿ ರಜಾ ಇದೆ. 17 ನಗರಗಳಲ್ಲಿ ಬ್ಯಾಂಕ್​ಗಳು ಕೆಲಸ ನಿರ್ವಹಿಸುವುದಿಲ್ಲ. ಅಗರ್ತಲ, ಅಹ್ಮದಾಬಾದ್, ಬೆಲಾಪುರ್, ಭೋಪಾಲ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಾಟ್ನಾ, ರಾಯ್​ಪುರ್​, ರಾಂಚಿ ಮತ್ತು ಶ್ರೀನಗರ್ ಒಳಗೊಂಡಿವೆ.

ಆಗಸ್ಟ್ 20- ಶುಕ್ರವಾರ ಆಗಸ್ಟ್ 20ನೇ ತಾರೀಕಿನ ಶುಕ್ರವಾರದಂದು ಕರ್ನಾಟಕ, ಕೇರಳ, ತಮಿಳುನಾಡು ಈ ರಾಜ್ಯಗಳಲ್ಲಿ ಓಣಂ ಪ್ರಯುಕ್ತ ಬ್ಯಾಂಕ್​ಗಳಿಗೆ ರಜಾ ಇರುತ್ತದೆ.

ಆಗಸ್ಟ್ 21- ಶನಿವಾರ ತಿರುಓಣಂ ಪ್ರಯುಕ್ತ ಶನಿವಾರದಂದು ಕೇರಳದಲ್ಲಿ ಬ್ಯಾಂಕ್​ಗಳ ವಹಿವಾಟು ಇರುವುದಿಲ್ಲ.

ಆಗಸ್ಟ್ 22- ಭಾನುವಾರ ಆಗಸ್ಟ್ 22ರ ಭಾನುವಾರ ರಕ್ಷಾಬಂಧನ ಇದೆ. ಅಂದಹಾಗೆ ಎಲ್ಲ ಭಾನುವಾರಗಳಂದು, ಎರಡು ಹಾಗೂ ನಾಲ್ಕನೇ ಶನಿವಾರ ಸಾಮಾನ್ಯ ರಜಾ ದಿನಗಳು.

ಇದನ್ನೂ ಓದಿ: Bank Holidays in August 2021; ಆಗಸ್ಟ್​ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ; ಈ ದಿನಗಳು ವಹಿವಾಟು ಇರಲ್ಲ

RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್​ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್

(Bank Holidays Banks To Remain Shut In 4 Days From Today In These States)

Published On - 11:08 am, Thu, 19 August 21

VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ